Advertisement

ಚಿಕ್ಕೋಡಿ-ಬಾದಾಮಿ ನೆರೆ ಸಂತ್ರಸ್ತರಿಗೆ ನೆರವು

03:47 PM Aug 19, 2019 | Naveen |

ಚಳ್ಳಕೆರೆ: ಶಾಸಕ ಟಿ. ರಘುಮೂರ್ತಿ ನೇತೃತ್ವದಲ್ಲಿ ತಾಲೂಕಿನಾದ್ಯಂತ ಸಂಗ್ರಹಿಸಿದ 75 ಲಕ್ಷ ರೂ. ಮೌಲ್ಯದ ಆಹಾರ ಪದಾರ್ಥ, ವಸ್ತುಗಳು ಹಾಗೂ ಹಣವನ್ನು ಏಳು ಲಾರಿಗಳ ಮೂಲಕ ಬಾದಾಮಿ ಹಾಗೂ ಚಿಕ್ಕೋಡಿ ವಿಧಾನಸಭಾ ಕ್ಷೇತ್ರಗಳ ನೆರೆಪೀಡಿತ ಗ್ರಾಮಗಳಿಗೆ ತಲುಪಿಸಲಾಗಿದೆ. ನೆರೆ ಸಂತ್ರಸ್ತರಿಗೆ ಸಹಾಯಹಸ್ತ ನೀಡಲಾಯಿತು.

Advertisement

ಈ ಬಗ್ಗೆ ಮಾಹಿತಿ ನೀಡಿದ ನಗರಸಭಾ ಸದಸ್ಯ ಬಿ.ಟಿ. ರಮೇಶ್‌ ಗೌಡ, ಶನಿವಾರ ರಾತ್ರಿ ಚಳ್ಳಕೆರೆ ನಗರದಿಂದ ಹೊರಟು ಭಾನುವಾರ ಬೆಳಿಗ್ಗೆ ಚಿಕ್ಕೋಡಿಗೆ ತೆರಳಿದ್ದೇವೆ. ಅಲ್ಲಿನ ಅಧಿಕಾರಿಗಳು ಹಾಗೂ ಸಂಘ-ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಚರ್ಚಿಸಿದ್ದೇವೆ. ಯಾವ ಪ್ರದೇಶದ ಜನರಿಗೆ ಸೌಲಭ್ಯಗಳು ದೊರೆಯದೆ ಪರಿತಪಿಸುತ್ತಿದ್ದರೋ ಅಂತಹ ಪ್ರದೇಶಗಳಿಗೆ ತೆರಳಿ ಚಳ್ಳಕೆರೆಯಿಂದ ತರಲಾದ ಆಹಾರ ಪದಾರ್ಥ ಹಾಗೂ ವಸ್ತುಗಳನ್ನು ವಿತರಣೆ ಮಾಡಲಾಯಿತು ಎಂದರು.

ನೆರೆ ಸಂತ್ರಸ್ತರನ್ನುದ್ದೇಶಿಸಿ ಮಾತನಾಡಿದ ಶಾಸಕ ಟಿ. ರಘುಮೂರ್ತಿ, ರಾಜ್ಯದಲ್ಲಿ ಮಳೆಯಾಗದೆ ಬರಕ್ಕೆ ತುತ್ತಾಗಿರುವ ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಾವಿರಾರು ಜನರು ನಿಮ್ಮ ಸಂಕಷ್ಟಗಳಿಗೆ ನಿರೀಕ್ಷೆಗೂ ಮೀರಿ ನೆರವಾಗಿದ್ದಾರೆ. ತಮ್ಮ ಕಷ್ಟದ ನಡುವೆಯೂ ನಿಮ್ಮ ಜೀವನ ಉತ್ತಮಗೊಳ್ಳಲಿ ಎಂದು ಹಾರೈಸಿ ತಮ್ಮಲ್ಲಿನ ಆಹಾರ ಪದಾರ್ಥ, ವಸ್ತುಗಳು ಹಾಗೂ ಹಣವನ್ನು ದಾನವಾಗಿ ನೀಡಿದ್ದಾರೆ. ಮುಂಬರುವ ದಿನಗಳಲ್ಲಿ ನೀವೆಲ್ಲರೂ ಹೊಸ ಬದುಕು ಕಟ್ಟಿಕೊಳ್ಳಬೇಕೆಂಬ ಅಭಿಲಾಷೆ ನಮ್ಮದು. ಮೂರು ದಿನಗಳ ಕಾಲ ವಿವಿಧ ಪ್ರದೇಶಗಳಿಗೆ ತೆರಳಿ ವಸ್ತುಗಳನ್ನು ವಿತರಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಕೆ. ವೀರಭದ್ರಪ್ಪ, ವೈ. ಪ್ರಕಾಶ್‌, ಟಿ. ಮಲ್ಲಿಕಾರ್ಜುನ, ತಾಪಂ ಸದಸ್ಯ ಜಿ. ವೀರೇಶ್‌, ಆರ್‌. ಪ್ರಸನ್ನಕುಮಾರ್‌, ಜಿಪಂ ಮಾಜಿ ಸದಸ್ಯರಾದ ಬಾಬು ರೆಡ್ಡಿ, ಎನ್‌. ರವಿಕುಮಾರ್‌, ಮುಖಂಡರಾದ ಕೃಷ್ಣ, ಆರ್‌. ಭರಮಣ್ಣ, ಪಿ. ತಿಪ್ಪೇಸ್ವಾಮಿ, ಕೆ. ಸೈಫುಲ್ಲಾ, ಶೇಖರಪ್ಪ, ತಿಪ್ಪೇಶ್‌ ಮತ್ತಿತರರು ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next