ಚಾಮರಾಜನಗರ: ಜಿಲ್ಲೆಯಲ್ಲಿ ಮಂಗಳವಾರ 42 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. 59 ಮಂದಿ ಗುಣಮುಖರಾಗಿದ್ದಾರೆ. ಓರ್ವ ಸೋಂಕಿತ ಮೃತರಾಗಿದ್ದಾರೆ.
ಗುಂಡ್ಲುಪೇಟೆ ತಾಲೂಕಿನಿಂದ 04, ಚಾಮರಾಜನಗರ ತಾಲೂಕಿನಿಂದ 25, ಕೊಳ್ಳೇಗಾಲ ತಾಲೂಕಿನಿಂದ 07, ಯಳಂದೂರು ತಾಲೂಕಿನಿಂದ 05 ಹಾಗೂ ಹನೂರು ತಾಲೂಕಿನಿಂದ 01 ಪ್ರಕರಣ ದೃಢಪಟ್ಟಿದೆ.
ಯಳಂದೂರು ಪಟ್ಟಣದ 58 ವರ್ಷದ ವ್ಯಕ್ತಿ ಸೆ. 19ರಂದು ಹೃದೊ್ರೀಗದಿಂದಾಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಸೆ. 21ರಂದು ಮೃತಪಟ್ಟಿದ್ದಾರೆ. ನಿಧನದ ಬಳಿಕ ಪರೀಕ್ಷಿಸಿದಾಗ ಕೋವಿಡ್ ದೃಢಪಟ್ಟಿದೆ.
ಜಿಲ್ಲೆಯಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 3583ಕ್ಕೇರಿದೆ. 2909 ಮಂದಿ ಗುಣಮುಖರಾಗಿದ್ದಾರೆ. 596 ಸಕ್ರಿಯ ಪ್ರಕರಣಗಳಿವೆ. 79 ಮಂದಿ ಮೃತಪಟ್ಟಿದ್ದಾರೆ. 24 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 275 ಮಂದಿ ಹೋಂ ಐಸೋಲೇಷನ್‌ನಲ್ಲಿದ್ದಾರೆ.
Related Articles
ಮಂಗಳವಾರ ಒಟ್ಟು 640 ಮಾದರಿಗಳನ್ನು ಪರೀಕ್ಷೆಗೊಳಪಡಿಸಲಾಗಿತ್ತು. 599 ಮಾದರಿಗಳ ಫಲಿತಾಂಶ ನೆಗೆಟಿವ್ ಆಗಿದೆ.