Advertisement

ಸಿಇಟಿ ಗೊಂದಲದ ಪ್ರಶ್ನೆ: ಗ್ರೇಸ್‌ ಮಾರ್ಕ್ಸ್ ಗೆ ನಿರ್ಧಾರ

03:45 AM May 09, 2017 | |

ಬೆಂಗಳೂರು : ವೃತ್ತಿಪರ ಕೋರ್ಸ್‌ಗಳ‌ ಸರ್ಕಾರಿ ಕೋಟಾದ ಸೀಟಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ(ಸಿಇಟಿ) ಭೌತಶಾಸ್ತ್ರ ಹಾಗೂ ರಸಾಯನಶಾಸ್ತ್ರದ ಪ್ರಶ್ನೆ ಪ್ರತ್ರಿಕೆಯಲ್ಲಿ ತಲಾ ಒಂದೊಂದು ಪ್ರಶ್ನೆ ಗೊಂದಲದಿಂದ ಕೂಡಿದ್ದರಿಂದ ಗ್ರೇಸ್‌ ಮಾರ್ಕ್ಸ್ ನೀಡಲು ನಿರ್ಧರಿಸಿದೆ.

Advertisement

ಭೌತಶಾಸ್ತ್ರ ಪ್ರಶ್ನೆ ಪ್ರತ್ರಿಕೆಯ ಮೊದಲ ಪ್ರಶ್ನೆ ಹಾಗೂ ರಸಾಯನ ಶಾಸ್ತ್ರ ಪ್ರಶ್ನೆ ಪತ್ರಿಕೆಯ 48ನೇ ಪ್ರಶ್ನೆ ಗೊಂದಲದಿಂದ ಕೂಡಿದ್ದು, ಈ ಎರಡು ಪ್ರಶ್ನೆಗೂ ತಲಾ ಒಂದೊಂದು ಗ್ರೇಸ್‌ ಮಾರ್ಕ್ಸ್ನಂತೆ ಎರಡು ಗ್ರೇಸ್‌ ಮಾರ್ಕ್ಸ್ ನೀಡುವ ಬಗ್ಗೆ ಪ್ರಾಧಿಕಾರವು ವೆಬ್‌ಸೈಟ್‌ನಲ್ಲಿ ಘೋಷಿಸಿದೆ.

ಮಾದರಿ ಕೀ ಉತ್ತರ ಪ್ರಕಟ:
ಕೆಇಎ ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆಯ ಭೌತಶಾಸ್ತ್ರ, ರಸಾಯಶಾಸ್ತ್ರ, ಜೀವಶಾಸ್ತ್ರ ಹಾಗೂ ಗಣಿತ ಪರೀಕ್ಷೆಯ ವಿಷಯವಾರು ಮಾಸ್ಟರ್‌ ಪ್ರಶ್ನೆಪತ್ರಿಕೆ ಮತ್ತು ಅದಕ್ಕೆ ಸಂಬಂಧಿಸಿದ ತಾತ್ಕಾಲಿಕ ಸರಿ ಉತ್ತರಗಳನ್ನು ಮಾಸ್ಟರ್‌ ಪ್ರಶ್ನೆಪತ್ರಿಕೆಯೊಂದಿಗೆ ಕೆಇಎ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

ಅಭ್ಯರ್ಥಿಗಳು ತಾತ್ಕಾಲಿಕ ಸರಿ ಉತ್ತರಗಳನ್ನು ತಮ್ಮ ಪ್ರಶ್ನೆ ಪತ್ರಿಕೆಯಲ್ಲಿನ ಪ್ರಶ್ನೆ ಸಂಖ್ಯೆಗೆ ಅನುಗುಣವಾಗಿ ಪರಿಶೀಲಿಸಿ, ಪ್ರಕಟಿಸಿರುವ ತಾತ್ಕಾಲಿಕ ಸರಿ ಉತ್ತರಗಳಿಗೆ ಯಾವುದೇ ಆಕ್ಷೇಪಣೆ ಇದ್ದಲ್ಲಿ ಆಧಾರ ಸಹಿತವಾಗಿ ಮೇ.10ರ ಸಂಜೆ 5.30ರೊಳಗೆ keauthority-ka@nic.in  ಇ-ಮೇಲ್‌ ಮಾಡುವಂತೆ ಸೂಚಿಸಿದೆ.

ಅಭ್ಯರ್ಥಿಗಳು ಆಕ್ಷೇಪಣೆ ಸಲ್ಲಿಸುವಾಗ ವಿಷಯದ ಹೆಸರು, ಮಾಸ್ಟರ್‌ ಪ್ರಶ್ನೆ ಪತ್ರಿಕೆಯ ಪ್ರಶ್ನೆ ಸಂಖ್ಯೆ ಮತ್ತು ನಿರ್ಧಿಷ್ಟವಾದ ನಿಗದಿತ ಆಕ್ಷೇಪಣೆಯನ್ನು ಎಲ್ಲಾ ವಿವರಗಳೊಂದಿಗೆ ಸಲ್ಲಿಸಿರಬೇಕು. ಮಾಸ್ಟರ್‌ ಪ್ರಶ್ನೆ ಸಂಖ್ಯೆಯನ್ನು ನಮೂದಿಸದೆ ಅಥವಾ ಆಧಾರ ರಹಿತ ಸಲ್ಲಿಸುವ ಆಕ್ಷೇಪಣೆ  ತಿರಸ್ಕೃತಗೊಳ್ಳಲಿದೆ ಹಾಗೂ ವಿಷಯ ತಜ್ಞರ ಸಮಿತಿ ನಿರ್ಧರಿಸಿ ನೀಡುವ ಕೀ ಉತ್ತರವೇ ಅಂತಿಮವಾಗಿರುತ್ತದೆ ಎಂದು ಕೆಇಎ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next