Advertisement

ಚಾಮರಾಜನಗರದಲ್ಲಿ ಇಂದು 24 ಹೊಸ ಪ್ರಕರಣಗಳು, 22 ಮಂದಿ ಗುಣಮುಖ

07:33 PM Jul 22, 2020 | sudhir |

ಚಾಮರಾಜನಗರ: ಜಿಲ್ಲೆಯಲ್ಲಿ ಇಂದು 24 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ಇಂದು 22 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಟ್ಟಾರೆ ಜಿಲ್ಲೆಯಲ್ಲಿ ಕೋವಿಡ್ ದೃಢಪಟ್ಟವರ ಸಂಖ್ಯೆ 406ಕ್ಕೇರಿದೆ. 169 ಸಕ್ರಿಯ ಪ್ರಕರಣಗಳಿವೆ.

Advertisement

369 ಮಾದರಿಗಳನ್ನು ಇಂದು ಪರೀಕ್ಷೆಗೊಳಪಡಿಸಲಾಗಿತ್ತು. 344 ಮಾದರಿಗಳ ಫಲಿತಾಂಶ ನೆಗೆಟಿವ್ ಬಂದಿದೆ.
ಇಂದು ವರದಿಯಾಗಿರುವ ಪ್ರಕರಣಗಳ ಪೈಕಿ ಕೊಳ್ಳೇಗಾಲ ತಾಲೂಕಿನಿಂದ ಅತಿ ಹೆಚ್ಚು ಅಂದರೆ 12 ಪ್ರಕರಣಗಳು ವರದಿಯಾಗಿವೆ. ಗುಂಡ್ಲುಪೇಟೆ, ಚಾಮರಾಜನಗರ ತಾಲೂಕು ತಲಾ 5, ಹನೂರು ಹಾಗೂ ತಾಲೂಕಿನಿಂದ 1 ಪ್ರಕರಣ ವರದಿಯಾಗಿದೆ.

ಪ್ರಕರಣಗಳ ವಿವರ ಇಂತಿದೆ:
ಕೊಳ್ಳೇಗಾಲ ತಾಲೂಕು: 50 ವರ್ಷದ ಮಹಿಳೆ ಬಸ್ತಿಪುರ. 60 ವರ್ಷದ ಪುರುಷ, 75 ವರ್ಷದ ವೃದ್ಧೆ, 22 ವರ್ಷದ ಯುವತಿ, ದೇವಾಂಗಪೇಟೆ ಕೊಳ್ಳೇಗಾಲ. 38 ವರ್ಷದ ಪುರುಷ ರಾಜೀವನಗರ, ಕೊಳ್ಳೇಗಾಲ. 45 ವರ್ಷದ ಮಹಿಳೆ ಆಶ್ರಯ ಬಡಾವಣೆ ಕೊಳ್ಳೇಗಾಲ. 40 ವರ್ಷದ ಪುರುಷ ಮೊರಾರ್ಜಿ ವಸತಿ ಶಾಲೆ, ಕೊಳ್ಳೇಗಾಲ. 33 ವರ್ಷದ ಯುವಕ, ಹರಳೆ. 65 ವರ್ಷದ ವೃದ್ಧೆ ನಾಯಕರ ಬೀದಿ, ಕೊಳ್ಳೇಗಾಲ. 30 ವರ್ಷದ ಯುವತಿ, 38 ವರ್ಷದ ಪುರುಷ ಕೊಳ್ಳೇಗಾಲ ಮೋಳೆ. 32 ವರ್ಷದ ಯುವಕ ಕೊಳ್ಳೇಗಾಲ.

ಗುಂಡ್ಲುಪೇಟೆ ತಾಲೂಕು: 40 ವರ್ಷದ ಮಹಿಳೆ, ಪೇಟೆ. 54 ವರ್ಷದ ಮಹಿಳೆ, 50 ವರ್ಷದ ಮಹಿಳೆ, 30 ವರ್ಷದ ಯುವತಿ ತೆರಕಣಾಂಬಿ. 40 ವರ್ಷದ ಪುರುಷ ಹಂಗಳ.

ಚಾಮರಾಜನಗರ ತಾಲೂಕು: 70 ವರ್ಷದ ವೃದ್ಧ, 40 ವರ್ಷದ ಪುರುಷ, 38 ವರ್ಷದ ಮಹಿಳೆ ಕೆ.ಎನ್. ಮೊಹಲ್ಲಾ, 23 ವರ್ಷದ ಯುವಕ ಕೋಡಿಮೋಳೆ, 30 ವರ್ಷದ ಯುವತಿ ರೈಲ್ವೆ ಬಡಾವಣೆ.

Advertisement

ಹನೂರು: 12 ವರ್ಷದ ಬಾಲಕಿ ಇಕ್ಕಡಹಳ್ಳಿ.

Advertisement

Udayavani is now on Telegram. Click here to join our channel and stay updated with the latest news.

Next