Advertisement

ವಿವಿ ಸಾಗರದಿಂದ ಚಳ್ಳ ಕೆರೆಗೆ ನೀರು: ರಘುಮೂರ್ತಿ

01:54 PM Apr 22, 2020 | Naveen |

ಚಳ್ಳಕೆರೆ: ಕಳೆದ ಹತ್ತಾರು ವರ್ಷಗಳಿಂದ ಮಳೆ, ಬೆಳೆ ಇಲ್ಲದೆ ಬರಗಾಲದ ಬವಣೆಯಲ್ಲಿ ನಲುಗುತ್ತಿರುವ ಚಳ್ಳಕೆರ ಕ್ಷೇತ್ರದ ಸರ್ವರಿಗೂ ಕುಡಿಯುವ ನೀರು ದೊರೆಯುವಂತೆ ಮಾಡಲು ವಿವಿ ಸಾಗರದಿಂದ 0.25 ಟಿಎಂಸಿ ನೀರನ್ನು ಪೂರ್ಣ ಪ್ರಮಾಣದಲ್ಲಿ ಒದಗಿಸಬೇಕೆಂದು ಜಲಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ಅವರಲ್ಲಿ ವಿಶೇಷ ಮನವಿ ಮಾಡಿದ್ದೆ. ಇದಕ್ಕೆ ಅವರಿಂದ ಸ್ಪಂದನೆ ದೊರೆತಿದೆ ಎಂದು ಶಾಸಕ ಟಿ. ರಘುಮೂರ್ತಿ ತಿಳಿಸಿದರು.

Advertisement

ಶಾಸಕರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿ ಸಾಗರದಿಂದ ಚಳ್ಳಕೆರೆ ಕ್ಷೇತ್ರಕ್ಕೆ ಏ. 22ರಂದು ನೀರು ಬಿಡುವ ಬಗ್ಗೆ ನಿರ್ಧರಿಸಲಾಗಿದೆ. ಏ. 23 ರಂದು ವಿವಿ ಸಾಗರದಿಂದ ಹಿರಿಯೂರು ಗಡಿಭಾಗದ ಶಿಡ್ಲಯ್ಯನಕೋಟೆಗೆ ನೀರು ಬರಲಿದ್ದು, ನಂತರ ಅದು ವೇದಾವತಿ ನದಿ ಮೂಲಕ ಚಳ್ಳಕೆರೆ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಲಿದೆ. ಜಲಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿಯವರು ಚಾಲನೆ ನೀಲಿದ್ದಾರೆ. ಚಳ್ಳಕೆರೆ ವಿಧಾನಸಭಾ ಕ್ಷೇತ್ರಕ್ಕೆ ನೀರು ಹರಿಸಲು ಬೆಂಬಲ ನೀರಿದ ಸಂಸದ ಎ. ನಾರಾಯಣಸ್ವಾಮಿ, ಜಿಲ್ಲೆಯ ಎಲ್ಲಾ ಶಾಸಕರು, ಸ್ವಾಮೀಜಿಯವರು, ರಾಜಕೀಯ ಮುಖಂಡರು, ರೈತ ಸಂಘದ
ಮುಖಂಡರು, ಸಂಘ ಸಂಸ್ಥೆಗಳ ಮುಖಂಡರು ಹಾಗೂ ಅಧಿಕಾರಿ ವರ್ಗವನ್ನು ಅಭಿನಂದಿಸುತ್ತೇನೆ. ಬಹಳ ವರ್ಷಗಳ ಪರಿಶ್ರಮದ ನಂತರ ಚಳ್ಳಕೆರೆ ವಿಧಾನಸಭಾ ಕ್ಷೇತ್ರಕ್ಕೆ ವಿವಿ ಸಾಗರದ ನೀರು ಬರಲಿದೆ ಎಂದರು.

ಪುರಸಭೆ ಮಾಜಿ ಅಧ್ಯಕ್ಷ ಟಿ. ಪ್ರಭುದೇವ್‌, ನಾಟಕ ಅಕಾಡೆಮಿ ಮಾಜಿ ಸದಸ್ಯ ಪಿ. ತಿಪ್ಪೇಸ್ವಾಮಿ, ನಗರಸಭಾ ಸದಸ್ಯರಾದ ರಮೇಶ್‌ ಗೌಡ, ವೈ. ಪ್ರಕಾಶ್‌, ಕೆ.
ವೀರಭದ್ರಪ್ಪ, ಕೇಶವಪ್ಪ, ಸೈಯ್ಯದ್‌ ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next