Advertisement

ರಾಜ್ಯಾದ್ಯಂತ ಇಂದಿನಿಂದ CET ಪರೀಕ್ಷೆ

10:09 PM May 19, 2023 | Team Udayavani |

ಬೆಂಗಳೂರು: ಕರ್ನಾಟಕ ಸಾಮಾನ್ಯ ಅರ್ಹತಾ ಪರೀಕ್ಷೆ (ಸಿಇಟಿ) ಮೇ 20 ರಿಂದ ಮೇ 22 ರವರೆಗೆ ನಡೆಯಲಿದ್ದು ರಾಜ್ಯಾದ್ಯಂತ 2.61ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

Advertisement

ವೃತ್ತಿಪರ ಕೋರ್ಸ್‌ಗಳಾದ ಇಂಜಿನಿಯರಿಂಗ್‌, ನ್ಯಾಚುರೋಪತಿ ಮತ್ತು ಯೋಗ, ಕೃಷಿ ವಿಜ್ಞಾನ ಮತ್ತು ಬಿ. ಫಾರ್ಮ, ಪಶು ವೈದ್ಯಕೀಯ ಮತ್ತು ಬಿಎಸ್ಸಿ ನರ್ಸಿಂಗ್‌ ಪ್ರವೇಶಕ್ಕೆ ಸಿಇಟಿ ನಡೆಯಲಿದೆ. ಈ ಪೈಕಿ ಬಿಎಸ್ಸಿ ನರ್ಸಿಂಗ್‌ಗೆ ಮೊದಲ ಬಾರಿಗೆ ಸಿಇಟಿ ನಡೆಯುತ್ತಿದೆ.

ರಾಜ್ಯದ 592 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು ಈ ಪೈಕಿ 121 ಕೇಂದ್ರಗಳು ಬೆಂಗಳೂರಿನಲ್ಲಿವೆ. 1.40 ಲಕ್ಷ ವಿದ್ಯಾರ್ಥಿನಿಯರು ಮತ್ತು 1.21ಲಕ್ಷ ವಿದ್ಯಾರ್ಥಿಗಳು ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿನ ಈ ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಲು ಸುಮಾರು 24 ಸಾವಿರ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಮಕ್ಕಳು ವಾಚ್‌, ಲೋಹದ ಆಭರಣ, ಫ‌ುಲ್‌ ಸ್ಲಿವ್‌ ಶರ್ಟ್‌ ಧರಿಸಿ ಪರೀಕ್ಷೆಗೆ ಹಾಜರಾಗುವುದನ್ನು ನಿಷೇಧಿಸಲಾಗಿದೆ. ಕಿವಿ, ತಲೆ ಮುಚ್ಚುವಂತಹ ವಸ್ತ್ರಗಳನ್ನು ಧರಿಸುವ ಹಾಗಿಲ್ಲ. ಹಾಗೆಯೇ ಎಲೆಕ್ಟ್ರಾನಿಕ್‌ ಉಪಕರಣಗಳಾದ ಮೊಬೈಲ್‌ ಫೋನ್‌, ಬ್ಲೂಟೂಥ್‌, ಕ್ಯಾಲ್ಕೂಲೇಟರ್‌, ಸ್ಲೆ„ಡ್‌ ರೂಲ್ಸ್‌, ವೈಟ್‌ ಫ‌ೂÉಯೈಡ್‌, ವೈರ್‌ಲೆಸ್‌ ಸೆಟ್‌, ಪೇಪರ್‌ ಚೀಟಿ, ಪುಸ್ತಕವನ್ನು ಪರೀಕ್ಷಾ ಕೇಂದ್ರಕ್ಕೆ ತರುವುದನ್ನು ನಿಷೇಧಿಸಲಾಗಿದೆ. ನೀಲಿ ಅಥವಾ ಕಪ್ಪು ಶಾಯಿಯ ಬಾಲ್‌ ಪಾಯಿಂಟ್‌ ಪೆನ್‌ ಮಾತ್ರ ಬಳಸಬೇಕು. ಮೂರಕ್ಕಿಂತ ಹೆಚ್ಚು ಪೆನ್ನು ಮತ್ತು ಪೆನ್ಸಿಲ್‌ ತೆಗೆದುಕೊಂಡು ಹೋಗುವ ಹಾಗಿಲ್ಲ. ಎಂದು ಸೂಚಿಸಲಾಗಿದೆ.

ಕೋವಿಡ್‌ – 19 ರ ಲಕ್ಷಣಗಳಿದ್ದರೆ ಸರ್ಜಿಕಲ್‌ ಮಾಸ್ಕ್ ಧರಿಸಬೇಕು ಎಂದು ಸೂಚಿಸಲಾಗಿದೆ. ಪ್ರವೇಶ ಪತ್ರದ ಜೊತೆಗೆ ಕಡ್ಡಾಯವಾಗಿ ಮಾನ್ಯತೆ ಇರುವ ಭಾವಚಿತ್ರವುಳ್ಳ ಗುರುತಿನ ಕಾರ್ಡ್‌ ತೆಗೆದುಕೊಂಡು ಬರಬೇಕು ಎಂದು ಸೂಚಿಸಲಾಗಿದೆ.

ವೇಳಾಪಟ್ಟಿ
ಮೇ 20ರಂದು ಬೆಳಗ್ಗೆ 10.30 ರಿಂದ 11.50ರವರೆಗೆ ಜೀವಶಾಸ್ತ್ರ, ಮಧ್ಯಾಹ್ನ 2.30 ರಿಂದ 3.50ರವರೆಗೆ ಗಣಿತ ಪರೀಕ್ಷೆ ನಡೆಯಲಿದೆ. ಮೇ. 21 ರಂದು ಬೆಳಗ್ಗೆ 10.30 ರಿಂದ 11.50ರವರೆಗೆ ಭೌತ ಶಾಸ್ತ್ರ, ಮಧ್ಯಾಹ್ನ 2.30 ರಿಂದ 3.50ರವರೆಗೆ ರಸಾಯನ ಶಾಸ್ತ್ರ ಪರೀಕ್ಷೆ ನಡೆಯಲಿದೆ. ಮೇ 22 ರಂದು ಹೊರನಾಡ ಕನ್ನಡಿಗರಿಗೆ ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next