ಚಾಮರಾಜನಗರ: ಜಿಲ್ಲೆಯಲ್ಲಿ ಮಂಗಳವಾರ 760 ಮಾದರಿಗಳ ಪರೀಕ್ಷೆಯಲ್ಲಿ 35 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ಪರೀಕ್ಷೆಗೊಳಪಟ್ಟಿರುವ ಮಾದರಿಗಳಿಗೆ ಹೋಲಿಸಿದರೆ ಕೋವಿಡ್ ಪ್ರಕರಣಗಳು ಕಡಿಮೆ ಇರುವುದು ಸಮಾಧಾನಕರ ಅಂಶವಾಗಿದೆ. ಇದೇ ಸಮಯಕ್ಕೆ 24 ಮಂದಿ ಗುಣಮುಖರಾಗಿದ್ದಾರೆ. ಇಬ್ಬರು ಕೋವಿಡ್ ಸೋಂಕಿತರು ಮೃತಪಟ್ಟಿದ್ದಾರೆ.
ಚಾಮರಾಜನಗರ ತಾಲೂಕಿನಿಂದ 19, ಗುಂಡ್ಲುಪೇಟೆ ತಾಲೂಕಿನಿಂದ 9, ಕೊಳ್ಳೇಗಾಲ ತಾಲೂಕಿನಿಂದ 6, ಹನೂರು ತಾಲೂಕಿನಿಂದ 1 ಪ್ರಕರಣ ವರದಿಯಾಗಿವೆ.
ತಾಲೂಕಿನ ಕುದೇರು ಗ್ರಾಮದ 30 ವರ್ಷದ ಯುವಕ ಆ. 28ರಂದು ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಸೋಮವಾರ ರಾತ್ರಿ ಮೃತಪಟ್ಟಿದ್ದಾರೆ. ತಾಲೂಕಿನ ಗೂಳೀಪುರ ಗ್ರಾಮದ 85 ವರ್ಷದ ವೃದ್ಧರು ಹೃದೊ್ರೀಗ, ಕಿಡ್ನಿ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದರು. ಸೋಮವಾರ ಮೃತಪಟ್ಟಿದ್ದಾರೆ. ನಿಧನದ ಬಳಿಕ ಪರೀಕ್ಷಿಸಿದಾಗ ಕೋವಿಡ್ ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.
ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 2406 ಪ್ರಕರಣಗಳು ಪತ್ತೆಯಾಗಿವೆ. ಇವರಲ್ಲಿ 1852 ಮಂದಿ ಗುಣಮುಖರಾಗಿದ್ದಾರೆ. 505 ಪ್ರಕರಣಗಳು ಸಕ್ರಿಯವಾಗಿದ್ದು, ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ 18 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 186 ಮಂದಿ ಹೋಂ ಐಸೋಲೇಷನ್‌ನಲ್ಲಿದ್ದಾರೆ.
ಇಂದಿನ ಪ್ರಕರಣಗಳು -35
ಇಂದು ಗುಣಮುಖ -24
ಒಟ್ಟು ಗುಣಮುಖ -1852
ಇಂದಿನ ಸಾವು -02
ಒಟ್ಟು ಸಾವು -49
ಸಕ್ರಿಯ ಪ್ರಕರಣಗಳು -505
ಒಟ್ಟು ಸೋಂಕಿತರು -2406