ಚಾಮರಾಜನಗರ: ಜಿಲ್ಲೆಯಲ್ಲಿ ಮಂಗಳವಾರ 836 ಗಂಟಲು ದ್ರವ ಮಾದರಿಗಳ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ 42 ಪ್ರಕರಣಗಳು ಕೋವಿಡ್-19 ಪಾಸಿಟಿವ್ ಆಗಿವೆ. ಪರೀಕ್ಷಾ ಮಾದರಿಗಳ ಸಂಖ್ಯೆ ಹೆಚ್ಚಿದ್ದು, ವರದಿಯಾಗಿರುವ ಪ್ರಕರಣಗಳ ಸಂಖ್ಯೆ ಕಡಿಮೆ ಆಗಿರುವುದು ಕೊಂಚ ಸಮಾಧಾನಕರ ಸಂಗತಿಯಾಗಿದೆ. ಅಲ್ಲದೇ 52 ಮಂದಿ ಗುಣಮುಖರಾಗಿದ್ದಾರೆ.
ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳು 403 ಇವೆ. ಒಟ್ಟು ಸೋಂಕಿತರು 1682. ಇವರಲ್ಲಿ 1248 ಮಂದಿ ಗುಣಮುಖರಾಗಿದ್ದಾರೆ.
ಇದುವರೆಗೆ ಕೋವಿಡ್‌ನಿಂದ ಒಟ್ಟು 31 ಮಂದಿ ಮೃತಪಟ್ಟಿದ್ದಾರೆ. 30 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 149 ಮಂದಿ ಮನೆಗಳಲ್ಲಿ ಪ್ರತ್ಯೇಕವಾಗಿದ್ದು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಮಂಗಳವಾರ, ಚಾಮರಾಜನಗರ ತಾಲೂಕಿನ 22, ಕೊಳ್ಳೇಗಾಲ ತಾಲೂಕಿನ 9, ಗುಂಡ್ಲುಪೇಟೆ ತಾಲೂಕಿನ 8, ಯಳಂದೂರು ತಾಲೂಕಿನ 2, ಹನೂರು ತಾಲೂಕಿನ 1 ಪ್ರಕರಣಗಳಿವೆ.