Advertisement

ಇಲಾಖೆಗೆ ಮಾಹಿತಿ ಕೊರತೆ

11:21 AM Apr 04, 2018 | Team Udayavani |

ಬೆಂಗಳೂರು: ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಜಾರಿಯಾಗಿ ಎಂಟು ವರ್ಷ ಕಳೆದರೂ ಸರ್ಕಾರ ಮತ್ತು ಅಧಿಕಾರಿಗಳಿಗೆ
ಇದರ ಬಗ್ಗೆ ಸೂಕ್ತ ಮಾಹಿತಿಯಿಲ್ಲ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಡಾ. ಕೃಪಾ ಆಳ್ವ
ಆರೋಪಿಸಿದ್ದಾರೆ.

Advertisement

ಆರ್‌ಟಿಇ ಕಾರ್ಯಪಡೆಯಿಂದ ಮಂಗಳವಾರ ಆಯೋಗದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಆರ್‌ಟಿಇ ದಿನ ಮತ್ತು
ಆರ್‌ಟಿಇ ಅವಲೋಕನ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಆರ್‌ಟಿಇ ಕಾಯ್ದೆ ಜಾರಿಗೆ ಬಂದು ಇಷ್ಟು ವರ್ಷವಾದರೂ ಸರ್ಕಾರ ಮತ್ತು ಅಧಿಕಾರಿಗಳು ಅದನ್ನು ಅರ್ಥೈಸಿಕೊಳ್ಳವಲ್ಲಿ ವಿಫ‌ಲರಾಗುತ್ತಿದ್ದಾರೆ. ಹೀಗಾಗಿ,
ಆರ್‌ಟಿಇ ಉದ್ದೇಶವೂ ಸೋಲುತ್ತಿದೆ ಎಂದು ಹೇಳಿದರು.

ಆರ್‌ಟಿಇ ಪಾಲನೆಯಲ್ಲಿ ಅಧಿಕಾರಿಗಳ ಪಾತ್ರ ಬಹಳ ಮುಖ್ಯವಾಗಿದೆ. ಮಕ್ಕಳ ಹಕ್ಕುಗಳ ರಕ್ಷಣೆ ಶಿಕ್ಷಣ ಸಂಸ್ಥೆಗೆ
ಸೀಮಿತವಾಗಿಲ್ಲ. ಸಮಾಜವೂ ಇದರಲ್ಲಿ ಭಾಗಿಯಾಗಬೇಕು. ಆರ್‌ಟಿಇ ವ್ಯಾಖ್ಯಾನ ದಾರಿ ತಪ್ಪದಂತೆ ಎಲ್ಲರೂ ಎಚ್ಚರ
ವಹಿಸಬೇಕು ಎಂದರು.

ಆಯೋಗದ ಸದಸ್ಯ ಮರಿಸ್ವಾಮಿ ಮಾತನಾಡಿ, ಶಿಕ್ಷಣದ ಉದ್ದೇಶ ಗೊತ್ತಿಲ್ಲದವರು ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿ
ಅದನ್ನು ಕೈಗಾರಿಕೆಗಳಂತೆ ನಡೆಸುತ್ತಿದ್ದಾರೆ. ಸರ್ಕಾರ ಮತ್ತು ಶಿಕ್ಷಣ ಇಲಾಖೆ ಕೂಡ ಖಾಸಗಿ ಶಾಲೆಗಳ ನಿಯಂತ್ರಣದಲ್ಲಿ ಎಡವಿದೆ ಎಂದು ಹೇಳಿದರು.

 ಆರ್‌ಟಿಇ ಅನುಷ್ಠಾನದಲ್ಲಿ ಉತ್ತಮ ಸಾಧನೆ ಮಾಡಿದ ವಾಸವಿ ವಿದ್ಯಾನಿಕೇತನ ಟ್ರಸ್ಟ್‌ನ ಶಾಲೆಯ ಪರವಾಗಿ
ಪ್ರಾಂಶುಪಾಲೆ ಸರಸ್ವತಿಯವರನ್ನು ಸನ್ಮಾನಿಸಲಾಯಿತು. ಆಯೋಗದ ಸದಸ್ಯರಾದ ರೂಪ ನಾಯಕ್‌, ಚಂದ್ರಶೇಖರ್‌ ಅಲಿಪುರ, ಆರ್‌ಟಿಇ ಕಾರ್ಯಪಡೆಯ ರಾಜ್ಯ ಸಂಚಾಲಕ ನಾಗಸಿಂಹ ಜಿ.ರಾವ್‌ ಇತರರಿದ್ದರು.

Advertisement

ಕಾರ್ಯಪಡೆಯ 8 ಶಿಫಾರಸುಗಳು
 ಶಿಕ್ಷಣ ಇಲಾಖೆಯಲ್ಲಿ ಉನ್ನತ ಹುದ್ದೆಯ ಲ್ಲಿರುವ ಅಧಿಕಾರಿಗಳು ಶಿಕ್ಷಣ ಹಕ್ಕು ಕಾಯ್ದೆ, ರಾಜ್ಯ ನಿಯಮ, ಇಲಾಖೆಯ ಸುತ್ತೋಲೆ ಅಧ್ಯಯನ ಮಾಡಿ, ಸಾರ್ವಜನಿಕ ಹೇಳಿಕೆ ನೀಡಬೇಕು.

„ ಆರ್‌ಟಿಇ ಅಡಿ ಮೀಸಲಿಟ್ಟಿರುವ ಶೇ.25ರಷ್ಟು ಸೀಟಿಗೆ ಅಗತ್ಯವಿರುವ ಆದಾಯ ಪ್ರಮಾಣ ಪತ್ರ ಹಂಚಿಕೆಯಲ್ಲಿ
ಆಗುವ ಅನ್ಯಾಯ ತಡೆಗೆ ಶಿಕ್ಷಣ ಇಲಾಖೆ ಮತ್ತು ಕಂದಾಯ ಇಲಾಖೆ ಜಂಟಿ ಸಮಿತಿ ರಚಿಸಬೇಕು.

„ ಆರ್‌ಟಿಇ ಉಲ್ಲಂಘಟನೆಯ ಬಗ್ಗೆ ಬಿಇಒ, ಡಿಡಿಪಿಐಗಳು ಗಮನ ಹರಿಸದೇ ಇದ್ದಾಗ ಆಯೋಗ ಪ್ರಶ್ನಿಸಬೇಕು.
 
„ ಶಿಕ್ಷಣ ಇಲಾಖೆ ಹೊರಡಿಸುವ ಆರ್‌ಟಿಇ ಕಾಯ್ದೆ ಕುರಿತು ಸುತ್ತೋಲೆಗಳನ್ನು ಆಯೋಗದ ಗಮನಕ್ಕೆ ತಂದು ಶಾಲೆಗೆ
ತಲುಪಿಸಬೇಕು. 

„ ಸಾರ್ವಜನಿಕ ವಿಚಾರಣಾ ಕಾರ್ಯ ಕ್ರಮವನ್ನು ಬಿಇಒಗಳು ಅನುಸರಿಸಬೇಕು. „ ಖಾಸಗಿ ಶಾಲೆಗಳಲ್ಲಿ ಪೋಷಕರ ಸಂಘ ತೆರೆಯಬೇಕು. 

„ ಆರ್‌ಟಿಇ ಸಂಘಟನೆಗಳ ಮಾಹಿತಿಯನ್ನು ಆಯೋಗ, ಇಲಾಖೆ ಪಡೆಯಬೇಕು. „ ಪ್ರತಿ ಶಾಲೆಯಲ್ಲೂ ಮಕ್ಕಳ ಹಕ್ಕುಗಳ ರಕ್ಷಣಾ ನೀತಿ ಸಂಹಿತೆ ಜಾರಿ ಮಾಡಿದ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು.

Advertisement

Udayavani is now on Telegram. Click here to join our channel and stay updated with the latest news.

Next