ಚಾಮರಾಜನಗರ: ಜಿಲ್ಲೆಯಲ್ಲಿ ಭಾನುವಾರ ಹೊಸದಾಗಿ 80 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 3 ಸಾವಿರ ದಾಟಿದೆ. 23 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ಓರ್ವ ವೃದ್ಧೆ ಕೋವಿಡೇತರ ಕಾರಣದಿಂದ ಮೃತಪಟ್ಟಿದ್ದಾರೆ.
ಭಾನುವಾರ 652 ಮಾದರಿಗಳನ್ನು ಪರೀಕ್ಷಿಸಲಾಗಿತ್ತು. ಗುಂಡ್ಲುಪೇಟೆ ತಾಲೂಕಿನಿಂದ 36, ಚಾಮರಾಜನಗರ ತಾಲೂಕಿನಿಂದ 16, ಕೊಳ್ಳೇಗಾಲದಿಂದ 18, ಯಳಂದೂರಿನಿಂದ 07, ಹನೂರಿನಿಂದ 03 ಪ್ರಕರಣಗಳು ದೃಢಪಟ್ಟಿವೆ.
ಗುಂಡ್ಲುಪೇಟೆ ತಾಲೂಕಿನ ಕೋಡಿಹಳ್ಳಿ ಗ್ರಾಮದ 63 ವರ್ಷದ ವೃದ್ಧೆ ಡಯಾಬಿಟೀಸ್‌ನಿಂದ ಬಳಲುತ್ತಿದ್ದರು ಸೆ. 12ರಂದು ಅವರ ಮನೆಯಲ್ಲಿ ಮೃತಪಟ್ಟಿದ್ದರು. ನಿಧನಾನಂತರ ಕೋವಿಡ್ ಇರುವುದು ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.
ಜಿಲ್ಲೆಯ ಒಟ್ಟು ದೃಢೀಕೃತ ಪ್ರಕರಣಗಳ ಸಂಖ್ಯೆ 3018 ಆಗಿದೆ. ಇದರಲ್ಲಿ 2349 ಮಂದಿ ಗುಣಮುಖರಾಗಿದ್ದಾರೆ. ಕೋವಿಡ್ ಕಾರಣದಿಂದ 45 ಮಂದಿ ಹಾಗೂ ಕೋವಿಡೇತರ ಕಾರಣದಿಂದ 19 ಮಂದಿ ಸೋಂಕಿತರು ಸೇರಿದಂತೆ ಒಟ್ಟು 64 ಮಂದಿ ಮೃತಪಟ್ಟಿದ್ದಾರೆ.
38 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 159 ಮಂದಿ ಹೋಂ ಐಸೋಲೇಷನ್‌ನಲ್ಲಿದ್ದಾರೆ.
ಇಂದಿನ ಪ್ರಕರಣಗಳು-80
ಇಂದು ಗುಣಮುಖ-23
ಒಟ್ಟು ಗುಣಮುಖ-2349
ಇಂದಿನ ಸಾವು-01
ಒಟ್ಟು ಸಾವು-64
ಸಕ್ರಿಯ ಪ್ರಕರಣಗಳು-606
ಒಟ್ಟು ಸೋಂಕಿತರು-3018