Advertisement

ದುರ್ಗದಲ್ಲಿ ಜ್ವಾಲಾಮುಖೀ?

06:00 AM Oct 07, 2018 | Team Udayavani |

ಚಳ್ಳಕೆರೆ (ಚಿತ್ರದುರ್ಗ): ಸತತ ಬರಕ್ಕೆ ತುತ್ತಾಗುತ್ತಿರುವ ತಾಲೂಕಿನ ಜಮೀನೊಂದರ ಭೂಮಿಯ ಕೆಳಭಾಗದಿಂದ ಅಗ್ನಿ ಜ್ವಾಲೆ ಕಾಣಿಸಿಕೊಂಡು “ಜ್ವಾಲಾಮುಖೀ’ಯ ಆತಂಕ ಸೃಷ್ಟಿಸಿದೆ.

Advertisement

ಇಲ್ಲಿನ ನಾಯಕನಹಟ್ಟಿ ಹೋಬಳಿಯ ಮನಮೈನಹಟ್ಟಿ ಗ್ರಾಮದ ತಿಪ್ಪೇಸ್ವಾಮಿ ಎಂಬವ‌ರಿಗೆ ಸೇರಿದ ಜಮೀನಿನಲ್ಲಿ ಕಳೆದ ಮಂಗಳವಾರ (ಅ. 2) ಸಂಜೆ 4 ಗಂಟೆ ಸುಮಾರಿಗೆ ಭೂಮಿಯ ಒಳಭಾಗದಿಂದ ಬೆಂಕಿ ಹೊರ ಹೊಮ್ಮಿದೆ. ಕೆಲ ನಿಮಿಷಗಳ ನಂತರ ಈ ಜ್ವಾಲೆ, ಆರಿದ ಬಳಿಕ ಜ್ವಾಲಾಮುಖೀಯಿಂದ ಉಂಟಾಗುವ ಲಾವಾರಸ ಮಾದರಿ ಕಂಡು ಬಂದಿತ್ತು. ಹೀಗಾಗಿ ಸಣ್ಣ ಪ್ರಮಾಣ ಜ್ವಾಲಾಮುಖೀ ಶಂಕೆ ವ್ಯಕ್ತವಾಗಿದೆ. ಬೆಂಕಿ ಜ್ವಾಲೆ ಕಂಡು ಬಂದ ಸ್ಥಳದ ಪಕ್ಕದಲ್ಲೇ ವಿದ್ಯುತ್‌ ಕಂಬ ಇದ್ದು, ಬೆಂಕಿಯ ಕಾವಿಗೆ ಕಂಬವೂ ಕರಗಿದಂತಾಗಿ ಬಾಗಿಕೊಂಡಿದೆ. ಬೆಸ್ಕಾಂ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಆಗಮಿಸಿ ಕಂಬ ಬದಲಿಸಿದ್ದಾರೆ.

ಜಮೀನಿನ ಮಾಲೀಕ ತಿಪ್ಪೇಸ್ವಾಮಿ ಪೊಲೀಸರಿಗೆ ವಿಷಯ ತಿಳಿಸಿದ್ದು, ಅವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಜ್ವಾಲೆಯಿಂದ ಕರಗಿದ ವಿದ್ಯುತ್‌ ಕಂಬದ ತುಂಡನ್ನು ಭೂಗರ್ಭ ಇಲಾಖೆ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ವರದಿ ಇನ್ನಷ್ಟೇ ಬರಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next