ಚಾಮರಾಜನಗರ: ಭಾನುವಾರ ಜಿಲ್ಲೆಯಲ್ಲಿ 19 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ಈ ಮೂಲಕ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಶತಕದ ಗಡಿ ದಾಟಿದೆ. ಇದುವರೆಗೆ ಜಿಲ್ಲೆಯಲ್ಲಿ 102 ಮಂದಿ ಸೋಂಕಿಗೊಳಗಾಗಿದ್ದು, 98 ಸಕ್ರಿಯ ಪ್ರಕರಣಗಳಿವೆ. ನಾಲ್ವರು ಗುಣಮುಖರಾಗಿದ್ದಾರೆ. ಭಾನುವಾರ ವರದಿಯಾಗಿರುವ ಪ್ರಕರಣಗಳಲ್ಲಿ 606 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು.
ಇದರಲ್ಲಿ 587 ನೆಗೆಟಿವ್, 19 ಪಾಸಿಟಿವ್ ಬಂದಿವೆ. ಭಾನುವಾರದ ಪ್ರಕರಣಗಳಲ್ಲಿ 12 ಗುಂಡ್ಲುಪೇಟೆ ಪಟ್ಟಣ ಮತ್ತು ತಾಲೂಕಿಗೆ ಸೇರಿದ್ದರೆ, ಹನೂರು, ಚಾಮರಾಜನಗರ, ಯಳಂದೂರು ತಾಲೂಕಿನಲ್ಲಿ ತಲಾ 2 ಪ್ರಕರಣ, ಕೊಳ್ಳೇಗಾಲ ತಾಲೂಕಿಗೆ ಒಂದು ಪ್ರಕರಣ ಸೇರಿದೆ. ಸೋಂಕಿತರು ನಗರದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರೋಗಿ ಸಂಖ್ಯೆ 85: 38 ವರ್ಷದ ಪುರುಷ ಯಳಂದೂರು ತಾಲೂಕಿನ ಮದ್ದೂರು.
ಸಂಖ್ಯೆ 86: 24 ವರ್ಷದ ಯುವತಿ ಹನೂರು ತಾಲೂಕಿನ ಲೊಕ್ಕನಹಳ್ಳಿ. ಸಂಖ್ಯೆ 87: 37 ವರ್ಷದ ಮಹಿಳೆ ಗುಂಡ್ಲುಪೇಟೆ. ಸಂಖ್ಯೆ 88: 35 ವರ್ಷದ ಮಹಿಳೆ ಗುಂಡ್ಲುಪೇಟೆ ತಾಲೂಕಿನ ಕೆಲಸೂರು. ಸಂಖ್ಯೆ 89: 75 ವರ್ಷದ ವೃದ್ಧ ಗುಂಡ್ಲುಪೇಟೆ. ಸಂಖ್ಯೆ 90: 48 ವರ್ಷದ ಪುರುಷ ಚಾಮರಾಜನಗರ. ಸಂಖ್ಯೆ 91: 45 ವರ್ಷದ ಮಹಿಳೆ, ಗುಂಡ್ಲುಪೇಟೆ ತಾಲೂಕು ಕಬ್ಬಳ್ಳಿ, ಸಂಖ್ಯೆ 92: 23 ವರ್ಷದ ಯುವಕ ಕೊಳ್ಳೇಗಾಲ. ಸಂಖ್ಯೆ 93:65 ವರ್ಷದ ವೃದ್ಧೆ ಯಳಂದೂರು ತಾಲೂಕಿನ ಗಣಗನೂರು. ಸಂಖ್ಯೆ 94: 50 ವರ್ಷದ ಮಹಿಳೆ ಗುಂಡ್ಲುಪೇಟೆ.
ಸಂಖ್ಯೆ 95: 11 ವರ್ಷದ ಬಾಲಕ ಗುಂಡ್ಲುಪೇಟೆ. 96: 17 ವರ್ಷದ ಯುವತಿ ಗುಂಡ್ಲುಪೇಟೆ. ಸಂಖ್ಯೆ 97: 65 ವರ್ಷದ ವೃದ್ಧೆ ಗುಂಡ್ಲುಪೇಟೆ. ಸಂಖ್ಯೆ 98: 39 ವರ್ಷದ ಮಹಿಳೆ ಗುಂಡ್ಲುಪೇಟೆ. ಸಂಖ್ಯೆ 99: 26 ವರ್ಷದ ಯುವತಿ, ಗುಂಡ್ಲುಪೇಟೆ. ಸಂಖ್ಯೆ 100: 22 ವರ್ಷದ ಯುವತಿ ಗುಂಡ್ಲುಪೇಟೆ. ಸಂಖ್ಯೆ 101: 2 ವರ್ಷದ ಮಗು, ಚಾಮರಾಜನಗರ. ಸಂಖ್ಯೆ 102: 45 ವರ್ಷದ ಮಹಿಳೆ, ಹನೂರು ತಾಲೂಕು ಚಿಕ್ಕಮಾಲಾಪುರ. ಸಂಖ್ಯೆ 103: 65 ವರ್ಷದ ವೃದ್ಧ ಗುಂಡ್ಲುಪೇಟೆ.