Advertisement

ಯೌವನವೆಂಬ ಚೈತ್ರ ಸುಗಂಧ

04:02 AM Jun 10, 2018 | Harsha Rao |

ಮಾಸಗಳಲ್ಲಿ ಜೀವಸೆಲೆಯನ್ನು ಉದ್ದೀಪನಗೊಳಿಸುವ ಮಾಸವೊಂದಿದ್ದರೆ ಅದು ವಸಂತ ಮಾಸವೆಂದು ಎದೆತುಂಬಿ ಹೇಳಬಹುದು. ಅದೇ ರೀತಿ ನಮ್ಮ ಜೀವಿತಾವಧಿಗೆ ಹೆಚ್ಚು ಮೆರಗನ್ನೂ, ಸೊಬಗನ್ನೂ, ಉತ್ತೇಜನವನ್ನೂ ನೀಡಬಲ್ಲ ಪರ್ವ ಕಾಲವೊಂದಿದ್ದರೆ ಅದು ಯೌವನ ಮಾತ್ರ. ನಮ್ಮ ಬದುಕಿನುದ್ದಕ್ಕೂ ಸದಾಕಾಲ ನೆನಪಿನಲ್ಲಿ ಉಳಿಯುವ ಸುಮಧುರ ಕ್ಷಣಗಳು ಘಟಿಸುವುದು ಈ ಯೌವನದÇÉೇ. ಆಯಾ ಕಾಲಘಟ್ಟದಲ್ಲಿ ಅನುಭವಿಸಬೇಕಾದದ್ದನ್ನು ಅನುಭವಿಸದೆ, ಏನನ್ನೋ ಪಡೆಯಲು ಹೋಗಿ ಮಹತ್ತರ ವಾದುದನ್ನು ಕಳಕೊಳ್ಳುವ ನಾವು ಮತ್ತೆ ಅದಕ್ಕಾಗಿ ಕೊರಗುವ ಜಾಯಮಾನದಲ್ಲಿ ಹೆಣಗುತ್ತಿರುವುದನ್ನ, ನಮ್ಮ ನಡುವೆ ಇಂದು ನಾವು ಕಾಣುವ ಸರ್ವೇ ಸಾಮಾನ್ಯ ದೃಶ್ಯ. ಪುನಃ ಆ ಹದಿ ಹರೆಯದ ದಿನಗಳು ಮರಳಿ ಬರಬಾರದೇ ಎಂದು ಸೃಷ್ಟಿಯ ಸುಂದರ, ವಿಚಿತ್ರ, ರಮಣೀಯವೆನಿಸುವ ಆ ದಿನಗಳು ನಮ್ಮ ಜೀವಿತದುದ್ದಕ್ಕೂ ಮತ್ತೆ ಮತ್ತೆ ಕಾಡುತ್ತಾ, ಮನಸ್ಸನ್ನು ಆಕ್ರಮಿಸುತ್ತಿರುತ್ತವೆ!

Advertisement

ಯೌವನಕ್ಕೆ ಬದುಕಲ್ಲಿ ಮಹತ್ತರವಾದುದನ್ನು ಸಾಧಿಸಬೇಕೆಂಬ ಛಲ- ಹಂಬಲ-ಹುಮ್ಮಸ್ಸು ಅದಮ್ಯ ವಾಗಿರುತ್ತದೆ. ಒಂದೊಂದು ಸಾರಿ ನಮಗೆ ಸಾಟಿಯಿಲ್ಲ ಎನಿಸುವಷ್ಟೆತ್ತರಕ್ಕೆ ಬೆಳೆದಿರುತ್ತೇವೆ. ಹರೆಯದ ಮಾದಕ ಮಧುರ ಕ್ಷಣಗಳೇ ಹಾಗೆ. ನೆನಪಿನಲ್ಲಿ ಸದಾ ಉಳಿಯುವ ಸ್ಪರ್ಶ ವೇದನೆಯ ಹಾಗೆ! ಆದ್ದರಿಂದಲೇ ಹರೆಯವು ಆಯುಷ್ಯಕ್ಕೆ ಹೊಸ ತಿರುವನ್ನು ನೀಡುವ, ಬದುಕಿನ ಸುದೀರ್ಘ‌ ಅವಧಿಯ ಅತಿ ಹೆಚ್ಚು ಪ್ರಾಶಸ್ತÂ ಘಟ್ಟ. ನಮ್ಮನ್ನು ಮತ್ತೆ ಮತ್ತೆ ಕಾಡುವ ಒಂದೇ ಒಂದು ಕಾಲ. ಹಾಗಾಗಿ ಯೌವನವು ಸಾಧಿಸಲೆಂದಿರುವ ಆಯು ರ್ಮಾನದ ಪ್ರಮುಖ ಘಟ್ಟ.

ಸಾಧಕರ ಜನನವೂ ಈ ಶುಭಕರ ಘಳಿಗೆಯÇÉೇ ನಡೆಯುತ್ತದೆ. ಯೌವನದಲ್ಲಿ ಎತ್ತ ನೋಡಿದರೂ ಸುಂದರವೇ. ಬಾನಾಡಿ ಹಕ್ಕಿಯಂತೆ ಹಾರುವ ತವಕ, ಗರಿಗೆದರಿ ನಲಿಯುವ ಸುಂದರ ಕನಸುಗಳು, ಸ್ವಪ್ನ ಲೋಕದಲ್ಲಿ ಸ್ವತ್ಛಂದವಾಗಿ ಓಡಾಡುವ ಹಂಬಲ, ಅನ್ನಿಸಿದ್ದನ್ನೆÇÉಾ ಮಾಡಿ ಮುಗಿಸಬೇಕೆಂಬ ಉತ್ಸಾಹ, ಹೃದಯ ಬಿಚ್ಚಿ ಮಾತನಾಡಬೇಕೆಂಬ ತುಡಿತ, ಮಧುರ ಕ್ಷಣಗಳು ಮಂಜುಳ ಗಾನವಾಗಲೆಂಬ ಕಾತರಗಳೆÇÉಾ ನೆನಪಿನಂಗಳದಲ್ಲಿ ಸದಾ ಹಾಜರಿರುವ ವಿಧೇಯ ವಿದ್ಯಾರ್ಥಿಯಂತೆ, ಚಿತ್ತಾರಗಳನ್ನು ಚಿಮ್ಮಿಸುತ್ತಲೇ ಇರುತ್ತದೆ ನಿಶ್ಚಿಂತೆಯ ಬದುಕಿನ ಆ ಕ್ಷಣದಲ್ಲಿ. ಕಾಣುವ ಮತ್ತು ಮೂಡುವ ರಮ್ಯ ಕಲ್ಪನೆಗಳು ಪ್ರಾಯಶಃ ಜೀವಿತಾವಧಿಯÇÉೇ ಮಾನಸಕ್ಕೊದಗುವ ಅದ್ಭುತ ರಮಣೀಯ ಸ್ಪರ್ಶ ಸಂವೇದನೆಗಳು ಎಂದರೆ ತಪ್ಪಾಗಲಾರದು. ನಿಶ್ಚಲ ಜಡಭರಿತ ವಸ್ತು ಕೂಡಾ ಹರೆಯದಲ್ಲಿ ಚಲಿಸಬಲ್ಲವು. ಅಂದರೆ ಯೌವನಕ್ಕೆ ಅದೆಂತಹ ಮಾಂತ್ರಿಕ ಸೆಳೆತ ಇರಬಹುದೆಂದು ಯೋಚಿಸಿ? ಬದುಕು ಅತೀ ಸುಂದರವಾಗಿಯೂ, ಕುರೂಪವು ಅತೀ ಸೌಂದರ್ಯ ವಾಗಿಯೂ ಕಾಣುವುದು ಇÇÉೇ ಅಲ್ಲವೇ!? ಒಬ್ಬ ಕಲಾವಿದನ ಭಾವುಕ ಮನಸ್ಸು ಹರೆಯಕ್ಕಿರುತ್ತದೆ. ಅದ್ದರಿಂದಲೇ ಅಲ್ಲವೇ ಅಲ್ಲಿ ಕಾಣುವ ಎಲ್ಲವೂ ಹಸಿರು-ಹಚ್ಚಹಸಿರು. ಸೇವಿಸುವ ಉಸಿರು- ಬಿಸಿಯುಸಿರು. ಗೆಳತಿಯ ಮೃದು ಬೆರಳ ಸ್ಪರ್ಶ, ಕೋಮಲ ಮೈಯ ನವಿರಾದ ಕಂಪು, ಮುಂಗುರುಳು ಕಿವಿಯಂಚಿನಿಂದ ಹಾರಿ ಕೆನ್ನೆಗೆ ಮುತ್ತಿಕ್ಕಿದ್ದರೆ ಎದೆ ಢವಗುಟ್ಟುವ ಪರಿ, ಬೆಚ್ಚಗಿನ ಮೌನ, ಕಣ್ಣೋಟ- ಆಟಗಳೆಲ್ಲವೂ… ಬಣ್ಣ-ಬಣ್ಣದ ಪಾತರಗಿತ್ತಿಗಳು ಮಕರಂದ ಸವಿಯಲು ಹೊರಡುವ ವೇಳೆಯಂತೆ, ಪ್ರೇಮದ ಹೂವನ್ನು ಕಂಡು-ಕೂಡಿ ಆಡಿದಾಗ ಬಾಳಲ್ಲಿ ಬೆಳಕು ಮೂಡುವಂತೆ. ಈ ಎಲ್ಲವೂ ಜರಗುವುದು ರೋಮಾಂಚನಗೊಳಿಸುವ ಆ ಹೊತ್ತಲ್ಲಿ. ಜೀವನವೊಂದು ಸುಂದರ ಕಾವ್ಯವೆಂದು ಅರಿಯುವುದೂ ಯೌವನದÇÉೇ. ಅಂತ್ರಗಳು ನಿಜಾರ್ಥದಲ್ಲಿ ಸಾರ್ಥಕ್ಯವನ್ನು ಪಡೆಯುವುದು ಕೂಡ ಇದೇ ಕ್ಷಣದಲ್ಲಿ.

ಮನದಾಳದ ಮಾತನ್ನು ಹೊರಗೆಳೆತಂದು ಶಬ್ದಗಳ ಮೂಲಕ ಅಂದವಾಗಿ ಪೋಣಿಸಿ ಒಡಮೂಡಿಸುವ ಪರಿ, ಕೋಪ-ತಾಪಗಳ ಶಕ್ತಿ ಪ್ರದರ್ಶನ, ವಾಸ್ತವದಿಂದ ದೂರವಿದ್ದು ತನ್ನದೇ ಲೋಕದಲ್ಲಿ ವಿಹರಿಸುವ ಧೈರ್ಯ ಕೇವಲ ಆ ವಯಸ್ಸಿಗೇ ಸರಿ. ಸೂರ್ಯ ಬದುಕಿನ ಜೀವಳವಾಗಿದ್ದರೂ ರಜನೀಶ ತುಂಬಾ ಉದ್ದೀಪಕನೆಂಬ ಮಾತು ನಿಜವೆನಿಸುವುದು, ಸತ್ಯದ ಬೋಧನೆಯಾಗುವುದೂ ರಕ್ತ ಬಿಸಿಯಿರುವ ಈ ಘಳಿಗೆಯÇÉೇ. ಇರುಳಿಗಾಗಿ ಹಗಲೆಲ್ಲ ಬದುಕುವುದು. ಹಗಲು ಬದುಕಿ¨ªಾಗ ಇರುಳ ಸುಖದ ಸೀಮೆಯರಸಿ ಹೊರಡುವುದು ಈ ಹರೆಯದಲ್ಲಿಯೇ!

ನಾನೂ ಈ ಎÇÉಾ ಘಟ್ಟಗಳನ್ನು ಅಲ್ಪ ಸ್ವಲ್ಪ$ಅನುಭವಿಸಿಯೇ ಬಂದವನು. ಅಪ್ಪನ ಬುದ್ಧಿಯ ಮಾತಿಗೆ ಕಿವಿ ಕೊಡುವ ಗೋಜಿಗೆ ಹೋಗದೆ, ಆಡಿದ್ದೇ ಆಟ, ನೋಡಿದ್ದೇ ನೋಟವೆಂದು ಮೀಸೆಯನ್ನು ತಿರುವಿದವನು. ಆದರೆ ಯಾವಾಗ ಬುದ್ಧಿಮಾತಿನಿಂದ ಪ್ರಯೋಜನವಿಲ್ಲವೆಂದು ಅಪ್ಪನಿಗೆ ಅರಿವಾಯಿತೋ…ಆಗ ತಮ್ಮ ಲೇಖನಿಯಿಂದ ಮೂಡಿದ ಮೀಸೆ ಮೂಡಿದ ಮಗನಿಗೆ ಪದ್ಯವೊಂದು “ಉದಯವಾಣಿ’ಯÇÉೇ ಪ್ರಕಟವಾಗಿ, ನಂತರದ ದಿನಗಳಲ್ಲಿ ಕಾಲೇಜಿನ ಪ್ರಾಂಶುಪಾಲರಾದಿಯಾಗಿ ಎಲ್ಲರೂ ನನಗೆ ಬುದ್ಧಿ ಹೇಳಿ ಪ್ರಯೋಜನವಿಲ್ಲವೆಂದರಿತ ಮೇಲೆ, ನನ್ನ ಪುಂಡಾಟಿಕೆಯನ್ನು ಕಂಡÇÉೆÇÉಾ ಮೀಸೆ ಮೂಡಿದೆ ಅಂತ ಗೊತ್ತಾಗ್ತಾ ಇದೆ… ಎಂದು ಪದ್ಯದ ಸಾಲುಗಳನ್ನು ಎಲ್ಲರ ಮುಂದೆ ಹೇಳಿ ಕಿಚಾಯಿಸುತ್ತಿದ್ದರು. ಇದು ನನ್ನನ್ನು ಅತಿಯಾಗಿ ಕಾಡಲಾರಂಭಿಸಿ, ಕಡೆಗೂ ಪದ್ಯವನ್ನು ಓದಿ¨ªೆ. ಆಗ ಈ ಪದ್ಯ ನನಗೆ ಬಹಳಷ್ಟು ಕಿರಿಕಿರಿಯನ್ನುಂಟು ಮಾಡಿದ್ದು ಸುಳ್ಳಲ್ಲ. ಯಾಕಾದರೂ ಈ ಪದ್ಯ-ಗದ್ಯ ಅಂತಿವೆಯೋ ಎಂದೆನಿಸುತ್ತಿತ್ತು. ಅಪ್ಪನ ಬಗ್ಗೆ ಒಳಗೊಳಗೇ ಅಸಮಾಧಾನವೂ ಇತ್ತು ಅನ್ನಿ. ಹೇಳಲಾರೆ ಅಷ್ಟೆ.

Advertisement

ಆಗ ಆ ಪದ್ಯವು ಸ್ವಾತಂತ್ರÂಕ್ಕೆ ಕಡಿವಾಣ ಹಾಕುವಂತೆ, ನೀತಿ ಬೋಧಕನಂತೆ ಕಾಡಿತ್ತು. ಕಾಲಕ್ರಮೇಣವದು ಆಪ್ತವಾಗುತ್ತಾ, ಸತ್ಯ ಯಾವತ್ತೂ ಅಪ್ರಿಯವಾಗಿರುತ್ತದೆಂಬುದನ್ನು ಅರಿಯುವಂತೆ ಮಾಡಿತ್ತು. ಕವಿ ಸಮಯವಿಲ್ಲಿ ಎಚ್ಚರಿಕೆಯ ಮಾತನ್ನು ಹೇಳುತ್ತಾ, ಬರುವ ದಿನಗಳ ಬಗ್ಗೆ, ಬಾಳಿನ ಬಗ್ಗೆ, ಕೋಪ-ತಾಪ-ಪ್ರೀತಿಯ ಹಲವು ಮಗ್ಗಲುಗಳನ್ನು ನೇರವಾಗಿ ಎÇÉಾ ಕಾಲಘಟ್ಟದ ತಂದೆ-ಮಗನಿಗೂ ಅನ್ವಯಿಸುವಂತೆ, ಯೌವನದ ತೇರಿಗೆ ಉತ್ತಮ ಗಾಲಿಗಳಾಗಬಲ್ಲ ಈ ಪದ್ಯವನ್ನು ತುಂಬು ಆದ್ರìತೆಯಿಂದ ಬರೆದದ್ದು ಕವಿ ಶ್ರೀ. ಶ್ರೀಕೃಷ್ಣಯ್ಯ ಅನಂತಪುರ. ಅವರು ನನ್ನ ಜನಕನೂ ಹೌದು. ಆ ಪದ್ಯವು ಈಗೀನ ಮೀಸೆ ಮೂಡಿದ ತರುಣರ ಕಂಡಾಗ, ಅವರ ಆಟಗಳನ್ನು-ನೋಟಗಳನ್ನು ಕಂಡಾಗಲೆಲ್ಲ ಅದರ ಒಂದೊಂದೇ ಸಾಲುಗಳನ್ನು ನಾನು ಗುನುಗುತ್ತಲೇ ಇರುತ್ತೇನೆ.

ಅದು ಹೀಗಿದೆ;
ಮೀಸೆ ಮೂಡುತ್ತಿರುವ ಮಗನೆ/ ಆಸೆಗಳಿರಬಹುದು ಹಲವಾರು/ ಯೌವನದ ಕುದುರೆ ಬಯಸುವುದು ಸದಾ ಬಂಗಾರದ್ದೇ ತೇರು/ ದರ್ಪ ದರ್ಬಾರು…

ಯೌವನದಲ್ಲಿ ಬಯಸುವ ದರ್ಪ-ದರ್ಬಾರು, ಅಡ್ಡಾದಿಡ್ಡಿಯಾಗಿ ಓಡುವ ಬಯಕೆಗಳು, ಎದುರಿಗೆ ಖೆಡ್ಡಾಗಳಿರುವುದನ್ನೂ ಗಮನಿಸುವ ಸ್ಥಿತಿಯಿರದ ಆ ಹೊತ್ತು. ನಾಲಿಗೆ ತಿರುಗಿಸುವಾಗ ಎದುರಿಗೆ ಹಲ್ಲುಗಳಿರುವುದನ್ನು ಮರೆಯಬಾರದಲ್ಲವೇ ಎಂದು ಕವಿ ಕೇಳುವ ಪರಿ ಸಲಿಗೆಯ, ಎಚ್ಚರಿಕೆಯ ಮಾತಾಗಿಯೂ ಧ್ವನಿಸುತ್ತದೆ. ಹೃದಯಂಗಮ ಹಸಿರಲ್ಲೂ ಉಸಿರು ಬಿಗಿ ಹಿಡಿದು ವಜ್ಜೆ ಹಾಕದೆ ಹೆಜ್ಜೆಯಿಡಬೇಕು; ಹಸಿರ ಬಸಿರೊಳಗೆಲ್ಲಿಯಾದರು ಹೆಬ್ಬುಲಿಗಳು ಹೊಂಚು ಹಾಕುತ್ತಿರಬಹುದೆಂದು, ಯೌವನದಲ್ಲಿರುವ ಮತ್ತು ಇರಲೇಬೇಕಾದ ಆತುರದ, ಅಧಮ್ಯ ಹುಮ್ಮಸ್ಸಿಗೆ ವಾಸ್ತವ ಬದುಕಿನ ಇನ್ನೊಂದು ಮುಖವನ್ನೂ ಪರಿಚಯಿಸುತ್ತಾರೆ.

ಹೂವುಗಳಿಗೆ ಮಕರಂದ/ ಹೃದಯಗಳಿಗೆ ಪ್ರಮೋದ/ ಇರಲೇಬೇಕೆನ್ನುವ ವಾದ ಪ್ರಮಾದ.. ಗದರಿಸಿ ಬಿಗಿ ಹಿಡಿದು ಬೆನ್ನಿಗೆರಡು ಬಿಗಿದಿರಲೂಬಹುದು/ ಅಂದ ಮಾತ್ರಕ್ಕೆ ಅಪ್ಪನಲ್ಲಿ ಪ್ರೀತಿಯೊರತೆಗೆ ಕೊರತೆಯೆಂದೆಣಿಸದಿರು/ ನನ್ನಾಣೆ ನೀನು ನನ್ನುಸಿರು- ಎÇÉಾ ಅರಿವಾದೀತು ಮಗನೆ  ಬೆಳೆದಾಗ ಹೊಲ ತುಂಬಾ ಹೊನ್ನ ಕದಿರು. ಬದುಕು ನಿರ್ಧರಿಸಿದಂತಿರುವುದಿಲ್ಲ. ನೋವು ನಲಿವುಗಳ ಮಿಶ್ರಣವು ಸರದಿಯಂತೆ ದಾಳಿಯಿಡುವುದು ಪ್ರಕೃತಿ ನಿಯಮ.

ನಾವರಿಯದ ಬಹುವದನಗಳು ಲೋಕಕ್ಕಿದೆಯೆಂದು ವಾಸ್ತವತೆಯನ್ನು ಚಿತ್ರಿಸಿಡುತ್ತಾರೆ. ಸುಮಾರ್ಗ ಬದುಕಲ್ಲಿ ಯಾವತ್ತೂ ದೊರೆಯುವುದಿಲ್ಲ. ಹಳ್ಳ, ದಿಣ್ಣೆಯಿಂದ ರಾಡಿಯಾಗಿರುವ ಜಾರು ದಿನ್ನೆಗಳಿರುತ್ತವೆ. ಯೌವನದ ಭರಾಟೆಯಲ್ಲಿ ಎಗ್ಗಿಲ್ಲದೆ ನಡೆಯುವ ಹೊತ್ತಲ್ಲಿ ಮುಗ್ಗರಿಸಬಾರದೆಂದು, ರೂಢಿಯಾಗುವ ತನಕ ಮೂಗುದಾರ ಹಿಡಿದಿದ್ದೇನೆಂದೂ ಅಪ್ಪ ಮಗನಿಗೆ ಪ್ರೀತಿಯಿಂದ ಗದರುವ ಆಪ್ತತೆಯಿದೆ. ರಮ್ಯಾನುಭವದ ಮಕರಂದವನ್ನು ಸವಿಯುತ್ತಿರುವ ನವ ಹೃದಯಕ್ಕೆ ಈ ಪರಿಯಲ್ಲಿ ಹೇಳುವ ತಂದೆಯಂದಿರಬೇಕಾದುದು ಕಾಲದ ತುರ್ತು.  

ಯೌವನವೆಂಬ ಶ್ರೇಷ್ಠ ಕಾಲವನ್ನು ಸರಿಯಾಗಿ ಉಪಯೋಗಿಸಬೇಕು. ಮುಂದೆ ಅವುಗಳು ಶ್ರಾವಣದ ಜಿಟಿ ಜಿಟಿ ಮಳೆಗೆ ಹೊರಕ್ಕೆ ಕಾಲಿಕ್ಕಲೂ ಆಗದೆ ಸುಮ್ಮನೆ ಒಳಮನೆಯಲ್ಲಿ ಬೆಚ್ಚಗೆ ಕುಳಿತಾಗ, ನೆನಪುಗಳ ಮಾತೆ ಮಧುರವೆಂದು ಗುನುಗಿಸು ವಂತಿರಬೇಕು. ಯೌವನಕ್ಕೆ ತನ್ನದೇ ಆದ ಹಿರಿಮೆಯಿದೆ, ಗರಿಮೆಯಿದೆ, ಚಿತ್ತ ಚೈತ್ರದ ಸುಗಂಧವಿದೆ. ಯೌವನವು ಬದುಕಿನ ಸಾರ್ಥಕತೆಯನ್ನು ಶುಭಕರವಾಗಿಸಿಕೊಳ್ಳುವ ಪರ್ವಕಾಲ. ಯೌವನವನ್ನು ಚಿರನೂತನವೆಂದೂ, ನಿತ್ಯೋತ್ಸವದ ದೀಪಾವಳಿಯೆಂದೂ ಕರೆದರೆ ನೀವಿಲ್ಲ ಎನ್ನಲಾರಿರಿ ಅಲ್ವೇ! 

– ಸಂತೋಷ್‌ ಅನಂತಪುರ

Advertisement

Udayavani is now on Telegram. Click here to join our channel and stay updated with the latest news.

Next