Advertisement

ಸಿಇಟಿ: ಎರಡನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ

07:15 AM Jul 26, 2017 | Team Udayavani |

ಬೆಂಗಳೂರು: ಸಿಇಟಿ-2017ರ 2ನೇ ಸುತ್ತಿನ ಸೀಟು ಹಂಚಿಕೆಯ ನಂತರ ರದ್ದುಪಡಿಸಿ ಕೊಂಡಿರುವ, ಹೊಸದಾಗಿ ಸೇರಿರುವ ಹಾಗೂ ಉಳಿಕೆಯಾಗಿರುವ ಸೀಟು ಹಂಚಿಕೆ ಮಾಡಲಾಗುತ್ತದೆ. ಎಂಜಿನಿಯರಿಂಗ್‌, ವಾಸ್ತುಶಿಲ್ಪ, ಕೃಷಿ ವಿಜ್ಞಾನ, ತೋಟಗಾರಿಕೆ, ಪಶುಸಂಗೋ ಪನೆ, ಬಿ-ಫಾರ್ಮ ಹಾಗೂ ಆಯುಷ್‌ ಇತ್ಯಾದಿ ಕೋರ್ಸ್‌ಗಳ ಸೀಟು ಲಭ್ಯತೆಯ ಆಧಾರದಲ್ಲಿ ಹಂಚಿಕೆ ಮಾಡಲಾಗುತ್ತದೆ. ಈ ಸುತ್ತಿನಲ್ಲಿ ಹೊಸದಾಗಿ ಆಪ್ಷನ್‌ ಎಂಟ್ರಿಗೆ ಅವಕಾಶ ಕಲ್ಪಿಸಲಾಗಿದೆ. ಜು.27ರ ಸಂಜೆ 5ರ ತನಕ ಆಪ್ಷನ್‌ ಎಂಟ್ರಿ ಮಾಡಬಹುದು. ಜು.29ರ ಬೆಳಗ್ಗೆ 11ಕ್ಕೆ ಸೀಟು ಹಂಚಿಕೆ ನಡೆಯಲಿದೆ.
ಜು.31ರ ಸಂಜೆ 5ರೂಳಗೆ ಶುಲ್ಕ ಪಾವತಿಸಿ, ಸೀಟು ಖಚಿತಪಡಿಸಿಕೊಂಡು ಪ್ರವೇಶ ಪತ್ರ ಡೌನ್‌ಲೋಡ್‌ ಮಾಡಿ, ಕಾಲೇಜಿಗೆ ಹಾಜರಾಗಬೇಕು. ಮೊದಲ ಅಥವಾ 2ನೇ ಸುತ್ತಿನಲ್ಲಿ ಸೀಟು ಪಡೆದ ಅಭ್ಯರ್ಥಿಗಳು, ಆ ಸೀಟನ್ನು ರದ್ದುಪಡಿಸಿ, ಎರಡನೇ ಮುಂದು ವರಿದ ಸುತ್ತಿಗೆ ಹೋಗಬೇಕಾದರೆ ಜು.27ರ ಸಂಜೆ 5 ಗಂಟೆಯೊಳಗೆ ಸೀಟು ರದ್ದುಪಡಿಸಬೇಕು. ಅಂಥ ವಿದ್ಯಾರ್ಥಿಗಳು ಪಾವತಿಸಿರುವ ಒಟ್ಟು ಶುಲ್ಕದಲ್ಲಿ 5 ಸಾವಿರ ರೂ.ಗಳನ್ನು ನಿಯಮಾನುಸಾರ ಕಡಿತಗೊಳಿಸಿ, ಮರುಪಾವತಿ ಮಾಡ ಲಾಗುತ್ತದೆ.

Advertisement

2ನೇ ಮುಂದುವರಿದ ಸುತ್ತಿನಲ್ಲಿ ಸೀಟು ರದ್ದುಪಡಿಸಿಕೊಂಡ ಅಭ್ಯರ್ಥಿಗೆ ಶುಲ್ಕ ಮರುಪಾವತಿ ಮಾಡುವುದಿಲ್ಲ ಎಂದು
ಪ್ರಾಧಿಕಾರ ಪ್ರಕಟಣೆ ತಿಳಿಸಿದೆ.

ಶೇ.26 ತೇರ್ಗಡೆ
ಬೆಂಗಳೂರು: ಮಾರ್ಚ್‌-ಏಪ್ರಿಲ್‌ನಲ್ಲಿ ನಡೆದ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದ ವಿದ್ಯಾರ್ಥಿಗಳಿಗೆ
ಜೂನ್‌ ಮತ್ತು ಜುಲೈನಲ್ಲಿ ನಡೆಸಲಾಗಿದ್ದ ಪೂರಕ ಪರೀಕ್ಷೆ ಫ‌ಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಶೇ.26.34
ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಪರೀಕ್ಷೆಯಲ್ಲಿ ಹಾಜರಾಗಿದ್ದ ಒಟ್ಟು 2,51,781 ಅಭ್ಯರ್ಥಿಗಳಲ್ಲಿ 66,320
ಮಂದಿ ಉತ್ತೀರ್ಣರಾಗಿದ್ದಾರೆ. ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಬಹುದು ಪೂರಕ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದ
26,338 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಈಗಾಗಲೇ ನೋಂದಣಿ ಮಾಡಿಕೊಂಡಿರುವ ಅಭ್ಯರ್ಥಿಗಳ ಪೈಕಿ 150001ನಂತರದ ರ್‍ಯಾಂಕ್‌ ಪಡೆದ ವಿದ್ಯಾರ್ಥಿಗಳಿಗೆ ಜು.28ರಿಂದ ದಾಖಲೆ ಪರಿಶೀಲನೆ ನಡೆಯಲಿದೆ.
ಜು.29ರ ಸಂಜೆ 8ರಿಂದ ಆಪ್ಷನ್‌ ಎಂಟ್ರಿ ಆರಂಭವಾಗಲಿದೆ. ಆಗಸ್ಟ್‌ 1ರ ಸಂಜೆ 4ಕ್ಕೆ ಸೀಟು ಹಂಚಿಕೆ ನಡೆಯಲಿದೆ. ಆ.3ರ ಮಧ್ಯಾಹ್ನ 3ರೊಳಗೆ ಸೀಟು ಪಡೆದ ಅಭ್ಯರ್ಥಿಗಳು ಶುಲ್ಕ ಪಾವತಿಸಿ, ಆ.4ರ ಸಂಜೆ 5.30ರೊಳಗೆ ಸಂಬಂಧಿಸಿದ
ಕಾಲೇಜಿಗೆ ಹಾಜರಾಗಬೇಕು. 

Advertisement

Udayavani is now on Telegram. Click here to join our channel and stay updated with the latest news.

Next