Advertisement

ಚಾಮರಾಜನಗರ : ಕೋವಿಡ್ ಸೋಂಕಿಗೆ ಓರ್ವ ಸಾವು, 73 ಮಂದಿ ಗುಣಮುಖ, 66 ಹೊಸ ಪ್ರಕರಣ ದೃಢ

06:54 PM Sep 20, 2020 | sudhir |

ಚಾಮರಾಜನಗರ: ಜಿಲ್ಲೆಯಲ್ಲಿ ಭಾನುವಾರ 66 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. 73 ಮಂದಿ ಗುಣಮುಖರಾಗಿದ್ದಾರೆ. ಓರ್ವ ಸೋಂಕಿತರು ಮೃತಪಟ್ಟಿದ್ದಾರೆ.

Advertisement

ಕೊಳ್ಳೇಗಾಲ ಪಟ್ಟಣದ 65 ವರ್ಷದ ವೃದ್ಧರು ಸೆ. 11ರಂದು ಕೋವಿಡ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಸೆ. 19ರಂದು ಮೃತಪಟ್ಟಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 3484ಕ್ಕೇರಿದೆ. ಇದರಲ್ಲಿ 2790 ಮಂದಿ ಗುಣಮುಖರಾಗಿದ್ದಾರೆ. 619 ಸಕ್ರಿಯ ಪ್ರಕರಣಗಳಿವೆ. ಇದುವರೆಗೆ ಒಟ್ಟು 76 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. 34 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 250 ಮಂದಿ ಹೋಂ ಐಸೋಲೇಷನ್‌ನಲ್ಲಿದ್ದಾರೆ.

ಭಾನುವಾರ 799 ಮಾದರಿಗಳನ್ನು ಪರೀಕ್ಷೆಗೊಳಪಡಿಸಲಾಗಿತ್ತು. ಇದರಲ್ಲಿ 736 ರ ಫಲಿತಾಂಶ ನೆಗೆಟಿವ್ ಆಗಿದೆ.

ಇಂದಿನ ಪ್ರಕರಣಗಳು -66
ಇಂದು ಗುಣಮುಖ -73
ಒಟ್ಟು ಗುಣಮುಖ -2790
ಇಂದಿನ ಸಾವು -01
ಒಟ್ಟು ಸಾವು -76
ಸಕ್ರಿಯ ಪ್ರಕರಣಗಳು -619
ಒಟ್ಟು ಸೋಂಕಿತರು -3484

Advertisement
Advertisement

Udayavani is now on Telegram. Click here to join our channel and stay updated with the latest news.

Next