ಯಳಂದೂರು: ಈಗ ಬಿರು ಬಿಸಿಲು ಹೆಚ್ಚಾಗಿದೆ. ಜಾನುವಾರುಗಳಿಗೆ ಮೇವಿನ ಕೊರತೆ ಕಾಣಿಸಿಕೊಂಡಿದೆ. ಇಂತಹ ಸಂದರ್ಭದಲ್ಲಿ ಕಬ್ಬಿನ ತೊಂಡೆಯನ್ನು ಈ ಭಾಗದ ಹೈನುಗಾರರು ಹೆಚ್ಚು ಅವಲಂಬಿಸಿದ್ದಾರೆ. ಆದರೆ, ಈ ಬಾರಿ ತಾಲೂಕಿನಲ್ಲಿ ಕಬ್ಬಿನ ಬೆಳೆಯೂ ಕಡಿಮೆಯಾಗಿದ್ದು, ಕಬ್ಬಿನ ತೊಂಡೆಗೆ ಬೇಡಿಕೆ ಹೆಚ್ಚಾಗಿದೆ.
Advertisement
ಈ ಹಿಂದೆ ಕಬ್ಬಿನ ತೊಂಡೆಯನ್ನು ಕಬ್ಬು ಕಟಾವು ಮಾಡುವ ವೇಳೆ ಕಂತೆಗೆ 10 ರೂ.ನಂತೆ ಮಾರಾಟ ಮಾಡಲಾಗುತ್ತಿತ್ತು. ಆದರೆ, ಈಗ ಹೈನುಗಾರರೇ ಕಬ್ಬು ಕಟಾವು ಮಾಡುವ ಸ್ಥಳಕ್ಕೆ ತೆರಳಿ, ತಮ್ಮ ವಾಹನಗಳನ್ನು ಇಲ್ಲಿಗೆ ತಂದು ಕಂತೆಗೆ 50 ರೂ. ಹಣ ನೀಡಿ ಇದನ್ನು ತುಂಬಿಸಿಕೊಂಡು ತಮ್ಮ ಜಾನುವಾರುಗಳಿಗೆ ಮೇವು ತರುವ ಸವಾಲು ಎದುರಾಗಿದೆ.
Related Articles
Advertisement
ಕೆರೆಕಟ್ಟೆಗಳಿಗೆ ಕಿಡಿಗೇಡಿಗಳಿಂದ ಬೆಂಕಿ: ತಾಲೂಕಿನಲ್ಲಿ ಪ್ರತಿ ಗ್ರಾಮದಲ್ಲೂ ಒಂದೊಂದು ಕೆರೆ ಇದೆ.ಈ ಕೆರೆಗಳಲ್ಲಿ ಸಾಮಾನ್ಯವಾಗಿ ಬೇಸಿಗೆಯಲ್ಲಿ ನೀರಿನ ಪ್ರಮಾಣ ಕಡಿಮೆ ಇರುತ್ತದೆ. ಆದರೆ, ಈ ಬಾರಿ ಬಹುತೇಕ ಕೆರೆಗಳು ಬತ್ತಿ ಹೋಗಿವೆ. ಬತ್ತಿ ಹೋಗಿರುವ ಕೆರೆಗಳಲ್ಲಿ ಇರುವ ಗಿಡಗಳಿಗೆ ಕೆಲವು ಕಿಡಿಗೇಡಿಗಳು ಬೆಂಕಿ ಹಚ್ಚಿ ಇದನ್ನು ನಾಶ ಮಾಡುವುದರಿಂದ ಇಲ್ಲಿದ್ದ ಅಲ್ಪ ಪ್ರಮಾಣದ ಮೇವು ಕೂ ಡ ಸುಟ್ಟು ಕರಕಲಾಗಿದ್ದು, ದನಗಾಹಿಗಳ ನಿದ್ದೆಗೆಡಿಸಿದೆ.
ಪಶು ಇಲಾಖೆ ಮೇವು ಕಲ್ಪಿಸಲಿ: ತಾಲೂಕಿನಲ್ಲಿ 15 ಸಾವಿರಕ್ಕಿಂತಲೂ ಹೆಚ್ಚಿನ ಜಾನುವಾರುಗಳಿವೆ. ಪ್ರಸ್ತುತ ಹಸಿರು ಮೇವಿನ ಕೊರತೆ ಹೆಚ್ಚಾಗಿದೆ. ಈಗಾಗಲೇ ಮೇವಿನ ಬೀಜದ ಪ್ಯಾಕೇಟ್‌ಗಳನ್ನು ಹಲವರಿಗೆ ಪಶು ಇಲಾಖೆಯಿಂದ ವಿತರಿಸಲಾಗಿದೆ. ಆದರೆ, ಜಮೀನು ಇಲ್ಲದ ಹೈನುಗಾರರು ಇದನ್ನು ಬೆಳೆಯಲು ಸಾಧ್ಯವಾಗಿಲ್ಲ. ಇದರೊಂದಿಗೆ ಪಂಪ್ ಸೆಟ್ ಇಲ್ಲದ ರೈತರೂ ಇದನ್ನು ಬೆಳೆಯಲು ನೀರಿನ ಅಭಾವದಿಂದ ತೊಂದರೆಯಾಗಿದೆ. ಈ ನಿಟ್ಟಿನಲ್ಲಿ ಇಲಾಖೆಯ ಹಸಿರು ಮೇವನ್ನು ಹೈನುಗಾರರಿಗೆ ರಿಯಾಯಿತಿ ದರದಲ್ಲಿ ನೀಡುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದು ಮಲ್ಲಿಕಾರ್ಜುನ, ಮನು ಸೇರಿದಂತೆ ಅನೇಕರು ಆಗ್ರಹಿಸಿದ್ದಾರೆ.
ನಮ್ಮ ಇಲಾಖೆ ವತಿಯಿಂದ 320ಕ್ಕೂ ಹೆಚ್ಚಿನ ಜನರಿಗೆ ಮೇವಿನ ಬಿತ್ತನೆ ಬೀಜದ ಕಿಟ್ ವಿತರಿಸಲಾಗಿದೆ. ಈಗಾಗಲೇ ಇದು ಕಟಾವಿನ ಹಂತಕ್ಕೆ ಬಂದಿದೆ. ನಮ್ಮ ಭಾಗದಲ್ಲಿ ಮೇವಿನ ಕೊರೆತ ಹೆಚ್ಚಾಗಿಲ್ಲ. ಹೈನುಗಾರರು ಆತಂಕಪಡುವ ಅಗತ್ಯವಿಲ್ಲ.●ಡಾ.ಶಿವರಾಜ್, ಸಹಾಯಕ ನಿರ್ದೇಶಕರು,
ಪಶು ಇಲಾಖೆ *ಫೈರೋಜ್ ಖಾನ್