Advertisement

ಚಾಮರಾಜನಗರದಲ್ಲಿ 10 ಕೋವಿಡ್ ಪ್ರಕರಣಗಳು ದೃಢ!

06:22 PM Jul 12, 2020 | sudhir |

ಚಾಮರಾಜನಗರ: ಜಿಲ್ಲೆಯಲ್ಲಿ ಭಾನುವಾರ 300 ಗಂಟಲು ದ್ರವ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಇವುಗಳಲ್ಲಿ 10 ಪ್ರಕರಣಗಳು ಕೋವಿಡ್ ಪಾಸಿಟಿವ್ ಆಗಿವೆ.

Advertisement

ಜಿಲ್ಲೆಯಲ್ಲಿ 96 ಸಕ್ರಿಯ ಕೋವಿಡ್ ಪ್ರಕರಣಗಳಿದ್ದು, ಒಟ್ಟು 173 ದೃಢೀಕೃತ ಪ್ರಕರಣಗಳಿದ್ದು, ಇದರಲ್ಲಿ 77 ಮಂದಿ ಗುಣಮುಖರಾಗಿದ್ದಾರೆ. ಓರ್ವ ಸಾವಿಗೀಡಾಗಿದ್ದು, ಮೂವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಯೋಗಾಲಯಕ್ಕೆ ಕಳುಹಿಸಿರುವ ಮಾದರಿಗಳಲ್ಲಿ 1397 ಮಾದರಿಗಳ ಫಲಿತಾಂಶ ನಿರೀಕ್ಷಿಸಲಾಗಿದೆ.

ಭಾನುವಾರದ 10 ಪ್ರಕರಣಗಳಲ್ಲಿ, 4 ಪ್ರಕರಣಗಳು ಕೊಳ್ಳೇಗಾಲ ತಾಲೂಕಿಗೆ, 3 ಪ್ರಕರಣಗಳು ಯಳಂದೂರು ತಾಲೂಕಿಗೆ, 2 ಪ್ರಕರಣಗಳು ಚಾಮರಾಜನಗರ ತಾಲೂಕಿಗೆ ಹಾಗೂ 1 ಪ್ರಕರಣ ಗುಂಡ್ಲುಪೇಟೆ ತಾಲೂಕಿಗೆ ಸೇರಿದೆ.

ಕೊಳ್ಳೇಗಾಲ ತಾಲೂಕಿನ ಪ್ರಕರಣಗಳ ವಿವರ: 58 ವರ್ಷದ ವ್ಯಕ್ತಿ ಕೊಂಗರಹಳ್ಳಿ, 26 ವರ್ಷದ ಯುವಕ ಕಣ್ಣೂರು, 19 ವರ್ಷದ ಯುವಕ ಇಕ್ಕಡಹಳ್ಳಿ, 25 ವರ್ಷದ ಯುವಕ ಸತ್ತೇಗಾಲ.

ಯಳಂದೂರು ತಾಲೂಕು: 40 ವರ್ಷದ ಮಹಿಳೆ, ಆರೋಗ್ಯ ಇಲಾಖೆ ವಸತಿಗೃಹ,ಯಳಂದೂರು. 32 ವರ್ಷದ ಯುವಕ, ಆರೋಗ್ಯ ಇಲಾಖೆ ವಸತಿ ಗೃಹ, ಯಳಂದೂರು, 39 ವರ್ಷದ ವ್ಯಕ್ತಿ ಮಾಂಬಳ್ಳಿ.

Advertisement

ಚಾಮರಾಜನಗರ ತಾಲೂಕು: 27 ವರ್ಷದ ಯವಕ, ಜ್ಯೋತಿಗೌಡನಪುರ. 55 ವರ್ಷದ ಮಹಿಳೆ, ಭುಜಗನಪುರ.

ಗುಂಡ್ಲುಪೇಟೆ ತಾಲೂಕು: 35 ವರ್ಷದ ಯುವಕ ದೊಡ್ಡತುಪ್ಪೂರು.

ಒಟ್ಟು 10 ಪ್ರಕರಣಗಳಲ್ಲಿ 1 ಎಸ್‌ಎಆರ್‌ಐ ಪ್ರಕರಣ, 5 ಮಂದಿ ಸೋಂಕಿತರ ಸಂಪರ್ಕಿತರು, 4 ಪ್ರಕರಣಗಳು ಬೆಂಗಳೂರಿನಿಂದ ಬಂದಿರುವವರದು.

Advertisement

Udayavani is now on Telegram. Click here to join our channel and stay updated with the latest news.

Next