Advertisement

ಕಾರು ಪಲ್ಟಿ: ತಾತ ಮತ್ತು 3 ತಿಂಗಳ ಮೊಮ್ಮಗು ಸಾವು

08:26 PM Dec 25, 2020 | Mithun PG |

ಚಾಮರಾಜನಗರ: ತಾಲೂಕಿನ ಬೆಂಡರವಾಡಿ ಗ್ರಾಮದ ಬಳಿ, ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆಯಲ್ಲೆ ಉರುಳಿಬಿದ್ದ ಪರಿಣಾಮ ಚಾಲಕ ಹಾಗೂ 3 ತಿಂಗಳ ಹಸುಳೆ ಮೃತಪಟ್ಟಿರುವ ಘಟನೆ ನಡೆದಿದೆ.

Advertisement

ತಮಿಳುನಾಡಿನ ಕೊಯಮತ್ತೂರು ನಗರದ ನಿವಾಸಿ ಯಾಸಿನ್ ವಜೀರ್ (50) ಹಾಗೂ ಇವರ ಮೊಮ್ಮಗು 3 ತಿಂಗಳ ಹಸುಳೆ ಹೀನಾ ಫಾತಿಮಾ ಮೃತರು. ಕಾರಿನಲ್ಲಿದ್ದ ಮೃತ ಯಾಸೀನ್ ವಜೀರ್‌ರ ಪತ್ನಿ ರಜಿಯಾ ಹಾಗೂ ಮಗುವಿನ ತಾಯಿ ಸಾನೋಫರ್ ನಸ್ರೀನ್ ಹಾಗೂ ಸಫಿನ್ ಎಂಬುವರು ಗಾಯಗೊಂಡಿದ್ದು, ಇವರನ್ನು ಕೊಯಮತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೊಯಮತ್ತೂರಿನ ವಜೀರ್ ತನ್ನ ಕುಟುಂಬದವರೊಂದಿಗೆ ಶುಕ್ರವಾರ ಚಾಮರಾಜನಗರ ಮಾರ್ಗವಾಗಿ ಬಂಧುಗಳ ಮನೆಯ ಮದುವೆಗೆ ಮೈಸೂರಿಗೆ ತೆರಳುತ್ತಿದ್ದರು.  ಚಾಮರಾಜನಗರ ನಂಜನಗೂಡು ಹೆದ್ದಾರಿಯಲ್ಲಿ, ಮುತ್ತಿಗೆ ಮತ್ತು ಬೆಂಡರವಾಡಿ ಗ್ರಾಮದ ನಡುವೆ, ಕಾರು ನಿಯಂತ್ರಣ ತಪ್ಪಿ ಉರುಳಿಬಿದ್ದಿತು. ಇದರಿಂದಾಗಿ ಕಾರು ಚಾಲನೆ ಮಾಡುತ್ತಿದ್ದ ವಜೀರ್ ಹಾಗೂ ಮಗು ಸ್ಥಳದಲ್ಲೇ ಮೃತಪಟ್ಟರು.

ಇದನ್ನೂ ಓದಿ:  ಬಂಟ್ವಾಳ : ತಾಂತ್ರಿಕ ದೋಷದಿಂದ ಕೆಟ್ಟು ನಿಂತ ಲಿಫ್ಟ್ : ನಾಲ್ವರು ಮಕ್ಕಳು ಅಪಾಯದಿಂದ ಪಾರು

ಅಪಘಾತದಲ್ಲಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next