Advertisement

ಊರಿಗೆ ಮರಳಿದ 139 ವಲಸೆ ಕಾರ್ಮಿಕರು

11:49 AM May 30, 2020 | Team Udayavani |

ಚಳ್ಳಕೆರೆ: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸುಮಾರು 139 ವಲಸೆ ಕಾರ್ಮಿಕರನ್ನು ನಗರದ ವಿವಿಧ ಹಾಸ್ಟೆಲ್‌ ಗಳಲ್ಲಿ ಕ್ವಾರಂಟೈನ್‌ ಮಾಡಲಾಗಿತ್ತು. ವೈದ್ಯಕೀಯ ಪರೀಕ್ಷೆ ನಂತರ ಅವರಲ್ಲಿ ಯಾವುದೇ ವೈರಾಣು, ಸೋಂಕು ಇಲ್ಲದ ಕಾರಣ ಅವರ ಸ್ವಗ್ರಾಮಗಳಿಗೆ ಶುಕ್ರವಾರ ಕಳುಹಿಸಲಾಯಿತು.

Advertisement

ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಉಪವಿಭಾಗದ ಡಿವೈಎಸ್ಪಿ ಎಸ್‌. ರೋಷನ್‌ ಜಮೀರ್‌ ಈ ಬಗ್ಗೆ ಮಾಹಿತಿ ನೀಡಿದರು. ಚಳ್ಳಕೆರೆ ಉಪವಿಭಾಗ ವ್ಯಾಪ್ತಿಯ ರಾಂಪುರ, ಮೊಳಕಾಲ್ಮೂರು, ನಾಯಕನಹಟ್ಟಿ, ಪರಶುರಾಂಪುರ, ತಳಕು ಹಾಗೂ ಚಳ್ಳಕೆರೆ ಠಾಣಾ ವ್ಯಾಪ್ತಿಯಲ್ಲಿದ್ದ 139 ವಲಸೆ ಕಾರ್ಮಿಕರನ್ನು ಸರ್ಕಾರದ ಸೂಚನೆ ಹಾಗೂ ಜಿಲ್ಲಾ ರಕ್ಷಣಾಧಿಕಾರಿಗಳ ಮಾರ್ಗದರ್ಶನದಲ್ಲಿ ಒಟ್ಟು 8 ಕೆಎಸ್‌ ಆರ್‌ಟಿಸಿ ಬಸ್‌ಗಳ ಮೂಲಕ ಅವರ ಸ್ವಗ್ರಾಮಗಳಿಗೆ ಕಳುಹಿಸಿಕೊಡಲಾಗಿದೆ. ಕೆಲವರು ಅವರ ಸ್ವಂತ ವಾಹನ ಹೊಂದಿದ್ದು, ಅದರಲ್ಲಿ ಪ್ರಯಾಣಿಸಲು ಅನುಮತಿ ನೀಡಲಾಗಿದೆ ಎಂದರು.

ತಾಲೂಕು ಆರೋಗ್ಯಾಧಿಕಾರಿ ಡಾ| ಎನ್‌. ಪ್ರೇಮಸುಧಾ ಮಾತನಾಡಿ, ಚಳ್ಳಕೆರೆ ನಗರದ ವಿವಿಧೆಡೆ ಕ್ವಾರಂಟೈನ್‌ನಲ್ಲಿದ್ದ ಎಲ್ಲಾ ವಲಸೆ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಿದ ನಂತರ ಅವರ ಸ್ವಗ್ರಾಮಗಳಿಗೆ ತೆರಳಲು ಅನುಮತಿ ನೀಡಲಾಗಿದೆ. ಸೀಲ್‌ಡೌನ್‌ ಆದ ಗ್ರಾಮಗಳಾದ ಕೋಡಿಹಳ್ಳಿ, ಚಿಕ್ಕಹಳ್ಳಿ ಗ್ರಾಮಗಳ 53 ಜನರನ್ನು ಸಹ ಸಾಂಸ್ಥಿಕ ಕ್ವಾರಂಟೈನ್‌ನಿಂದ ಬಿಡುಗಡೆಗೊಳಿಸಿ ಅವರ ಸ್ವಗ್ರಾಮಕ್ಕೆ ಕಳುಹಿಸಿಕೊಡಲಾಗಿದೆ. ಬಿಸಿಎಂ ಹಾಸ್ಟೆಲ್‌ ನಲ್ಲಿ ಪಾಸಿಟಿವ್‌ ಇರುವ 26 ಹಾಗೂ 31 ವಿವಿಧ ರಾಜ್ಯದ ವಲಸೆ ಕಾರ್ಮಿಕರಿದ್ದು ಅವರ ಆರೋಗ್ಯ ತಪಾಸಣೆಯನ್ನು ದಿನ ನಿತ್ಯ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ತಹಶೀಲ್ದಾರ್‌ ಎಂ. ಮಲ್ಲಿಕಾರ್ಜುನ್‌ ,ತಾಪಂ ಇಒ ಶ್ರೀಧರ್‌ ಐ. ಬಾರಕೇರ್‌, ಕೆಎಸ್‌ಆರ್‌ಟಿಸಿ ಅಧಿಕಾರಿಗಳಾದ ಚಂದ್ರಪ್ಪ, ಹುಸೇನ್‌, ಪಿಎಸ್‌ಐಗಳಾದ ಎಂ.ಕೆ. ಬಸವರಾಜು, ನೂರ್‌ ಅಹಮ್ಮದ್‌, ರಘುನಾಥ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next