Advertisement

ಶಂಕರಾಚಾರ್ಯರಿಂದ ಸನಾತನ ಪರಂಪರೆ ರಕ್ಷಣೆ

05:18 PM Apr 29, 2020 | Team Udayavani |

ಚಳ್ಳಕೆರೆ: ಭಾರತೀಯ ಸನಾತನ ಪರಂಪರೆಗೆ ವಿಶೇಷ ಮೌಲ್ಯವನ್ನು ತಂದುಕೊಟ್ಟಿದ್ದೇ ಆದಿಗುರು ಶಂಕರಾಚಾರ್ಯರು. ಕೆಲವೇ ವರ್ಷಗಳಲ್ಲಿ ಅಮೋಘ ಸಾಧನೆಯನ್ನು ದಾಖಲಿಸಿದ ಕೀರ್ತಿ ಅವರದ್ದು, ಅವರ ದೂರದೃಷ್ಟಿಯ ಫಲವಾಗಿ ಇಂದು ನಮ್ಮ ಹಿಂದೂ ಧಾರ್ಮಿಕ ಪದ್ಧತಿ ಪ್ರಜ್ವಲಿಸುತ್ತಿದೆ ಎಂದು ಶಾಸಕ ಟಿ. ರಘುಮೂರ್ತಿ ಹೇಳಿದರು.

Advertisement

ಮಂಗಳವಾರ ನಗರದ ತಾಲೂಕು ಕಚೇರಿ ಆವರಣದಲ್ಲಿ ಶಂಕರ ಜಯಂತಿ ಪ್ರಯುಕ್ತ ಶಂಕರಾಚಾರ್ಯರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ತಾಲೂಕು ಬ್ರಾಹ್ಮಣ ಸಂಘ ಹಮ್ಮಿಕೊಂಡಿದ್ದ ಪೂಜಾ ಕಾರ್ಯದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಭಾರತ ಪುಣ್ಯಭೂಮಿ ಎಂಬ ವಾಕ್ಯದಲ್ಲಿ ಸಂಪೂರ್ಣ ಸತ್ಯಾಂಶವಿದೆ. ಕಾರಣ ನಮ್ಮ ಧಾರ್ಮಿಕ ಪರಂಪರೆಗೆ ಅನೇಕ ಮಹನೀಯರು ತಮ್ಮದೇಯಾದ ವಿಶೇಷ ಸೇವೆಯನ್ನು ಸಲ್ಲಿಸಿದ್ದಾರೆ. ಅವರ ಹಾಕಿಕೊಟ್ಟ ಮಾರ್ಗದಲ್ಲೇ ನಾವೆಲ್ಲರೂ ನಡೆಯಬೇಕೆಂದರು.

ತಾಲೂಕಿನ ಬ್ರಾಹ್ಮಣ ಸಮುದಾಯ ಹಾಗೂ ಇನ್ನಿತರ ಬಡ ಕುಟುಂಬಗಳಿಗೆ ಸರ್ಕಾರದ ವತಿಯಿಂದ ನೀಡಲಾದ ಉಚಿತ ಆಹಾರ ಕಿಟ್‌ಗಳನ್ನು ಶಾಸಕರು ವಿತರಿಸಿದರು. ತಹಶೀಲ್ದಾರ್‌ ಎಂ. ಮಲ್ಲಿಕಾರ್ಜುನ, ಪೌರಾಯುಕ್ತ ಪಿ. ಪಾಲಯ್ಯ, ಸಿಪಿಐ ಈ. ಆನಂದ, ನಗರಸಭಾ ಸದಸ್ಯರಾದ ರಮೇಶ್‌ ಗೌಡ, ವೀರಭದ್ರಪ್ಪ, ಚಳ್ಳಕೆರೆಯಪ್ಪ, ವೈ. ಪ್ರಕಾಶ್‌, ಜಿ. ವೀರೇಶ್‌, ತಾಲೂಕು ಬ್ರಾಹ್ಮಣ ಸಂಘದ ಗೌರವಾಧ್ಯಕ್ಷ ಎಂ. ವಾಸುದೇವ ರಾವ್‌, ಅಧ್ಯಕ್ಷ ಡಾ| ಅನಂತರಾಮ್‌ ಗೌತಮ್‌, ಎನ್‌. ಗೋಪಿನಾಥ, ಎಂ. ಸತ್ಯನಾರಾಯಣ, ಮಹಿಳಾ ಘಟಕದ ಅಧ್ಯಕ್ಷೆ ಸೀತಾಲಕ್ಷ್ಮೀ ವಾದಿರಾಜ್‌, ನಿರ್ದೇಶಕರಾದ ಶೈಲಜಾ, ಶಾಂತಮ್ಮ, ಸಿ.ಎಸ್‌. ಗೋಪಿನಾಥ, ಮುರಳಿ, ಶ್ರೀನಾಥ, ಅನಂತಪ್ರಸಾದ್‌, ಲಕ್ಷ್ಮೀ ಶ್ರೀವತ್ಸ, ವಿಷ್ಣುಮೂರ್ತಿ ರಾವ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next