Advertisement

ಸ್ಪಿನ್ನರ್‌ ಯಜುವೇಂದ್ರ ಚಹಲ್‌ ಹೆತ್ತವರಿಗೆ ಕೋವಿಡ್ ಪಾಸಿಟಿವ್

10:43 PM May 13, 2021 | Team Udayavani |

ಹೊಸದಿಲ್ಲಿ : ಸ್ಪಿನ್ನರ್‌ ಯಜುವೇಂದ್ರ ಚಹಲ್‌ ಅವರ ತಂದೆ ಮತ್ತು ತಾಯಿಗೆ ಕೊರೊನಾ ಸೋಂಕು ತಗುಲಿದೆ. ತಂದೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತಾಯಿ ಮನೆಯಲ್ಲೇ ಐಸೊಲೇಶನ್‌ನಲ್ಲಿದ್ದಾರೆ ಎಂದು ಚಹಲ್‌ ಅವರ ಪತ್ನಿ ಧನಶ್ರೀ ವರ್ಮ ತಿಳಿಸಿದ್ದಾರೆ.

Advertisement

“ಐಪಿಎಲ್‌ ವೇಳೆ ಆರ್‌ಸಿಬಿ ಬಯೋಬಬಲ್‌ ಏರಿಯಾದಲ್ಲಿದ್ದಾಗ ನನ್ನ ತಾಯಿ ಮತ್ತು ಸೋದರನ ಫ‌ಲಿತಾಂಶ ಕೂಡ ಪಾಸಿಟಿವ್‌ ಬಂದಿತ್ತು. ಆಗ ನಾನು ಅಸಹಾಯಕಳಾಗಿದ್ದೆ. ಅದೃಷ್ಟವಶಾತ್‌ ಅವರು ಚೇತರಿಸಿಕೊಂಡರು.

ಈಗ ಅತ್ತೆ-ಮಾವನವರ ಆರೋಗ್ಯ ನೋಡಿಕೊಳ್ಳುತ್ತಿದ್ದೇನೆ’ ಎಂಬುದಾಗಿ ಧನಶ್ರೀ ಇದೇ ವೇಳೆ ಹೇಳಿದರು. ಜತೆಗೆ ಎಲ್ಲರೂ ಮುನ್ನೆಚ್ಚರಿಕೆ ಕ್ರಮವನ್ನು ವಹಿಸಿ, ಆರೋಗ್ಯದಿಂದಿರಿ ಎಂದೂ ಸಲಹೆಯಿತ್ತರು.

ಇದನ್ನೂ ಓದಿ :ರಾಕೆಟ್ ದಾಳಿಯಲ್ಲಿ ಮಡಿದ ಕೇರಳದ ಸೌಮ್ಯ ಕುಟುಂಬದ ಜವಾಬ್ದಾರಿ ಹೊತ್ತ  ಇಸ್ರೇಲ್ ಸರ್ಕಾರ

Advertisement

Udayavani is now on Telegram. Click here to join our channel and stay updated with the latest news.

Next