Advertisement

ಚಾಮರಾಜನಗರ ಜಿಲ್ಲೆ: ಇಬ್ಬರಿಗೆ ಸೋಂಕು

05:02 AM Jun 23, 2020 | Lakshmi GovindaRaj |

ಚಾಮರಾಜನಗರ: ಜಿಲ್ಲೆಯಲ್ಲಿ ಸೋಮವಾರ 2 ಕೋವಿಡ್‌ ಪ್ರಕರಣ ವರದಿಯಾಗಿದೆ. ನಗರದ ತಾಲೂಕು ಕಚೇರಿಯಲ್ಲಿ ಭೂ ಮಾಪಕರಾಗಿರುವ 36 ವರ್ಷದ ಮಹಿಳೆ ಹಾಗೂ ಗುಂಡ್ಲುಪೇಟೆಯ ಇನ್ನೋರ್ವ ಚಾಲಕನಿಗೆ ಕೋವಿಡ್‌  ದೃಢಪಟ್ಟಿದೆ. ಈ ಎರಡು ಪ್ರಕರಣಗಳ ಬಳಿಕ ಈಗ ಜಿಲ್ಲೆಯಲ್ಲಿ ಒಟ್ಟು ನಾಲ್ವರಿಗೆ ಕೋವಿಡ್‌ ಸೋಂಕು ತಗುಲಿದ್ದು, ಅವರಲ್ಲಿ ಮುಂಬೈ ನಿವಾಸಿ ಗುಣಮುಖನಾಗಿ ಮನೆಗೆ ತೆರಳಿದ್ದಾನೆ.

Advertisement

ಮೂರು ಸಕ್ರಿಯ ಪ್ರಕರಣಗಳಿವೆ. ಮಹಿಳೆ ನಗರದ  ಭಗೀರಥ ನಗರ ಹೊಸ ಬಡಾವಣೆ ನಿವಾಸಿಯಾಗಿದ್ದು, ಆ ಪ್ರದೇಶವನ್ನು ಕಂಟೈನ್‌ಮೆಂಟ್‌ ವಲಯ ಎಂದು ಘೋಷಿಸಿ ಸೀಲ್‌ಡೌನ್‌ ಮಾಡ ಲಾಗಿದೆ. ಆ ರಸ್ತೆಯಲ್ಲಿ ಬ್ಯಾರಿಕೇಡ್‌ ಹಾಕಿ ಜನರ ಓಡಾಟ ನಿರ್ಬಂಧಿಸಲಾಗಿದೆ. ತಾಲೂಕು  ಕಚೇರಿಯನ್ನು ಸ್ಯಾನಿಟೈಸ್‌ ಮಾಡಿ, ಮಹಿಳೆ ಕರ್ತವ್ಯ ನಿರ್ವಹಿಸುತ್ತಿದ್ದ ಕೊಠಡಿಗೆ ಬೀಗ ಹಾಕಲಾಗಿದೆ. ಸೋಂಕು ದೃಢಪಟ್ಟಿರುವುದನ್ನು ಜಿಲ್ಲಾಡಳಿತ ಅಧಿಕೃತವಾಗಿ ಘೋಷಣೆ ಮಾಡಿಲ್ಲ.

ಆದರೆ, ಆ ಮಹಿಳೆಯನ್ನು ಸೋಮವಾರ ಸಂಜೆ  ತಾಲೂಕು ಕಚೇರಿಯಿಂದ ಆ್ಯಂಬುಲೆನ್ಸ್‌ ಮೂಲಕ ನಗರದ ಕೋವಿಡ್‌ ಆಸ್ಪತ್ರೆಗೆ ಕರೆ ತರಲಾಗಿದೆ. ತಾಲೂಕು ಕಚೇರಿ ಹಾಗೂ ಸುತ್ತಮುತ್ತಲಿನ ಪ್ರದೇಶಕ್ಕೆ ಸೋಂಕು ನಿವಾರಕ ಸಿಂಪಡಿಸಲಾಗಿದೆ. ಈ ಮಹಿಳೆಗೆ ವಾರದ ಹಿಂದೆ ಜ್ವರ,  ತಲೆನೋವು ಕಾಣಿಸಿಕೊಂಡಿದ್ದು, ಖಾಸಗಿ ವೈದ್ಯರಲ್ಲಿ ಚಿಕಿತ್ಸೆ ಪಡೆದಿದ್ದರು. ಬಳಿಕ ನಗರದ ಫೀವರ್‌ ಕ್ಲಿನಿಕ್‌ನಲ್ಲಿ ರ್‍ಯಾಂಡಮ್‌ ಟೆಸ್ಟ್‌ ಮಾಡಿಸಿಕೊಂಡಿದ್ದರು. ಅದರ ಫ‌ಲಿತಾಂಶ ಸೋಮವಾರ ಕೊರೊನಾ ಸೋಂಕು ದೃಢಪಟ್ಟಿದೆ.

ಚಾಲಕನಿಗೆ ಸೋಂಕು: ಗುಂಡ್ಲುಪೇಟೆಯ ಹೌಸಿಂಗ್‌ ಬೋರ್ಡ್‌ ಕಾಲೋನಿ ನಿವಾಸಿ ಸರಕು ಸಾಗಣೆ ವಾಹನದ ಚಾಲಕನಿಗೆ ಸೋಂಕು ತಗುಲಿರುವುದು ಸೋಮವಾರ ದೃಢ ಪಟ್ಟಿದೆ. ಈತ ಈ ಮುಂಚೆ ಸೋಂಕಿಗೊಳಗಾಗಿದ್ದ ಚಾಲಕನ  ಸಹವರ್ತಿಯಾಗಿದ್ದ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next