Advertisement

ಸದ್ಯ ಸಿಇಟಿ ಸುಸೂತ್ರ; ಸರಾಸರಿ ಆರು ಅಂಕ ಕಡಿತ ಪ್ರಸ್ತಾವಕ್ಕೆ ಒಪ್ಪಿಗೆ

01:00 AM Sep 24, 2022 | Team Udayavani |

ಬೆಂಗಳೂರು: ಸಿಇಟಿ ವಿಷಯದಲ್ಲಿ “ಸರಾಸರಿ ಆರು ಅಂಕ’ಗಳ ಕಡಿತದ ಪ್ರಸ್ತಾವಕ್ಕೆ ಹೈಕೋರ್ಟ್‌ ಒಪ್ಪಿದೆ. ಇದರ ಬೆನ್ನಲ್ಲೇ, ರಾಜ್ಯ ಸರಕಾರ ಸೆ. 29ಕ್ಕೆ ಹೊಸ ರ್‍ಯಾಂಕಿಂಗ್‌ ಪಟ್ಟಿ ಬಿಡುಗಡೆ ಮಾಡಿ, ಅ. 3ರಿಂದ ಕೌನ್ಸೆಲಿಂಗ್‌ ಆರಂಭಿಸುವುದಾಗಿ ಹೇಳಿದೆ.

Advertisement

ಕಳೆದ ವರ್ಷದ ದ್ವಿತೀಯ ಪಿಯುಸಿ ಅಂಕಗಳನ್ನು ಪ್ರಸಕ್ತ ಸಾಲಿನ ಸಿಇಟಿಯಲ್ಲಿ ಪರಿಗಣಿಸಲಾಗದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಜು.30ರಂದು ಹೊರ ಡಿಸಿದ್ದ ಟಿಪ್ಪಣಿಯನ್ನು ರದ್ದುಪಡಿಸಿದ್ದ ಹೈ ಕೋರ್ಟ್‌ ಏಕ ಸದಸ್ಯ ಪೀಠದ ತೀರ್ಪು ಪ್ರಶ್ನಿಸಿ ಸರಕಾರ ಸಲ್ಲಿಸಿದ್ದ ಮೇಲ್ಮನವಿ ಕುರಿತಂತೆ ಹಂಗಾಮಿ ಮುಖ್ಯ ನ್ಯಾ| ಆಲೋಕ್‌ ಆರಾಧೆ ಹಾಗೂ ನ್ಯಾ| ಎಸ್‌. ವಿಶ್ವಜಿತ್‌ ಶೆಟ್ಟಿ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿ ಶುಕ್ರವಾರ ಮೇಲ್ಮನವಿ ಯನ್ನು ಇತ್ಯರ್ಥ ಪಡಿಸಿತು.

“ಅಂಕಗಳ ಸಾಮಾನ್ಯಿàಕರಣ ಸೂತ್ರ’ ಅಳವಡಿಸಿ ರ್‍ಯಾಂಕ್‌ ಪಟ್ಟಿ ಪ್ರಕಟಿಸುವಂತೆ ಪ್ರಾಧಿಕಾರಕ್ಕೆ ಹೈಕೋರ್ಟ್‌ ನಿರ್ದೇಶನ ನೀಡಿದೆ.

“ಅಂಕಗಳ ಸಾಮಾನ್ಯಿಕರಣ” ಸೂತ್ರಕ್ಕೆ ಅರ್ಜಿದಾರ ವಿದ್ಯಾರ್ಥಿಗಳ ಪರ ವಕೀಲರು ಸಮ್ಮತಿ ವ್ಯಕ್ತಪಡಿಸಿದರು. ಹಾಗಾಗಿ ಒಂದೂವರೆ ತಿಂಗಳಿನಿಂದ ಉಂಟಾಗಿದ್ದ ಗೊಂದಲ ಸುಖಾಂತ್ಯ ಕಂಡಿದ್ದು, ಸಿಇಟಿ ಪ್ರಕ್ರಿಯೆಗೆ ಮಾರ್ಗ ಸುಗಮವಾದಂತಾಗಿದೆ. ಅದರಂತೆ ಅ. 3ರಿಂದ ಕೌನ್ಸೆಲಿಂಗ್‌ ಪ್ರಕ್ರಿಯೆ ಆರಂಭವಾಗುವ ಸಂಭವವಿದೆ.

ಏನಿದು ಆರ್‌ಎಂಎಸ್‌ ಸೂತ್ರ?
ಕಳೆದ ಸಾಲಿನ ವಿದ್ಯಾರ್ಥಿಗಳಿಗೆ…

Advertisement

01 ಭೌತಶಾಸ್ತ್ರದ ಸರಾಸರಿ 6 ಅಂಕ, ರಸಾಯನ ಶಾಸ್ತ್ರದ 5 ಅಂಕ ಹಾಗೂ ಗಣಿತದ 7 ಅಂಕಗಳನ್ನು ಕಡಿಮೆಗೊಳಿಸಬೇಕು.
02 ಆಗ 100 ಅರ್ಹತಾ ಅಂಕಗಳಿಗೆ 7 ಅಂಕ ಕಡಿಮೆಯಾದಂತಾಗುತ್ತದೆ.
03 ಅಂಕಗಳನ್ನು ಕಡಿತಗೊಳಿಸಿದ ಅನಂತರ ಬರುವ ಒಟ್ಟು ಪಿಯು ಅಂಕಗಳ ಶೇ.50 ಹಾಗೂ 2022ರ ಸಿಇಟಿಯ ಶೇ.50ರಷ್ಟು ಅಂಕಗಳನ್ನು ಪರಿಗಣಿಸಬೇಕು.

ಪ್ರಸಕ್ತ ಸಾಲಿನ ವಿದ್ಯಾರ್ಥಿಗಳಿಗೆ…
01 ಪ್ರಸಕ್ತ ಸಾಲಿನ ವಿದ್ಯಾರ್ಥಿಗಳ ಪಿಯು ಹಾಗೂ ಸಿಇಟಿ ಅಂಕಗಳನ್ನು ಕ್ರಮವಾಗಿ ಶೇ.50-50 ಪರಿಗಣಿಸಿ ರ್‍ಯಾಂಕ್‌ ಪಟ್ಟಿ ಪ್ರಕಟಿಸಬೇಕು.
02 2022ರ ಬ್ಯಾಚ್‌ನೊಂದಿಗೆ 2021ರ ಬ್ಯಾಚ್‌ನ ದ್ವಿತೀಯ ಪಿಯು ಅಂಕಗಳನ್ನು ಸಾಮಾನ್ಯಿà ಕರಣಗೊಳಿಸಲು “ರೂಟ್‌ ಮೀನ್ಸ್‌ ಸ್ಕ್ವೆ„ರ್‌’ (ಆರ್‌ಎಂಎಸ್‌) ವಿಧಾನ ಅನುಸರಿಸಬೇಕು.
03 ಪ್ರಸಕ್ತ ಸಾಲಿನ ಅಭ್ಯರ್ಥಿಗಳಿಗೆ ಮಾಹಿತಿ ತಂತ್ರ ಜ್ಞಾನ ವಿಭಾಗದಲ್ಲಿ ಶೇ.10 ಸೀಟು ಹೆಚ್ಚಿಸಬೇಕು.

ಪ್ರಸಕ್ತ ಸಾಲಿನ ವಿದ್ಯಾರ್ಥಿಗಳಿಗೆ ಹಿನ್ನಡೆ?
ರಾಜ್ಯ ಸರಕಾರದ ಹೊಸ ಸೂತ್ರದಿಂದ ಈ ವರ್ಷದ ವಿದ್ಯಾರ್ಥಿಗಳಿಗೆ ರ್‍ಯಾಂಕಿಂಗ್‌ನಲ್ಲಿ ಕೊಂಚ ಹಿನ್ನಡೆ ಯಾಗಬಹುದು ಎಂದು ವಿಶ್ಲೇಷಿಸಲಾಗಿದೆ. ಈ ಹಿಂದೆ ಪ್ರಕಟಿಸಿದ್ದ ರ್‍ಯಾಂಕ್‌ ಮೂಲಕವೇ ಕೌನ್ಸೆಲಿಂಗ್‌ ನಡೆಸಿ ದ್ದಿದ್ದರೆ ಈ ಸಾಲಿನವರಿಗೆಉತ್ತಮ ರ್‍ಯಾಂಕ್‌ ಸಿಗುತ್ತಿತ್ತು.

ಹೊಸ ಅಭ್ಯರ್ಥಿಗಳಿಗೆ ಪೂರ್ಣ ನ್ಯಾಯ ಒದಗಿಸುವುದು ಕಷ್ಟ ಮತ್ತು ಹಿಂದಿನ ಸಾಲಿನ ವಿದ್ಯಾರ್ಥಿಗಳನ್ನು ಪೂರ್ಣ ಪ್ರಮಾಣದಲ್ಲಿ ನಿರ್ಲಕ್ಷಿಸುವುದೂ ಕಷ್ಟ. ಈ ಹಿನ್ನೆಲೆಯಲ್ಲಿ ತಜ್ಞರು ಎಲ್ಲ ಆಯಾಮಗಳಲ್ಲೂ ಯೋಚಿಸಿ ಹಳೆಯ ವಿದ್ಯಾರ್ಥಿಗಳ ದ್ವಿತೀಯ ಪಿಯುಸಿ ಅಂಕದ ವಿಷಯವಾರು ಪರ್ಸೆಂಟೇಜ್‌ ಮಾತ್ರ ಪಡೆಯಲು ಸೂಚಿಸಿರುವುದು ಎಂಬುದು ಪರಿಣಿತರ ಅಭಿಪ್ರಾಯ.

ಸಮಿತಿ ರಚಿಸಿದ್ದ ಸರಕಾರ
ಈ ಸಾಲಿನಲ್ಲಿ ಸಿಇಟಿ ಬರೆದ ಮತ್ತು ಪುನರಾವರ್ತಿತ ವಿದ್ಯಾರ್ಥಿಗಳಿಗೆ ತೊಂದರೆಯಾಗದಂಥ ಮತ್ತು ಎಲ್ಲರಿಗೂ ನೆರವಾಗುವಂತಹ ಪರಿಹಾರ ಸೂತ್ರ ಕಂಡುಕೊಳ್ಳಿ ಎಂದು ಹೈಕೋರ್ಟ್‌ ಹೇಳಿತ್ತು. ಅದರಂತೆ, ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಬಿ. ತಿಮ್ಮೇಗೌಡರ ಅಧ್ಯಕ್ಷತೆಯಲ್ಲಿ ಐವರ ಸಮಿತಿಯನ್ನು ರಚಿಸಲಾಗಿತ್ತು.ಸಮಿತಿಯ ವರದಿ ಯನ್ನು ಸೆ. 22ರಂದು ಸರಕಾರ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿತ್ತು. ವರದಿಯನ್ನು ಪರಿಶೀಲಿಸಿದ ಹೈಕೋರ್ಟ್‌, ಅಂಕಗಳ ಸಾಮಾನ್ಯಿàಕರಣ ಸೂತ್ರಕ್ಕೆ ಒಪ್ಪಿತು. “ಸಾಮಾ ನ್ಯಿàಕರಣ’ದ ಅನಂತರ 50:50ರ ಅನುಪಾತದಲ್ಲಿ ಅಂಕಗ ಳನ್ನು ಅನ್ವಯಿಸುವುದರಿಂದ ಹಳೆಯ ವಿದ್ಯಾರ್ಥಿ ಗಳ ಶ್ರೇಣಿಯನ್ನು ಸುಧಾರಿಸಬಹುದು ಹಾಗೂ 2022ರ ಅಭ್ಯ ರ್ಥಿಗಳಿಗೆ ಅನ್ಯಾಯವಾಗದು ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next