Advertisement
“ಪ್ರತಿ ವರ್ಷ ನನ್ನ ಹುಟ್ಟುಹಬ್ಬವನ್ನು ನೀವು ಹಬ್ಬದ ತರಹ ಆಚರಿಸ್ತೀರಾ. ಹುಟ್ಟುಹಬ್ಬ ಮಾಡಬೇಕೆಂದು ನನಗೂ ಆಸೆ ಇತ್ತು.ಆದರೆ, ಈ ಬಾರಿಯೂ ಆಚರಿಸುತ್ತಿಲ್ಲ. ಅದಕ್ಕೆ ಮುಖ್ಯ ಕಾರಣ ಪುನೀತ್ ರಾಜ್‌ಕುಮಾರ್ ಅವರ ನಿಧನ. ಅದು ಆದ ಮೇಲೆ ನಾನು ಹುಟ್ಟುಹಬ್ಬ ಆಚರಿಸಿಕೊಳ್ಳೋದು ಯಾಕೋ ನನ್ನ ಮನಸ್ಸಿಗೆ ಸರಿ ಕಾಣುತ್ತಿಲ್ಲ. ಹಾಗಾಗಿ, ಬರ್ತ್‌ಡೇ ಆಚರಿಸೋದು ಬೇಡ ಎಂದು ನಿರ್ಧರಿಸಿದ್ದೇನೆ. ಖಂಡಿತಾ, ಮುಂದಿನ ವರ್ಷ ಎಲ್ಲರಿಗೂ ಸಿಗುತ್ತೇನೆ. ಈ ಬಾರಿ ನಾನೂ ಊರಲ್ಲಿ ಇರಲ್ಲ. ಆದರೆ, ಅಭಿಮಾನಿಗಳಿಗೆ ಬೇಸರ ಮಾಡಲು ಇಷ್ಟಪಡಲ್ಲ. ಇದೇ ಫೆ.18ಕ್ಕೆ ನನ್ನ “ಮೆಜೆಸ್ಟಿಕ್’ ಚಿತ್ರ ಬಿಡುಗಡೆಯಾಗುತ್ತಿದೆ. ತಾಂತ್ರಿಕವಾಗಿ ಅಪ್‌ಡೇಟ್ ಆಗಿ ಈ ಚಿತ್ರ ತೆರೆಗೆ ಬರುತ್ತಿದೆ. ಜೊತೆಗೆ “ಕ್ರಾಂತಿ’ ಹಾಗೂ ನನ್ನ ಹಾಗೂ ತರುಣ್ ಕಾಂಬಿನೇಶನ್ ಹೊಸ ಸಿನಿಮಾದ ಅಪ್‌ಡೇಟ್ ಕೂಡಾ ಬರಲಿದೆ’ ಎಂದಿದ್ದಾರೆ ದರ್ಶನ್. Advertisement
ಇಂದು ದರ್ಶನ್ ಹುಟ್ಟುಹಬ್ಬ: ಹೊಸ ಸಿನಿಮಾಗಳ ಫಸ್ಟ್ ಲುಕ್ ರಿಲೀಸ್
10:45 AM Feb 16, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.