Advertisement

Chamarajanagar; ಜೋಡಿ ರಸ್ತೆ ದುರವಸ್ಥೆ; ದ್ವಿಚಕ್ರ ವಾಹನ ಸವಾರರ ಪರದಾಟ

09:01 PM May 30, 2023 | Team Udayavani |

ಚಾಮರಾಜನಗರ: ನಗರದ ಬಿ. ರಾಚಯ್ಯ ಜೋಡಿ ರಸ್ತೆಯ ಅವ್ಯವಸ್ಥೆ ಮಂಗಳವಾರ ಮಧ್ಯಾಹ್ನದ ನಂತರ ಸುರಿದ ಮಳೆಯಿಂದ ಮತ್ತೊಮ್ಮೆ ಬಯಲಾಯಿತು. ಕೇವಲ ಅರ್ಧ ಗಂಟೆ ಸುರಿದ ಮಳೆಗೆ ಜೋಡಿ ರಸ್ತೆ ಕಾಲುವೆಯಾಯಿತು. ವಾಹನ ಸವಾರರು ಕೆಳಗೆ ಬಿದ್ದರು. ಅನೇಕರು ಪಡಿಪಾಟಲು ಅನುಭವಿಸಿದರು.

Advertisement

ಮಳೆ ಬಂದಾಗ ನಗರದ ಬಿ. ರಾಚಯ್ಯ ಜೋಡಿ ರಸ್ತೆಯಲ್ಲಾಗುವ ಅವಾಂತರದ ಬಗ್ಗೆ ಮಂಗಳವಾರದ ಉದಯವಾಣಿಯಲ್ಲಿ ವರದಿ ಪ್ರಕಟವಾಗಿತ್ತು. ಕಾಕತಾಳೀಯವೆಂಬಂತೆ ಮಂಗಳವಾರ ಮಧ್ಯಾಹ್ನದ ಬಳಿಕ ಸುರಿದ ಅರ್ಧ ಗಂಟೆಯ ಮಳೆಗೇ ಜೋಡಿ ರಸ್ತೆಯ ಅವ್ಯವಸ್ಥೆ ಮತ್ತೊಮ್ಮೆ ದರ್ಶನವಾಯಿತು.

ಮಧ್ಯಾಹ್ನ 3 ಗಂಟೆಯ ಸುಮಾರಿಗೆ ನಗರದಲ್ಲಿ ಮಳೆ ಆರಂಭವಾಗಿ 3.30ರವರೆಗೆ ಜೋರಾಗಿ ಸುರಿಯಿತು. ನಗರದ ಬಿ. ರಾಚಯ್ಯ ಜೋಡಿ ರಸ್ತೆಯಲ್ಲ ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲದ ಕಾರಣ, ಹಾಗೂ ಜಿಲ್ಲಾಧಿಕಾರಿ ಕಚೇರಿ ಎದುರು ರಾಜಕಾಲುವೆ ಅವ್ಯವಸ್ಥೆಯಿಂದಾಗಿ ಮಳೆ ನೀರು, ರಾಜಕಾಲುವೆ ನೀರು ಜಿಲ್ಲಾಧಿಕಾರಿ ಕಚೇರಿ ಎದುರು ಕಾಲುವೆಯಂತೆ ಹರಿಯಲಾರಂಭಿಸಿತು. ಮಳೆ ನಿಂತ ಬಳಿಕ ವಾಹನ ಸವಾರರ ಓಡಾಟ ಆರಂಭವಾಯಿತು. ರಸ್ತೆಯ ಎರಡೂ ಕಡೆಯಿಂದ ಬಂದ ವಾಹನ ಸವಾರರು ಜಿಲ್ಲಾಡಳಿತ ಭವನದ ಗೇಟ್ ಬಳಿ ಕೆರೆಯಂತೆ ನಿಂತ ನೀರನ್ನು ನೋಡಿ ಹೌಹಾರಿದರು.

ಈ ನೀರಿನಲ್ಲೇ ತಮ್ಮ ದ್ವಿಚಕ್ರ ವಾಹನಗಳನ್ನು ಓಡಿಸಿಕೊಂಡು ಹೋದ ಕೆಲವರು ವಾಹನಗಳ ಚಕ್ರ ಜಾರಿ ಕೆಳಗೆ ಬಿದ್ದರು. ಮಳೆ ನೀರಾದರೆ ಸರಿ. ಆದರೆ ಚರಂಡಿಯ ಬಗ್ಗಡದ ನೀರು ನಿಂತಿದ್ದರಿಂದಾಗಿ ಜನರು ಫಜೀತಿ ಅನುಭವಿಸಿದರು.

ಜಿಲ್ಲಾಡಳಿತ ಭವನದ ಗೇಟಿನ ಮುಂಭಾಗ ಈ ಮಳೆ ನೀರು ಚರಂಡಿ ಸೇರುವಂತೆ ಕಬ್ಬಿಣದ ಕಂಬಿಗಳನ್ನು ನೆಲಕ್ಕೆ ಹಾಕಲಾಗಿದೆ. ಮಳೆ ನೀರು ಬಂದು ಆ ಕಬ್ಬಿಣದ ಕಂಬಿಗಳು ಮುಚ್ಚಿ ಹೋಗಿ, ದ್ವಿಚಕ್ರ ವಾಹನ ಸವಾರರು ಕಂಬಿಯ ಮೇಲೆ ವಾಹನ ಚಲಾಯಿಸಿ ಕೆಳಗೆ ಬೀಳಬೇಕಾಯಿತು. ಅನೇಕರು ಬಿದ್ದು ಕೈಕಾಲು ಗಾಯ ಮಾಡಿಕೊಂಡರು.

Advertisement

ಸಮಸ್ಯೆ ಬಗೆಹರಿಸಲು ನಾಲ್ಕು ಬಾರಿ ಗೆದ್ದಿರುವ ಶಾಸಕರು ವಿಫಲ ಎಂದು ಸಾಮಾಜಿಕ ಜಾಲತಾಣಗಳಲ್ಲ ಟೀಕೆ: ಪ್ರತಿ ಬಾರಿ ನಗರದಲ್ಲಿ ಮಳೆ ಬಂದಾಗಲೂ ಬಿ. ರಾಚಯ್ಯ ಜೋಡಿ ರಸ್ತೆಯಲ್ಲಿ ಈ ಅವಾಂತರ ಮಾಮೂಲಿಯಾಗಿದೆ. ಇದನ್ನು ಸರಿಪಡಿಸದ ಜನಪ್ರತಿನಿಧಿಗಳನ್ನು ಜನರು ನಿಂದಿಸಿದರು. ಸಾಮಾಜಿಕ ಜಾಲತಾಣಗಳಲ್ಲಿ ಇದರ ಬಗ್ಗೆ ಕಿಡಿಕಾರಿದರು. ಸತತವಾಗಿ ನಾಲ್ಕು ಬಾರಿ ಗೆದ್ದು ಬಂದರೂ ಶಾಸಕ ಪುಟ್ಟರಂಗಶೆಟ್ಟಿಯವರು ಈ ಸಮಸ್ಯೆ ಬಗೆಹರಿಸಲು ವಿಫಲರಾಗಿದ್ದಾರೆ ಎಂದು ನಾಗರಿಕರು ಜಾಲತಾಣಗಳಲ್ಲಿ ಆಕೊ್ರೀಶ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next