ಬೆಂಗಳೂರು: ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಸಿಇಟಿ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟವಾಗಿದೆ.
ಸುದ್ದಿಗೋಷ್ಟಿ ನಡೆಸಿದ ಡಿಸಿಎಂ ಡಾ ಅಶ್ವಥ್ ನಾರಾಯಣ್, ಈ ಬಾರಿ ಪರೀಕ್ಷೆ ನಡೆದು 21ನೇ ದಿನಕ್ಕೆ ಪರೀಕ್ಷಾ ಫಲಿತಾಂಶ ನೀಡುತ್ತಿದ್ದೇವೆ ಎಂದರು. ಕರ್ನಾಟಕ ಪರೀಕ್ಷಾ ಮಂಡಳಿ KCET 2020 ಫಲಿತಾಂಶವನ್ನು KEA ಅಧಿಕೃತ ವೆಬ್ಸೈಟ್ cetonline.karnataka.gov.in/kea ನಲ್ಲಿ ಬಿಡುಗಡೆ ಮಾಡಿದೆ.
ಜು.30ರಿಂದ ಆಗಸ್ಟ್ 1ರವರೆಗೆ ಸಿಇಟಿ ಪರೀಕ್ಷೆ ನಡೆದಿದ್ದು, 1.94 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಸಿಇಟಿ ಫಲಿತಾಂಶದ ಆಧಾರದಲ್ಲಿ ಇಂಜಿನಿಯರಿಂಗ್, ಕೃಷಿ, ಪಶು ವೈದ್ಯಕೀಯ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ ಗಳಿಗೆ ಸರ್ಕಾರಿ ಕೋಟಾ ಸೀಟು ಹಂಚಿಕೆಯಾಗಲಿದೆ.
1,94,419 ವಿದ್ಯಾರ್ಥಿಗಳು ಪರೀಕ್ಷೆ ನೋಂದಣೆ ಮಾಡಿದ್ದರು. ಇದರಲ್ಲಿ 1,74,345 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 1,53,417 ವಿದ್ಯಾರ್ಥಿಗಳು ಎಂಜಿನಿಯರಿಂಗ್ ನಲ್ಲಿ ರ‍್ಯಾಂಕ್ ಪಡೆದಿದ್ದಾರೆ
ಕೃಷಿಯಲ್ಲಿ-175345, ಪಶುವೈದ್ಯಕೀಯ-12966, ಯೋಗ ಮತ್ತು ನ್ಯಾಚೂರೋಪಥಿ 129611 ಹಾಗೂ ಡಿ ಮತ್ತು ಬಿ ಫಾರ್ಮಾ ಕೋರ್ಸನಲ್ಲಿ 155552 ವಿದ್ಯಾರ್ಥಿಗಳು ರ‍್ಯಾಂಕ್ ಪಡೆದಿದ್ದಾರೆ.
ಇಂಜಿನಿಯರಿಂಗ್ ನಲ್ಲಿ ಬೆಂಗಳೂರಿನ ರಕ್ಷಿತ್ ಎಂ ಮೊದಲ ರ‍್ಯಾಂಕ್ ಪಡೆದಿದ್ದರೆ, ಬಿಎಸ್ ಸಿ ಅಗ್ರಿಕಲ್ಚರ್ ನಲ್ಲಿ ಮಂಗಳೂರಿನ ವರುಣ್ ಗೌಡ ಮೊದಲ ಸ್ಥಾನ ಪಡೆದಿದ್ದಾರೆ. ಬೆಂಗಳೂರಿನ ಸಾಯಿ ವಿವೇಕ್ ಪಿ ಅವರು ಬಿವಿಎಸ್ ಸಿ ಮತ್ತು ಬಿ ಫಾರ್ಮಾ / ಫಾರ್ಮಾ ಡಿ ವಿಭಾಗದಲ್ಲಿ ಅಗ್ರ ಸ್ಥಾನ ಪಡೆದಿದ್ದಾರೆ.