Advertisement

ಚಾಮರಾಜನಗರ: ಮಂಗಳವಾರ 99 ಕೋವಿಡ್ ಪ್ರಕರಣಗಳು ಪತ್ತೆ, ನಾಲ್ವರು ಸಾವು

08:30 PM Sep 29, 2020 | mahesh |

ಚಾಮರಾಜನಗರ : ಜಿಲ್ಲೆಯಲ್ಲಿ ಮಂಗಳವಾರ 99 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. 59 ಮಂದಿ ಗುಣಮುಖರಾಗಿದ್ದಾರೆ. ನಾಲ್ವರು ಮೃತಪಟ್ಟಿದ್ದಾರೆ.

Advertisement

ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 3985 ಪ್ರಕರಣಗಳು ದೃಢಪಟ್ಟಿದ್ದು, ಈ ಪೈಕಿ 3205 ಮಂದಿ ಗುಣಮುಖರಾಗಿದ್ದಾರೆ. ಸದ್ಯ 687 ಸಕ್ರಿಯ ಪ್ರಕರಣಗಳಿವೆ.

ಚಾ.ನಗರ ತಾಲೂಕಿನ ಕಾಳನಹುಂಡಿ ಗ್ರಾಮದ 60 ವರ್ಷದ ಪುರುಷ, ಗುಂಡ್ಲುಪೇಟೆ ತಾಲೂಕಿನ 80 ವರ್ಷದ ಮಹಿಳೆ, ಹನೂರು ತಾಲೂಕು ಬಂಡಳ್ಳಿಯ 55 ವರ್ಷದ ಪುರುಷ ಹಾಗೂ ಯಳಂದೂರು ಪಟ್ಟಣದ 52 ವರ್ಷದ ಪುರುಷ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

ಇಂದಿನ 99 ಹೊಸ ಪ್ರಕರಣಗಳ ಪೈಕಿ ಗುಂಡ್ಲುಪೇಟೆ ತಾಲೂಕಿನಲ್ಲಿ 31, ಚಾ.ನಗರ ತಾಲೂಕಿನಲ್ಲಿ ಅತಿ ಹೆಚ್ಚು 41 , ಕೊಳ್ಳೇಗಾಲ ತಾಲೂಕಿನಲ್ಲಿ 13, ಯಳಂದೂರು 5 ಹಾಗೂ ಹನೂರು ತಾಲೂಕಿನಲ್ಲಿ 9 ಪ್ರಕರಣಗಳು ಪತ್ತೆಯಾಗಿವೆ. ಮಂಗಳವಾರ 1037 ಮಾದರಿಗಳನ್ನು ಪರೀಕ್ಷಿಸಲಾಗಿತ್ತು.

ಇಂದಿನ ಪ್ರಕರಣಗಳು: 99
ಇಂದು ಗುಣಮುಖ: 59
ಒಟ್ಟು ಗುಣಮುಖ: 3205
ಇಂದಿನ ಸಾವು: 04
ಒಟ್ಟು ಸಾವು: 93
ಸಕ್ರಿಯ ಪ್ರಕರಣಗಳು: 687
ಒಟ್ಟು ಸೋಂಕಿತರು: 3985

Advertisement
Advertisement

Udayavani is now on Telegram. Click here to join our channel and stay updated with the latest news.

Next