Advertisement

ಚಾಮರಾಜನಗರ ಜಿಲ್ಲೆಯಲ್ಲಿ ಒಂದೇ ದಿನ ಶತಕ ದಾಟಿದ ಕೋವಿಡ್ ಪ್ರಕರಣಗಳು

05:53 PM Aug 19, 2020 | sudhir |

ಚಾಮರಾಜನಗರ: ಜಿಲ್ಲೆಯಲ್ಲಿ ಬುಧವಾರ ಕೋವಿಡ್ ಪ್ರಕರಣಗಳ ಸಂಖ್ಯೆ ಶತಕದ ಗಡಿ ದಾಟಿದ್ದು 105 ಪ್ರಕರಣಗಳು ದೃಢಪಟ್ಟಿವೆ. ಒಂದೇ ದಿನದ ಕೋವಿಡ್ ಪ್ರಕರಣಗಳು ಜಿಲ್ಲೆಯಲ್ಲಿ ಶತಕ ದಾಟಿರುವುದು ಇದೇ ಮೊದಲು. ಇದೇ ವೇಳೆ 111 ಮಂದಿ ಗುಣಮುಖರಾಗಿದ್ದಾರೆ.

Advertisement

ಜಿಲ್ಲೆಯಲ್ಲಿ ಒಟ್ಟು 1787 ಪ್ರಕರಣಗಳು ದೃಢಪಟ್ಟಿದ್ದು, ಇವುಗಳಲ್ಲಿ 397 ಸಕ್ರಿಯವಾಗಿವೆ. 1359 ಮಂದಿ ಗುಣಮುಖರಾಗಿದ್ದಾರೆ. 34 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 159 ಮಂದಿ ಮನೆಯಲ್ಲಿ ಪ್ರತ್ಯೇಕವಾಗುಳಿದು ಚಿಕಿತ್ಸೆ ಪಡೆಯುತ್ತಿದ್ದಾರೆ. ಬುಧವಾರ 685 ಮಾದರಿಗಳನ್ನು ಪರೀಕ್ಷೆಗೊಳಪಡಿಸಲಾಗಿತ್ತು. 582 ಫಲಿತಾಂಶ ನೆಗೆಟಿವ್ ಬಂದಿದೆ. ಜಿಲ್ಲೆಯಲ್ಲಿ ಇದುವರೆಗೆ ಕೋವಿಡ್‌ನಿಂದ 31 ಮಂದಿ ಮೃತಪಟ್ಟಿದ್ದಾರೆ.

ಇಂದಿನ ಪ್ರಕರಣಗಳು-105
ಇಂದು ಗುಣಮುಖ-111
ಒಟ್ಟು ಗುಣಮುಖ-1359
ಇಂದಿನ ಸಾವು-0
ಒಟ್ಟು ಸಾವು-31
ಸಕ್ರಿಯ ಪ್ರಕರಣಗಳು-397
ಒಟ್ಟು ಸೋಂಕಿತರು-1787

Advertisement

Udayavani is now on Telegram. Click here to join our channel and stay updated with the latest news.

Next