Advertisement

ಬಂಟ್ವಾಳ: ರಿಕ್ಷಾಕ್ಕೆ ಹತ್ತುವಾಗ ಇದ್ದ ವೃದ್ದೆಯ ಚಿನ್ನದ ಸರ ಇಳಿಯುವಾಗ ಮಾಯಾ….

01:24 PM Oct 13, 2022 | Team Udayavani |

ಬಂಟ್ವಾಳ: ಕೆಲಸ ಮುಗಿಸಿ ರಿಕ್ಷಾದಲ್ಲಿ ಮನೆಗೆ ತೆರಳುತ್ತಿದ್ದ ವೃದ್ದೆಯೋರ್ವರ ಕುತ್ತಿಗೆಯಲ್ಲಿದ ಲಕ್ಷಾಂತರ ರೂ‌. ಮೌಲ್ಯದ ಚಿನ್ನದ ಸರ ಕಳೆದುಹೋದ ಘಟನೆ ಬಂಟ್ವಾಳ ನಗರ ಪೋಲೀಸ್ ಠಾಣಾ ವ್ಯಾಪ್ತಿಯ ಭಂಡಾರಿಬೆಟ್ಟು ಎಂಬಲ್ಲಿ ಅ.12 ರಂದು ಸಂಜೆ ವೇಳೆ ನಡೆದಿದೆ.

Advertisement

ಮೀನಾಕ್ಷಿ ಭಂಡಾರಿಬೆಟ್ಟು ಎಂಬವರ ಕುತ್ತಿಗೆಯಿಂದ ಸುಮಾರು 1.50 ಲಕ್ಷ ಮೌಲ್ಯದ 4 ಪವನ್ ತೂಕದ ಚಿನ್ನದ ಸರ ಕಳವಾಗಿದೆ.

ಮೀನಾಕ್ಷಿ ಅವರು ಬಿಸಿರೋಡಿನಲ್ಲಿ ಮನೆ ಕೆಲಸ ಮುಗಿಸಿ ರಿಕ್ಷಾದಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ.

ಕಳ್ಳಿಮಾರ್ ಅಂಗಡಿಯೊಂದರಿಂದ ಸಾಮಾಗ್ರಿಗಳನ್ನು ಖರೀದಿ ಮಾಡಿದ ಬಳಿಕ ಬಂಟ್ವಾಳಕ್ಕೆ ತೆರಳುವ ಸರ್ವೀಸ್ ರಿಕ್ಷಾದಲ್ಲಿ ತೆರಳಿದ್ದರು. ರಿಕ್ಷಾದಲ್ಲಿ ಒಟ್ಟು ಹೊರ ಜಿಲ್ಲೆಯ ಅಪರಿಚಿತ ಮೂವರು ಮಹಿಳೆಯರಿದ್ದು, ರಿಕ್ಷಾದಲ್ಲಿ ಕುಳಿತುಕೊಳ್ಳುವ ಮುನ್ನ ಓರ್ವ ಮಹಿಳೆ ರಿಕ್ಷಾದಿಂದ ಇಳಿದು ಮೀನಾಕ್ಷಿ ಅವರನ್ನು ಮಧ್ಯದಲ್ಲಿ ಕೂರಲು ಸೂಚಿಸಿದ ಹಿನ್ನೆಲೆಯಲ್ಲಿ ಅವರು ಮಧ್ಯದಲ್ಲಿ ಕುಳಿತಿದ್ದರು. ಬಳಿಕ ಮೀನಾಕ್ಷಿ ಅವರು ಭಂಡಾರಿಬೆಟ್ಟು ಮನೆಯ ಸಮೀಪ ಇಳಿದಾಗ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಾಣೆಯಾಗಿದ್ದು, ಗಮನಕ್ಕೆ ಬಂದಿತ್ತು.

ಕೂಡಲೇ ರಿಕ್ಷಾವನ್ನು ಫಾಲೋ ಮಾಡಿ ಹೋಗಿ ರಿಕ್ಷಾ ಚಾಲಕನನ್ನು ಕೇಳಿದಾಗ ರಿಕ್ಷಾದಲ್ಲಿ ಬಂಗಾರದ ಪತ್ತೆಯಾಗಿಲ್ಲ. ಆದರೆ ರಿಕ್ಷಾದಲ್ಲಿದ್ದ ಮೂವರು ಅಪರಿಚಿತ ಮಹಿಳೆಯರ ಬಗ್ಗೆ ಸಂಶಯ ಮೂಡಿದೆ. ರಿಕ್ಷಾದಲ್ಲಿದ್ದ ಮೂವರು ಮಹಿಳೆಯರು ಬೈಪಾಸ್ ನಲ್ಲಿ ಇಳಿದು ಕಾರ್ಕಳಕ್ಕೆ ತೆರಳುವ ಬಸ್ ಬಗ್ಗೆ ರಿಕ್ಷಾ ಚಾಲಕನಲ್ಲಿ ಮಾಹಿತಿ ಕೇಳಿದ್ದಾರೆ. ಮಹಿಳೆಯರೇ ರಿಕ್ಷಾದಲ್ಲಿ ಸರವನ್ನು ಎಗರಿಸಿರಬಹುದು ಎಂಬ ಸಂಶಯ ಮೂಡಿದ್ದು, ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next