Advertisement

ಜಮ್ಮು ನಿವಾಸಿಗಳಲ್ಲೀಗ ಚಡ್ಡಿ ಗ್ಯಾಂಗ್‌ ಚೋರರ ಭೀತಿ, ಪೊಲೀಸ್‌ ಕಾರ್ಯಾಚರಣೆ

08:40 AM Jun 04, 2019 | Sathish malya |

ಜಮ್ಮು : ನಗರದಲ್ಲಿನ ಮನೆಗಳಿಗೆ ನುಗ್ಗಿ ಕಳ್ಳತನ, ದರೋಡೆ ಮಾಡುವ, ಒಳ ಉಡುಪು ತೊಟ್ಟ ಯುವಕರ ಚಡ್ಡಿ ಗ್ಯಾಂಗ್‌ ನ ಫೋಟೋ ಮತ್ತು ವಿಡಿಯೋಗಳು ನಗರದ ಜನರಲ್ಲಿ ಭೀತಿ ಸೃಷ್ಟಿಸಿವೆ.

Advertisement

ಬೀಗ ಹಾಕಲ್ಪಟ್ಟ ಮನೆಗಳಿಗೆ ರಾತ್ರಿ ವೇಳೆ ಕೇವಲ ಒಳ ಚಡ್ಡಿಯಲ್ಲಿ ಪ್ರವೇಶಿಸಿ ಕಳ್ಳತನ ಮಾಡುವ ಈ ಗ್ಯಾಂಗಿನ ಯುವ ಸದಸ್ಯರು ಕೆಲವು ಮನೆಗಳನ್ನು ಪ್ರವೇಶಿಸುವ ಸಿಸಿಟಿವಿ ವಿಡಿಯೋಗಳು ಮತ್ತು ಫೋಟೋಗಳು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರವಾಗಿ ಸುತ್ತಾಡುತ್ತಿವೆ. ಅಂತೆಯೇ ವೈರಲ್‌ ಆಗಿವೆ.

ಜಮ್ಮು ಪೊಲೀಸರೀಗ ಚಡ್ಡಿ ಗ್ಯಾಂಗಿನವರನ್ನು ಸೆರೆ ಹಿಡಿಯುವ ವ್ಯಾಪಕ ಕಾರ್ಯಾಚರಣೆ ಕೈಗೊಂಡಿದ್ದಾರೆ. ಚಡ್ಡಿ ಗ್ಯಾಂಗಿನವರು ಮನೆಯೊಳಗೆ ಸದಸ್ಯರು ಇರುವಾಗಲೂ ಒಳಹೊಕ್ಕು ಕಳ್ಳತನ, ದರೋಡೆ ನಡೆಸಿರುವ ಪ್ರಕರಣಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next