ಸವಣೂರು: ಪಾಲ್ತಾಡಿ ಗ್ರಾಮದ ಚಾಕೋಟೆತ್ತಡಿ ಶ್ರೀ ಧರ್ಮರಸು ಉಳ್ಳಾಕುಲು ದೈವಸ್ಥಾನದ ವರ್ಷಾವಧಿ ಜಾತ್ರೆಯು ಎ. 22ರಿಂದ ಎ. 24ರ ವರೆಗೆ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು. ಎ. 22ರಂದು ಮುಂಡೆ ಆರೋಹಣ, ಎ.23ರ ಬೆಳಗ್ಗೆ 9ಕ್ಕೆ ತಳಿರುತೋರಣ, 10. 30ಕ್ಕೆ ಹೊರೆಕಾಣಿಕೆ ಸಮರ್ಪಣೆ, ರಾತ್ರಿ ಭಂಡಾರ ತೆಗೆಯುವುದು, ಹೋಮ ನಡೆ ಯಿತು. ಅನಂತರ ಉಳ್ಳಾಕುಲು ಫ್ರೆಂಡ್ಸ್ ಕ್ಲಬ್ ಪ್ರಾಯೋಜಕತ್ವದಲ್ಲಿ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ಯಕ್ಷಗಾನ ಮಂಡಳಿಯಿಂದ ಶ್ರೀದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಿತು.
ಎ. 24ರ ಪೂರ್ವಾಹ್ನ ಉಳ್ಳಾಕುಲು ನೇಮವಾಗಿ ಸಿರಿಮುಡಿ ಗಂಧಪ್ರಸಾದ, ಅನಂತರ ಕೊಳ್ಳಿಕುಮಾರ ದೈವದ ನೇಮ, ಮಹಿಷಂತಾಯ ದೈವದ ನೇಮ, ಕೊಡ ಮಣಿತ್ತಾಯ ದೈವದ ಒಲಸರಿ ನೇಮ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ಅನಂತರ ಪುರುಷ ದೈವದ ನೇಮ, ಪಂಜುರ್ಲಿ ದೈವದ ನೇಮ, ವ್ಯಾಘ್ರ ಚಾಮುಂಡಿ ಓಲಸರಿ ನೇಮ ನಡೆದು ಅನಂತರ ಮುಂಡೆ ಅವರೋಹಣ ನಡೆಯಿತು.
ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ, ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ರೈ ನಳೀಲು, ಅಧ್ಯಕ್ಷ ಸಂಜೀವ ಗೌಡ ಪಾಲ್ತಾಡಿ, ಉಪಾಧ್ಯಕ್ಷರಾದ ರಘುನಾಥ ರೈ ನಡುಕೂಟೇಲು, ಮೋನಪ್ಪ ಗೌಡ ಪಾರ್ಲ, ವಿಟuಲ ಶೆಟ್ಟಿ ಪಾಲ್ತಾಡಿ, ಸೀತಾರಾಮ ರೈ ಕಲಾಯಿ, ಪ್ರವೀಣ್ ರೈ ನಡುಕೂಟೇಲು, ಕಾರ್ಯದರ್ಶಿ ವಿನಯಚಂದ್ರ ಕೆಳಗಿನ ಮನೆ, ಜತೆ ಕಾರ್ಯದರ್ಶಿ ವಿದ್ಯಾಧರ ಗೌಡ ಪಾರ್ಲ, ಕೋಶಾಧಿಕಾರಿ ಜಯರಾಮ ಗೌಡ ದೊಡ್ಡಮನೆ, ದೈವಸ್ಥಾನಕ್ಕೆ ಸಂಬಂಧಪಟ್ಟ ಆರು ಮನೆಗಳ ಮುಖ್ಯಸ್ಥರಾದ ನರಸಿಂಹ ಪಕ್ಕಳ ಗುತ್ತಿನಮನೆ, ಜನಾರ್ದನ ಗೌಡ ಕೆಳಗಿನ ಮನೆ, ತಿಮ್ಮಪ್ಪ ಗೌಡ ದೊಡ್ಡಮನೆ, ಕೆ. ಜಗದೀಶ ಗೌಡ ಖಂಡಿಗೆ, ರಾಮಕೃಷ್ಣ ಗೌಡ ಅಂಗಡಿಹಿತ್ಲು, ಮುಂಡಪ್ಪ ಪೂಜಾರಿ ಬೊಳಿಯಾಲ, ಉಳ್ಳಾಕುಲು ಫ್ರೆಂಡ್ಸ್ ಕ್ಲಬ್‌ನ ಅಧ್ಯಕ್ಷ ಭವಿತ್ ರೈ, ಕಾರ್ಯದರ್ಶಿ ವೆಂಕಟರಮಣ ಗೌಡ ಕೊçಕುಳಿ ಸೇರಿದಂತೆ ವಿವಿಧ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.