Advertisement
ಬೆಂಗಳೂರು ಕಡೆಯಿಂದ ಬಂದ ಸರಕು ಸಾಗಾಣಿಕೆ ವಾಹನ ಚಾಲಕನ ನಿಯಂತ್ರಣ ತಪ್ಪಿ ಎರಡು ಕಾರುಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಒಬ್ಬರು ಸ್ಥಳದಲ್ಲಿ ಮೃತಪಟ್ಟಿದ್ದು ಇನ್ನೂ ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಪೋಲಿಸರು ತಿಳಿಸಿದ್ದಾರೆ.
Related Articles
Advertisement
ಬೆಂಗಳೂರು ಕಡೆಯಿಂದ ಬಂದ ಸರಕು ಸಾಗಾಣಿಕೆ ವಾಹನ ನಿಯಂತ್ರಣ ತಪ್ಪಿ ಮೊದಲು ಒಂದು ಕಾರಿಗೆ ಡಿಕ್ಕಿ ಹೊಡೆದು ನಂತರ ಸಮೀಪದಲ್ಲಿ ಅಂಗಡಿಗಳಿಗೆ ನುಗ್ಗಿದೆ ಇದರಿಂದ ಅಲ್ಲಿ ಚಹಾ ಸೇವಿಸುತ್ತಿದ್ದ ಮೂರು ತೀವ್ರ ಗಾಯಗೊಂಡಿದ್ದಾರೆ.
ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರು ಚಿಕಿತ್ಸೆ ಫಲಕಾರಿಯಾಗದೆ ಮೂವರು ಕೊನೆಯುಸಿರು ಎಳೆದಿದ್ದಾರೆ ಘಟನೆಯಲ್ಲಿ ಮತ್ತಿಬ್ಬರು ತೀವ್ರ ಗಾಯಗೊಂಡಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳುಹಿಸಲಾಗಿದೆ.
ಘಟನಾ ಸ್ಥಳಕ್ಕೆ ಜಿಲ್ಲಾ ಎಸ್ಪಿ ಮಿಥುನ್ ಕುಮಾರ್, ಡಿವೈಎಸ್ಪಿ ರವಿಶಂಕರ್, ಸಿಪಿಐ ಪ್ರಶಾಂತ್ ಹಾಗೂ ನಂದಿ ಪೋಲಿಸ್ ಠಾಣೆಯ ಪಿಎಸ್ಐ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿದ್ದಾರೆ.