Advertisement

ಒಂದೇ ಚುನಾವಣೆಯಿಂದ ದೇಶಕ್ಕೆ ಹಲವು ಲಾಭ  : ಚಕ್ರವರ್ತಿ ಸೂಲಿಬೆಲೆ

09:22 PM Mar 29, 2021 | Team Udayavani |

ಶಿವಮೊಗ್ಗ: ದೇಶದ ಒಂದಿಲ್ಲೊಂದು ರಾಜ್ಯದಲ್ಲಿ ಚುನಾವಣೆ, ಉಪ ಚುನಾವಣೆಗಳ ಹೆಸರಿನಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಇದರಿಂದ ಯಾವುದೇ ಅಭಿವೃದ್ಧಿ ಕೆಲಸಗಳು ಆಗುವುದಿಲ್ಲ. ಅಧಿಕಾರಿಗಳು ಪ್ರಗತಿ ಕಡೆಗೆ ಗಮನಹರಿಸಲಾಗುತ್ತಿಲ್ಲ. ರಕ್ಷಣಾ ಇಲಾಖೆ ಶ್ರಮ ಕೂಡ ಇದರಲ್ಲೇ ವ್ಯಯವಾಗುತ್ತಿದೆ. ವರ್ಷಕ್ಕೊಂದು ಚುನಾವಣೆ ನಡೆದರೆ ಇಡೀ ವ್ಯವಸ್ಥೆಯಲ್ಲಿ ಅಭಿವೃದ್ಧಿ ಮಾಡಲು ಸಾಧ್ಯ. ಈ ಉದ್ದೇಶದಿಂದಲೇ “ಒಂದು ದೇಶ, ಒಂದು ಚುನಾವಣೆ’ ಜಾರಿಗೆ ತರಲು ಕೇಂದ್ರ ಸರಕಾರ ಮುಂದಾಗಿದೆ ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು.

Advertisement

ನಗರದ ನೆಹರೂ ಕ್ರೀಡಾಂಗಣದಲ್ಲಿ ನರೇಂದ್ರ ಮೋದಿ ವಿಚಾರ್‌ ಮಂಚ್‌ ಜಿಲ್ಲಾ ಘಟಕದಿಂದ ಆಯೋಜಿಸಿದ್ದ “ಒಂದು ದೇಶ, ಒಂದು ಚುನಾವಣೆ’ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅಂಕಿ ಅಂಶಗಳ ಪ್ರಕಾರ, ಲೋಕಸಭೆ ಚುನಾವಣೆಗೆ 2009 ರಲ್ಲಿ 1115 ಕೋಟಿ ರೂ., 2014 ರಲ್ಲಿ 3870 ಕೋಟಿ ರೂ. ಖರ್ಚಾಗಿದೆ. ಮುಂಬರುವ ಚುನಾವಣೆಗಳಿಗೆ ಬಹುಶಃ ಐದೂವರೆ ಸಾವಿರ ಕೋಟಿ ರೂ. ಖರ್ಚಾಗುವ ಸಾಧ್ಯತೆ ಇದೆ. ವೆಬ್‌ಸೈಟ್‌ವೊಂದರ ವರದಿ ಪ್ರಕಾರ, ದೇಶದಲ್ಲಿ ಚುನಾವಣೆಗಳಿಗೆ ಹತ್ತು ಸಾವಿರ ಕೋಟಿ ಖರ್ಚು ಮಾಡಲಾಗುತ್ತಿದೆ. ಒಂದು ವೇಳೆ, ಏಕ ಕಾಲಕ್ಕೆ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆ ನಡೆಸಿದರೆ ಚುನಾವಣಾ ಆಯೋಗವೇ ಹೇಳುವಂತೆ ಇದರ ಅರ್ಧ ಖರ್ಚಿನಲ್ಲಿ ಚುನಾವಣೆ ಪ್ರಕ್ರಿಯೆ ಪೂರ್ಣಗೊಳಿಸಬಹುದು. ಇದರಿಂದ ದೇಶದ ಮೇಲೆ ಚುನಾವಣೆಯಿಂದಾಗಿ ಬೀಳುತ್ತಿರುವ ಆರ್ಥಿಕ ಹೊರೆ ತಗ್ಗಿಸಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಮೋದಿ ಅವರನ್ನಂತೂ ಸೋಲಿಸಲಾಗುತ್ತಿಲ್ಲ. ಕನಿಷ್ಠ ಅವರು ತಂದಿರುವ ಕಾಯ್ದೆಗಳನ್ನಾದರೂ ಹಿಂತೆಗೆಯುವಂತೆ ಒತ್ತಡ ಹೇರುವ ಉದ್ದೇಶದಿಂದ ಪ್ರತಿಪಕ್ಷಗಳು ಸುಳ್ಳುಗಳನ್ನು ಹೇಳಿ ಜನರ ದಾರಿ ತಪ್ಪಿಸುತ್ತಿವೆ. ಆದರೆ, ಮೋದಿ ಇಟ್ಟ ಹೆಜ್ಜೆಯನ್ನು ಹಿಂದಿಡುವುದಿಲ್ಲ. ಒಂದು ಚುನಾವಣೆಗೆ ಎಂಎಲ್‌ಎ ಮತ್ತು ಎಂಪಿಗಳು 30 ಸಾವಿರ ಕೋಟಿ ರೂ. ಖರ್ಚು ಮಾಡುತ್ತಾರೆ. ಆಯೋಗದ ಅ ಧಿಕಾರಿಯೊಬ್ಬರು ಹೇಳುವಂತೆ, ಚುನಾವಣೆ ಪ್ರಕ್ರಿಯೆಯಲ್ಲಿ ಆದಷ್ಟು ಬೇಗ ಬದಲಾವಣೆ ತಂದರೆ ಕಪ್ಪು ಹಣ ಸಂಗ್ರಹ ಆಗುವುದನ್ನು ತಡೆಯಬಹುದು ಎಂದಿದ್ದಾರೆ. ಇದೆಲ್ಲದಕ್ಕೂ ನರೇಂದ್ರ ಮೋದಿ ಅವರು ಜಾರಿಗೆ ತರಲು ಉದ್ದೇಶಿಸಿರುವ ಕಾಯ್ದೆ ಸಹಕಾರಿಯಾಗಿದೆ ಎಂದರು. ಈ ಚುನಾವಣೆ ವ್ಯವಸ್ಥೆ ಜಾರಿಗೆ ತಂದಲ್ಲಿ ಫೆಡರಲ್‌ ವ್ಯವಸ್ಥೆ ಹಾಳಾಗುತ್ತದೆ ಎಂದು ಆರೋಪಿಸುತ್ತಿದ್ದಾರೆ. ಇದೇ ಕಾಂಗ್ರೆಸ್‌ನವರು 1955, 57 ಮತ್ತು 62 ರಲ್ಲಿ ಒಂದು ರಾಷ್ಟ್ರ ಒಂದು ಚುನಾವಣೆ ವ್ಯವಸ್ಥೆ ಅಡಿಯಲ್ಲೇ ಚುನಾವಣೆ ಮಾಡಿದ್ದಾರೆ. ಆಗ ಫೆಡರಲ್‌ ರಚನೆಗೆ ಧಕ್ಕೆ ಆಗಿಲ್ಲವೇ ಎಂದು ಪ್ರಶ್ನಿಸಿದರು.

ಮಂತ್ರಿಗಿರಿಗಾಗಿ ಪಕ್ಷಾಂತರ ಮಾಡಲಾಗುವುದಿಲ್ಲ, ರಾಜೀನಾಮೆ ನೀಡಿದ್ದಲ್ಲಿ ಐದು ವರ್ಷ ಕಾಯಲೇಬೇಕು. ಜತೆಗೆ, ಏಕ ವ್ಯಕ್ತಿಯ ಮುಖ ನೋಡಿ ಮತದಾನ ಮಾಡಲಾಗುತ್ತದೆ ಹೀಗೆ ನಾನಾ ಭಯ ಅವರಲ್ಲಿ ಮನೆ ಮಾಡಿರುವುದೇ ಕಾಂಗ್ರೆಸ್‌ ಸೇರಿದಂತೆ ಇತರ ಪಕ್ಷಗಳು ಇದನ್ನು ವಿರೋಧಿಸುವುದಕ್ಕೆ ಮೂಲ ಕಾರಣ ಎಂದರು.

ನರೇಂದ್ರ ಮೋದಿ ವಿಚಾರ್‌ ಮಂಚ್‌ ರಾಷ್ಟ್ರೀಯ ಅಧ್ಯಕ್ಷ ರವಿ ಚಾಣಕ್ಯ ಮಾತನಾಡಿ, ಬರುವ ದಿನಗಳಲ್ಲಿ ಇನ್ನಷ್ಟು ದೊಡ್ಡ ಕಾಯ್ದೆಗಳು ಹೊರಬರಲಿವೆ. ಮೋದಿ ಅವರು ಜಾರಿಗೆ ತಂದ ಕಾಯ್ದೆ ವಾಪಸ್‌ ಪಡೆದಿಲ್ಲ. ಪಡೆಯುವುದೂ ಇಲ್ಲ ಎಂದರು.

Advertisement

ಕಾಂಗ್ರೆಸ್‌ಗೆ ಮಾತನಾಡುವ ತಾಕತ್ತಿಲ್ಲ ಕಾಂಗ್ರೆಸ್‌ ನವರಿಗೆ ದೇಶ ಅಂದರೇನು ಗೊತ್ತಿಲ್ಲ. ವಿಚಾರಗಳ ಬಗ್ಗೆ ಮಾಹಿತಿ ಇಲ್ಲ. ಕಲಾಪದಲ್ಲಿ ಮಾತನಾಡಲು ತಾಕತ್ತೂ ಇಲ್ಲ. ಉತ್ತಮ ವಿಚಾರಗಳ ಬಗ್ಗೆ ಚರ್ಚಿಸದೇ ವಿರೋಧಿಸುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾಡುತ್ತಿರುವ ದ್ರೋಹ ಎಂದು ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದರು. ಕಾಂಗ್ರೆಸ್‌, ಜೆಡಿಎಸ್‌ ಮಿತ್ರರು ದೇಶದ ಬಗ್ಗೆ ಗಮನ ಕೊಡಬೇಕು. ಭ್ರಷ್ಟಾಚಾರ ಅಥವಾ ಪಕ್ಷದ ಬಗ್ಗೆ ಯಾವುದೇ ಭಿನ್ನಾಭಿಪ್ರಾಯಗಳಿದ್ದರೆ ಟೀಕೆ ಮಾಡಲಿ. ಆದರೆ, ಅಭಿವೃದ್ಧಿ ವಿಚಾರಕ್ಕೆ ಸಹಕರಿಸಲಿ ಎಂದರು. ಈ ರೀತಿಯ ಚರ್ಚೆ ನಡೆಸಬೇಕಾದ ಸ್ಥಿತಿಯೇ ನಾಚಿಗೇಡಿನ ಸಂಗತಿಯಾಗಿದೆ. ಸ್ವಾತಂತ್ರÂಕ್ಕಾಗಿ ಹೋರಾಟ ಮಾಡಿದ್ದರ ಹಿಂದಿನ ಉದ್ದೇಶ ಭಾರತ ಉನ್ನತ ಸ್ಥಾನಕ್ಕೆ ಕೊಂಡೊಯ್ಯುವುದು. ಆ ಕೆಲಸವನ್ನೇ ನರೇಂದ್ರ ಮೋದಿ ಮಾಡುತ್ತಿದ್ದಾರೆ ಎಂದು ಹೇಳಿದರು

Advertisement

Udayavani is now on Telegram. Click here to join our channel and stay updated with the latest news.

Next