Advertisement

City Council: ನಗರಸಭೆಯಲ್ಲಿ ಕೋಟಿ ಕೋಟಿ ಹಣ ಅಕ್ರಮ!

03:03 PM Sep 16, 2023 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲಾ ಕೇಂದ್ರದಲ್ಲಿರುವ ನಗರಸಭೆಯಲ್ಲಿ ಕೋಟಿ ಕೋಟಿ ಲೆಕ್ಕಾಚಾರದಲ್ಲಿ ಹಣ ಅಕ್ರಮ ಆಗಿರುವುದು ಲೆಕ್ಕ ಪರಿಶೋಧನಾ ವರದಿಯಲ್ಲಿ ಬಹಿರಂಗಗೊಂಡಿದ್ದು ಬರೋಬ್ಬರಿ 6.66 ಕೋಟಿ ರೂ., ಹಣ ವಸೂಲಿ ಸೂಚಿಸಲಾಗಿದೆ.

Advertisement

ಹೌದು, ಸ್ಥಳೀಯ ನಗರ ಸಭೆಗೆ ಸಂಬಂಧಿಸಿ ದ್ದಂತೆ 2018-19 ಹಾಗೂ 2021-22ನೇ ಸಾಲಿನ ಲೆಕ್ಕ ಪರಿ ಶೋಧನಾ ವರದಿಯನ್ನು ಸ್ಥಳೀಯ ನಗರಸಭೆಗೆ ಸಲ್ಲಿಸಲಾಗಿದ್ದು, ನಿಯಮಾವಳಿಗಳನ್ನು ಮೀರಿ ಕೋಟಿ ಕೋಟಿ ಹಣ ಅಕ್ರಮ ಮಾಡಿಕೊಂಡಿರುವುದು ಕಂಡು ಬಂದಿದ್ದು, 158 ಪುಟಗಳ ಲೆಕ್ಕ ಪರಿಶೋಧನಾ ವರದಿ ಪ್ರತಿ ಉದಯವಾಣಿಗೆ ಲಭ್ಯವಾಗಿದೆ.

ಗುತ್ತಿಗೆ ಅವಧಿ ಮುಗಿದರೂ ಗುತ್ತಿಗೆದಾರರನ್ನು ಮುಂದುವರೆಸಿರುವುದು, ತೆರಿಗೆ, ಬಾಡಿಗೆ ವಸೂಲಿಯಲ್ಲಿ ಭಾರೀ ಹಿನ್ನಡೆ, ಹೊರ ಗುತ್ತಿಗೆ ಆಧಾರದ ಮೇಲೆ ಕಂಪ್ಯೂಟರ್‌ ಆಪರೇಟರ್‌ಗಳನ್ನು ಮಂಜೂರಾದ ಹುದ್ದೆಗಳಗಿಂತ ಹೆಚ್ಚುವರಿ ಹುದ್ದೆಗಳಿಗೆ ಸೇವೆ ಪಡೆದಿರುವುದು, ಸಂಗ್ರಹಣೆಯಲ್ಲಿ ಪಾರದರ್ಶಕ ನಿಯಮ ಉಲ್ಲಂಘಿಸಿ ಖರೀದಿ ಪ್ರಕ್ರಿಯೆ ನಡೆಸಿರುವುದು, ನಗರಸಭೆ ಸಾಮಾನ್ಯ ನಿಧಿಯಿಂದ ಪಾವತಿಸಿದ ಬಿಲ್‌ ಹೊಂದಾಣಿಕೆ ಆಗದೇ ಇರುವುದು, ಅನುದಾನಕ್ಕೆ ಹಣ ಬಳಕೆ ಪ್ರಮಾಣ ಪತ್ರ ಸಲ್ಲಿಸದೇ ಇರುವುದು, ಕಾಮಗಾರಿಗಳಲ್ಲಿ ಆದ ವಿಳಂಬಕ್ಕೆ ದಂಡ ವಿಧಿಸದೇ ಇರುವುದು, ಯೋಜನಾ ಸಮಿತಿಗೆ ವಾರ್ಷಿಕ ವಂತಿಗೆ ಪಾವತಿಸದೇ ಇರುವುದು, ನಿಯಮ ಬಾಹಿರವಾಗಿ ವಾಹನ ಭತ್ತೆ ಪಾವತಿಸಿ ರುವುದು, ಸಿಎ ನಿವೇಶನ ಹಂಚಿಕೆಯಲ್ಲಿ ಕಡಿಮೆ ಮೊತ್ತ ವಸೂಲಿ ಮಾಡಿರುವುದು, ಟೆಂಡರ್‌ ದಾಖಲೆಗಳನ್ನು ಲೆಕ್ಕ ತನಿಖೆಗೆ ಒಳಪಡಿಸದೇ ಇರುವುದು, ನಿಯಮ ಬಾಹಿರವಾಗಿ ವಿಶೇಷ ಭತ್ಯೆ ಪಾವತಿಸಿರುವುದು, ಅನವಶ್ಯಕವಾಗಿ ಹೆಚ್ಚುವರಿ ವಾಹನಗಳನ್ನು ಬಳಕೆ ಮಾಡಿರುವುದು, ಶಾಸನಬದ್ಧ ತೆರಿಗೆಗಳನ್ನು ಕಡಿಮೆ ಜಮೆ ಮಾಡಿರುವುದು, ಏಕ ಬಿಡ್‌ ಟೆಂಡರ್‌ಗಳನ್ನು ಅನುಮೋದಿಸಿರುವುದು, ನಗರಸಭೆಯಿಂದ 2018-19 ಹಾಗೂ 2021- 22ನೇ ಸಾಲಿನಲ್ಲಿ ಮಂಡಿಸಿರುವ ಅಯವ್ಯಯ ಅಂದಾಜು ಅದಾಯ ಹಾಗೂ ವೆಚ್ಚಕ್ಕೂ ಹಾಗೂ ವಾಸ್ತವಿಕ ಆದಾಯ ಹಾಗೂ ವೆಚ್ಚಕ್ಕೆ ಸಾಕಷ್ಟು ವ್ಯತ್ಯಾಸ ಇರುವುದು ಲೆಕ್ಕ ಪರಿಶೋಧನೆ ವೇಳೆ ಕಂಡು ಬಂದಿದೆ.

ಇ-ಖಾತೆ, ಖಾತೆ ಬದಲಾವಣೆಯಲ್ಲಿ ಅಕ್ರಮ: ಒಟ್ಟಿನಲ್ಲಿ ಅಕ್ರಮಗಳಿಗೆ ಕುಖ್ಯಾತಿ ಆಗಿ ಇ-ಖಾತೆ ಹಾಗೂ ಖಾತೆ ಬದಲಾವಣೆ ವಿಚಾರದಲ್ಲಿ ಸಾಕಷ್ಟು ಅಕ್ರಮಗಳು ಸ್ಥಳೀಯ ನಗರಸಭೆಯಲ್ಲಿ ನಡೆದಿವೆಯೆಂಬ ಸಾರ್ವಜನಿಕ ವಲಯದಲ್ಲಿನ ಆರೋಪಕ್ಕೆ ಪುಷ್ಟಿ ನೀಡುವ ನಿಟ್ಟಿನಲ್ಲಿ ಸ್ಥಳೀಯ ಲೆಕ್ಕ ಪರಿಶೋಧನಾ ವರ್ತುಲದ ಅಧಿಕಾರಿಗಳು ಸಿದ್ಧಪಡಿಸಿರುವ ಬರೋಬ್ಬರಿ 58 ಪುಟಗಳ ಸ್ಥಳೀಯ ನಗರಸಭೆ ಕುರಿತಾದ ಲೆಕ್ಕ ಪರಿಶೋಧನಾ ವರದಿಯಲ್ಲಿ ನಗರಸಭೆಯು ನಡೆಸಿರುವ ಕೋಟ್ಯಾಂತರ ರೂ., ಹಣ ದುರ್ಬಳಕೆ ಬಗ್ಗೆ ಎತ್ತಿ ತೋರಿ ಸಿದ್ದು ಕೋಟ್ಯಾಂತರ ರೂ.ಹಣ ವಸೂಲಿಗೆ ಮಾಡುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚಿಸಿದೆ.

ಇ-ಖಾತೆಗಳಲ್ಲಿ ಅಕ್ರಮದ ಬಗ್ಗೆ ವರದಿಯಲ್ಲಿ ಶಂಕೆ!: ನಗರಸಭೆಯಲ್ಲಿ ಇ-ಖಾತೆಗಳ ಅಕ್ರಮದ ಬಗ್ಗೆ ಸಾಕಷ್ಟು ಆರೋಪ, ಭ್ರಷ್ಟಾ ಚಾರದ ಬಗ್ಗೆ ಆರೋಪಗಳು ಕೇಳಿ ಬಂದಿದ್ದವು. ಇದಕ್ಕೆ ಪುಷಿ ನೀಡುವ ನಿಟ್ಟಿನಲ್ಲಿ 2018-19 ಹಾಗೂ 2021-22 ಅವಧಿಯಲ್ಲಿ ನಗರಸಭೆಯಿಂದ ಇ-ಖಾತೆ ನಮೂನೆ-3 ರಲ್ಲಿ ಖಾತೆ ನೋಂದಣಿ ಮಾಡಿಕೊಳ್ಳಲು ಸ್ಪೀಕರಿಸಿದ ಅರ್ಜಿಗಳು ಎಷ್ಟು, ವಿಲೇವಾರಿ ಮಾಡಲಾದ ಅರ್ಜಿಗಳು ಎಷ್ಟು? ಎಂಬುವರ ಬಗ್ಗೆ ವರ್ಷವಾರು ದೃಢೀಕೃತ ಮಾಹಿತಿಯನ್ನು ಲೆಕ್ಕ ತನಿಖೆಗೆ ಹಾಜರಿಪಡಿಸುವಂತೆ ಸೂಚಿಸಿದ್ದರೂ ನಗರಸಭೆ ಸಲ್ಲಿಸಿಲ್ಲ. ಇ-ಖಾತೆ ವಿತರಣೆಗೆ ಮಾಡಲು ಪಡೆಯಬೇಕಾದ ದಾಖಲೆ ಗಳು ಯಾವುದು? ಸರ್ಕಾರ ನಿಗದಿಪಡಿಸಿ ಆದೇಶ ಪ್ರತಿ, ಸಕಾಲದಲ್ಲಿ ಸ್ಪೀಕರಿಸಿದ ಅರ್ಜಿಗಳು, ವಿಲೇವಾರಿ ಮಾಡಿದ ಅರ್ಜಿಗಳು, ದಾಖಲಾತಿ ಸಲ್ಲಿಸಲು ಕೋರಿದ ವಾರ್ಡ್‌ವಾರು ಎಷ್ಟು ನಿವೇಶನ, ಎಷ್ಟು ವಸತಿ ಕಟ್ಟಡಗಳು, ವಾಣಿಜ್ಯ ಕಟ್ಟಡಗಳು ಬಗ್ಗೆ ಮಾಹಿತಿ ಕೇಳಿದ್ದರೂ ನಗರಸಭೆ ಸಲ್ಲಿಸಿಲ್ಲ. ಇದರಿಂದ ಇ-ಖಾತೆ ವಿತರಣೆಯಲ್ಲಿ ಏನಾದರೂ ಅಕ್ರಮಗಳು ಆಗಿದ್ದರೆ ಸಂಬಂಧಿಸಿದ ಅಧಿಕಾರಿಗಳು, ಸಿಬ್ಬಂದಿ ಜವಾ ಬ್ದಾರರು ಎಂದು ಲೆಕ್ಕ ಪರಿಶೋಧನಾ ವರದಿಯಲ್ಲಿ ಸೂಚಿಸಲಾಗಿದೆ.

Advertisement

ದೃಢೀಕೃತ ವಂಶವೃಕ್ಷ ಇಲ್ಲದೇ ಹಕ್ಕು ಬದಲಾವಣೆ: ಖಾತೆ ಬದಲಾವಣೆಗಳಲ್ಲಿ ಕೂಡ ನಗರಸಭೆ ತನ್ನ ಕೈ ಚಳಕ ತೋರಿಸಿ ಅಕ್ರಮವೆಸಗಿರುವುದು ಲೆಕ್ಕ ಪರಿಶೋಧನಾ ವರದಿಯಲ್ಲಿ ಬಹಿರಂಗಗೊಂಡಿದೆ. ಖಾತೆ ಬದಲಾವಣೆಗೆ ತಹಶೀಲ್ದಾರ್‌ ಅವರಿಂದ ದೃಢೀಕೃತ ವಂಶವೃಕ್ಷ ಪಡೆಯದೇ ಅರ್ಜಿದಾರರಿಂದ ಸ್ವಯಂ ದೃಢೀಕೃತ ವಂಶವೃಕ್ಷದ ಮೇಲೆ ಹಕ್ಕು ಬದಲಾವಣೆ ಮಾಡಿದ್ದಾರೆ. ಕೆಲವು ಕಡತಗಳಲ್ಲಿ ಸ್ವತ್ತಿಗೆ ಸಂಬಂಧಿಸಿದ್ದಂತೆ ಭೂ ಪರಿವರ್ತನೆ ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ಬಡಾವಣೆಗಳ ನಕ್ಷೆ ಲಗತ್ತಿಸಿಲ್ಲ. ಹಕ್ಕು ಬದ ಲಾವಣೆ ವೇಳೆ ಮುಟೇಷನ್‌ ವಹಿಯನ್ನು ಲೆಕ್ಕ ತನಿಖೆಗೆ ನಗರಸಭೆ ಹಾಜರಪಡಿಸಿಲ್ಲ ಎಂದು ಲೆಕ್ಕ ಪರಿಶೋಧಕರು ವರದಿಯಲ್ಲಿ ಆಕ್ಷೇಪಣೆ ಎತ್ತಿದ್ದಾರೆ.

– ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next