Advertisement

ಎಪಿಎಂಸಿ ಪುನರಾರಂಭಕ್ಕೆ ಎಸಿ ಸೂಚನೆ

04:06 PM Apr 08, 2020 | Naveen |

ಚಳ್ಳಕೆರೆ: ಕಳೆದ ಮಾರ್ಚ್‌ 24ರಿಂದ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವ್ಯಾಪ್ತಿಯ ಎಲ್ಲ ದಲ್ಲಾಲಿ ಮಂಡಿಗಳು ಹಾಗೂ ವಿವಿಧ ವಾಣಿಜ್ಯೋದ್ಯಮ ವ್ಯವಹಾರಗಳು ಸ್ಥಗಿತಗೊಂಡಿದ್ದು, ಮತ್ತೆ ಎಲ್ಲವನ್ನು ಪುನರಾರಂಭ ಮಾಡುವಂತೆ ಮಾರುಕಟ್ಟೆ ಸಮಿತಿ ಆಡಳಿತಾ ಧಿಕಾರಿ, ಉಪವಿಭಾಗಾಧಿಕಾರಿ ಪ್ರಸನ್ನ ಸೂಚಿಸಿದರು.

Advertisement

ಇಲ್ಲಿನ ಮಾರುಕಟ್ಟೆ ಕಚೇರಿ ಆವರಣದಲ್ಲಿ ಮಂಗಳವಾರ ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರು, ದಲ್ಲಾಲರ ಸಂಘದ ಮುಖಂಡರು, ಛೇಂಬರ್‌ ಆಫ್‌ ಕಾರ್ಮಸ್‌ನ ಸದಸ್ಯರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಮಾರುಕಟ್ಟೆ ಪುನರಾಂಭವಾದಲ್ಲಿ ಮಾತ್ರ ಆದಾಯ ಹೆಚ್ಚಳವಾಗುತ್ತದೆಯಲ್ಲದೆ, ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡಿದಂತಾಗುತ್ತದೆ. ಆಹಾರ ಉತ್ಪಾದನೆ ಹಾಗೂ ಸಾಗಟಕ್ಕೆ ಇದು ಉತ್ತಮ ಪ್ರಯತ್ನವಾಗಿದ್ದು, ಎಲ್ಲಾ ನಿಯಮಗಳನ್ನು ಅಳವಡಿಸಿಕೊಂಡು ಕಾರ್ಮಿಕರು, ದಲ್ಲಾಲರ ಸಂಘ ಮತ್ತು ಖರೀದಿದಾರರು ಮಾರುಕಟ್ಟೆ ಆರ್ಥಿಕ ಹಿತದೃಷ್ಟಿಯಿಂದ ಕಾರ್ಯನಿರ್ವಹಿಸಬೇಕು ಎಂದರು.

ದಲ್ಲಾಲರ ಸಂಘದ ಅಧ್ಯಕ್ಷ ಕೆ.ಎಂ. ಅರವಿಂದಕುಮಾರ್‌ ಮಾತನಾಡಿ, ಕಳೆದ ಮೂರು ತಿಂಗಳುಗಳಿಂದ ಮಾರುಕಟ್ಟೆಯಿಂದ ವ್ಯಾಪಾರವಾದ ಯಾವುದೇ ದಾಸ್ತಾನುವಿನ ಹಣ ಇನ್ನೂ ಬಂದಿಲ್ಲ. ಹಲವಾರು ವರ್ತಕರು ಬದಲಾದ ಕಾಲ ಪರಿಸ್ಥಿತಿಯಲ್ಲಿ ಆರ್ಥಿಕ ಮುಗ್ಗಟ್ಟಿನಿಂದ ಪರಿತಪಿಸುತ್ತಿದ್ದಾರೆ. ಮಿಲ್‌ ಹಾಗೂ ಮಾರುಕಟ್ಟೆಯ ಬೇರೆ ರಾಜ್ಯದಿಂದಲೂ ಸಹ ಖರೀದಿದಾರರು ಆಗಮಿಸಿದ್ದು, ಇದು ಪರೋಕ್ಷವಾಗಿ ಕೊರೋನಾ ವೈರಾಣು ನಿಯಂತ್ರಣ ಪ್ರಯತ್ನಕ್ಕೆ ಹಿನ್ನೆಡೆಯಾಗುವುದರಿಂದ ಸದ್ಯದ ಸ್ಥಿತಿಯಲ್ಲಿ ವ್ಯವಹಾರಗಳನ್ನು ಮುಂದುವರೆಸುವುದು ಸಾಧ್ಯವಾಗದು ಎಂದರು.

ಛೇಂಬರ್‌ ಆಫ್‌ ಕಾರ್ಮಸ್‌ನ ನಿರ್ದೇಶಕ ವಂದನಾ ರಾಜು, ಎಐಟಿಯುಸಿ ಹಮಾಲರ ಸಂಘದ ತಾಲೂಕು ಅಧ್ಯಕ್ಷ ಕೆ.ವಿ.ವೀರಭದ್ರಪ್ಪ ಮಾತನಾಡಿದರು. ತಹಶೀಲ್ದಾರ್‌ ಎಂ.ಮಲ್ಲಿಕಾರ್ಜುನ, ಡಿವೈಎಸ್ಪಿ ಎಸ್‌.ರೋಷನ್‌ ಜಮೀರ್‌, ಎಪಿಎಂಸಿ ಉಪನಿರ್ದೇಶಕ ಕೆ.ಶ್ರೀನಿವಾಸ್‌ ರೆಡ್ಡಿ, ಕಾರ್ಮಿಕ ಅಧಿಕಾರಿ ಶಫೀವುಲ್ಲಾ, ಆರೋಗ್ಯ ಅಧಿಕಾರಿ ಎನ್‌.ಪ್ರೇಮಸುಧಾ, ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಬಸವರಾಜು, ಪೌರಾಯುಕ್ತ ಪಿ.ಪಾಲಯ್ಯ, ವೃತ್ತ ನಿರೀಕ್ಷಕ ಈ.ಆನಂದ, ಮಾರುಕಟ್ಟೆ ಅಧಿಕಾರಿ ಮಹಮ್ಮದ್‌ ಗೌಸ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next