Advertisement

ಸಾಮಾಜಿಕ ಅಂತರವೊಂದೇ ಮದ್ದು

03:04 PM Apr 18, 2020 | Naveen |

ಚಡಚಣ: ಜಿಲ್ಲೆಯಲ್ಲಿ 17 ಕೋವಿಡ್ ಸೋಂಕಿತರ ಪತ್ತೆಯಾಗಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಈ ಮಹಾಮಾರಿಯಿಂದ ತಪ್ಪಿಸಿಕೊಳ್ಳಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೊಂದೇ ಮದ್ದು ಎಂದು ಶಾಸಕ ಡಾ| ದೇವನಾನಂದ ಚವ್ಹಾಣ ಹೇಳಿದರು.

Advertisement

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಕರ್ನಾಟಕ-ಮಹಾರಾಷ್ಟ್ರದ ಗಡಿಯಲ್ಲಿರುವ ಚಡಚಣ ಪಟ್ಟಣಕ್ಕೆ ಮಹಾರಾಷ್ಟ್ರದಿಂದ ಆಗಮಿಸುವ ಪ್ರತಿಯೊಬ್ಬರನ್ನು ತೀಕ್ಷಣ್ಣವಾಗಿ ಪರೀಕ್ಷಿಸಬೇಕು. ಸಾರ್ವಜನಿಕರಿಗೆ ಅನಕೂಲವಾಗುವಂತೆ ಅಗತ್ಯ ವಸ್ತುಗಳು ಹಾಗೂ ತರಕಾರಿ ಮಾರುಕಟ್ಟೆ ಪಟ್ಟಣದಲ್ಲಿ ಎರಡು ಭಾಗಗಳಾದ ಎಪಿಎಂಸಿ ಹಾಗೂ ಪ್ರವಾಸಿ ಮಂದಿರದ ಆವರಣದಲ್ಲಿ ಬೆಳಗ್ಗೆ 6 ಗಂಟೆಯಿಂದ 9 ಗಂಟೆಯವರೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅರಿವು ಮೂಡಿಸುವ ಮೂಲಕ ಖರೀದಿಸುವಂತಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ದಾಳಿಂಬೆ, ನಿಂಬೆ, ದ್ರಾಕ್ಷಿ, ಪೆರು ಹಾಗೂ ಚಿಕ್ಕು ಬೆಳೆದ ರೈತರು ತಾಲೂಕು ಅಧಿಕಾರಿಗಳಿಂದ ಪಾಸ್‌ ಪಡೆದು ಅವರು ತಿಳಿಸಿದ ಮಾರ್ಗದಲ್ಲಿ ತಮ್ಮ ವ್ಯಾಪಾರ ವಹಿವಾಟು ಮಾಡಬೇಕು ಎಂದರು. ತಾಲೂಕು ಪಂಚಾಯತ್‌ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ವಿಜಯಕುಮಾರ ಅಜುರ, ತಹಸೀಲ್ದಾರ್‌ ಎನ್‌ .ಬಿ. ಗೆಜ್ಜಿ, ಪಪಂ ಮಾಜಿ ಅಧ್ಯಕ್ಷ ಬಾಬುಗೌಡ ಪಾಟೀಲ, ಸದಸ್ಯ ಜಟ್ಟೆಪ್ಪ ಬನಸೋಡೆ, ಪಪಂ ಮುಖ್ಯಾಧಿಕಾರಿ ಎಸ್‌.ಎಸ್‌. ಪೂಜಾರಿ, ದಾನಮ್ಮಾ ಪಾಟೀಲ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next