Advertisement

ಮಾಜಿ ಪತ್ನಿ ಸಮಂತಾರನ್ನು ಲವ್ಲಿ ವುಮೆನ್‌ ಎಂದ ಚೈತನ್ಯ !

10:08 PM May 06, 2023 | Team Udayavani |

ಖ್ಯಾತ ತೆಲುಗು ನಟ ನಾಗಚೈತನ್ಯ ಹಾಗೂ ನಟಿ ಸಮಂತಾ ವಿಚ್ಚೇದನ ಬಳಿಕ ಇವರಿಬ್ಬರ ನಡುವಿನ ಬಿರುಕಿಗೆ ಹಲವು ಕಾರಣಗಳು ಮಾಧ್ಯಮಗಳಲ್ಲಿ,ಜಾಲತಾಣಗಳಲ್ಲಿ ಹರಿದಾಡಿತ್ತು.ಸಮಂತಾ ಹಾಗೂ ಚೈತನ್ಯರಿಗೆ ಒಬ್ಬರನ್ನೊಬ್ಬರು ಕಂಡರೆ ಆಗುವುದೇ ಇಲ್ಲವೆಂದು ಬಿಂಬಿಸಲಾಗಿತ್ತು.ಆದರೀಗ ನಾಗಚೈತನ್ಯ ತಮ್ಮ ಮಾಜಿ ಪತ್ನಿಯನ್ನು ಲವ್ಲಿ ವುಮೆನ್‌ ಎಂದು ಹೊಗಳುವ ಮೂಲಕ ಈ ವದಂತಿಗಳಿಗೆ ತೆರೆ ಎಳೆದಿದ್ದಾರೆ.ಸಂದರ್ಶನವೊಂದರಲ್ಲಿ ಮಾತನಾಡಿ, ವಿಚ್ಚೇದನ ಪಡೆದು ಒಂದು ವರ್ಷವಾಗಿದೆ ಆದರೆ, ನಮ್ಮ ನಡುವಿನ ಪರಸ್ಪರ ಗೌರವ ಎಂದಿಗೂ ಕಡಿಮೆಯಾಗಿಲ್ಲ.ಸಮಂತಾ ತಮ್ಮ ಬದುಕಿನಲ್ಲಿ ನಾನು ನನ್ನ ವೈಯಕ್ತಿಕ ಜೀವನದಲ್ಲಿ ಹಾಯಾಗಿದ್ದೇವೆ ಎಂದು ಚೈತನ್ಯ ಹೇಳಿಕೊಂಡಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next