Advertisement

17ಕ್ಕೆ ಜಿಲ್ಲೆಗೆ “ಚಲಿಸು ಕರ್ನಾಟಕ’ಸೈಕಲ್‌ ಯಾತ್ರೆ

01:50 PM Sep 08, 2020 | Suhan S |

ರಾಮನಗರ: ಸ್ವಚ್ಛ, ಪ್ರಾಮಾಣಿಕ ಮತ್ತು ಜನಪರ ರಾಜಕಾರಣದ ಅವಶ್ಯಕತೆ ಬಗ್ಗೆ ತಿಳಿಸಲು ಮತ್ತು ಅವರ ಕಷ್ಟ-ಕಾರ್ಪಣ್ಯ ಅರಿಯುವ ಸಲುವಾಗಿ “ಚಲಿಸು ಕರ್ನಾಟಕ’ ಹೆಸರಿನಲ್ಲಿ 2700 ಕಿ.ಮೀ. ಸೈಕಲ್‌ ಯಾತ್ರೆಯನ್ನು ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿರುವುದಾಗಿ ಕರ್ನಾಟಕ ರಾಷ್ಟ್ರ ಸಮಿತಿ ರಾಜ್ಯ ಯುವ ಘಟಕದ ಅಧ್ಯಕ್ಷ ರಘು ಜಾಣಗೆರೆ ತಿಳಿಸಿದರು.

Advertisement

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿ, ನಾಡಿನ ನೆಲ-ಜಲ ಭಾಷೆ ರಕ್ಷಣೆ ಮತ್ತುಮುಖ್ಯವಾಗಿ ಜನರನ್ನು ರಾಜ್ಯದ ಉಜ್ವಲ ಭವಿಷ್ಯದೆಡೆಗೆ ಚಲಿಸುವಂತೆ ಪ್ರೇರೇಪಿಸುವುದು “ಚಲಿಸುಕರ್ನಾಟಕ’ದ ಮುಖ್ಯ ಉದ್ದೇಶವೆಂದರು. ನಿರಂತರ ಲೂಟಿ: ಜಿಲ್ಲೆಯಲ್ಲಿ ಕಲ್ಲು, ಮರಳು ಮುಂತಾಗಿ ನೈಸರ್ಗಿಕ ಸಂಪತ್ತು ನಿರಂತರ ಲೂಟಿ ಯಾಗುತ್ತಿದೆ. ಕಳೆದ ವರ್ಷದ ಬರ ಪರಿಹಾರ ಇನ್ನೂಅನೇಕರಿಗೆ ಸಿಕ್ಕಿಲ್ಲ. ಸರ್ಕಾರಿ ಕಚೇರಿಗಳಿಗೆ ಜನಸಾಮಾನ್ಯರು ಅಲೆಯುವುದು ತಪ್ಪಿಲ್ಲ. ಕೋವಿಡ್‌ 19 ಸಂಕಷ್ಟದ ಸಮಯದಲ್ಲೂ ಕೋವಿಡ್‌ ಹೆಸರಿನಲ್ಲಿಹಣ ಲೂಟಿಯಾಗಿದೆ. ಪೆಟ್ರೋಲ್‌, ಡೀಸೆಲ್‌ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ ಎಂದರು.

ಸೆ.17ರಂದು ರಾಮನಗರ ಜಿಲ್ಲೆಗೆ: “ಚಲಿಸು ಕರ್ನಾಟಕ’ ಸೈಕಲ್‌ ಯಾತ್ರೆ 3 ಹಂತಗಳಲ್ಲಿ ನಡೆಯಲಿದೆ. ಸೆಪ್ಟೆಂಬರ್‌ನಲ್ಲಿ ಆರಂಭವಾಗಿ ನವೆಂಬರ್‌ನಲ್ಲಿ ಅಂತ್ಯವಾಗಲಿದೆ. ಮೊದಲ ಹಂತದ 15 ದಿನಗಳ ಯಾತ್ರೆ ಸೆ.14ರಂದು ಕೋಲಾರದಲ್ಲಿ ಆರಂಭವಾಗಲಿದೆ. ಸೆ.17ರಂದು ಕನಕಪುರ ತಾಲೂಕು ಹಾರೋಹಳ್ಳಿತಲುಪಲಿದೆ. ಸೆ.18ರಂದು ರಾಮನಗರ, ಚನ್ನಪಟ್ಟಣ ಮೂಲಕ ಮಂಡ್ಯಕ್ಕೆ ತೆರಳುವುದಾಗಿ ತಿಳಿಸಿದರು. ಅ.5ರಿಂದ 2ನೇ ಹಂತದ ಯಾತ್ರೆ ಉತ್ತರ ಮತ್ತು ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ, ನ.23ರಿಂದ 3ನೇ ಹಂತದ ಸೈಕಲ್‌ ಯಾತ್ರೆ ಉತ್ತರ ಕರ್ನಾಟಕ, ಮಲೆನಾಡು ಮತ್ತು ಕರಾವಳಿ ಭಾಗದ ಜಿಲ್ಲೆಗಳಲ್ಲಿ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ಸೈಕಲ್‌ ಯಾತ್ರೆಯಲ್ಲಿ ಆಸಕ್ತರು ಯಾರು ಬೇಕಾದರೂ ಭಾಗವಹಿಸಬಹುದಾಗಿದ್ದು ಕರ್ನಾಟಕ ರಾಷ್ಟ್ರ ಸಮಿತಿ ವೆಬ್‌ಸೈಟ್‌ ಮೂಲಕ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ತಿಳಿಸಿದರು. ಸಮಿತಿ ಜಿಲ್ಲಾ ಘಟಕದ ಉಪಾಧ್ಯಕ್ಷ ಕೆ.ಎಲ್‌. ಶ್ರೀಧರ್‌, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಶಿವರೇಣುಕಾ, ಜಿಲ್ಲಾಧ್ಯಕ್ಷ ಎನ್‌.ಆರ್‌.ಸುರೇಂದ್ರ, ಸಂಚಾಲಕ ಶಿವರಾಂ ಶೆಟ್ಟಿ, ಪ್ರಮುಖರಾದ ಗಿರೀಶ್‌, ಲೀಲಾವತಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next