Advertisement
ಎಂಜಿನಿಯರಿಂಗ್ ಸೇರಿ ವಿವಿಧ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕಾಗಿ ಜೂ.16ರಿಂದ 18ರ ವರೆಗೆ ಸಿಇಟಿ ನಡೆಯಲಿದೆ. ಸಹಾಯಕ ಪ್ರಾಧ್ಯಾಪಕ ಹಾಗೂ ಪಿಎಸ್‌ಐ ಪರೀಕ್ಷಾ ಅಕ್ರಮದ ಪರಿಣಾಮ ಎಚ್ಚೆತ್ತುಕೊಂಡಿರುವ ಕೆಇಎ, ಭದ್ರತಾ ಕ್ರಮದ ದೃಷ್ಟಿಯಿಂದ ಸಿಇಟಿ ಪರೀಕ್ಷಾ ಕೊಠಡಿಗಳ ಚಿತ್ರೀಕರಣವನ್ನು ಹೆಚ್ಚುವರಿಯಾಗಿ ಕ್ರಮ ಕೈಗೊಳ್ಳುತ್ತಿದೆ.
Related Articles
Advertisement
ಸರ್ಜಿಕಲ್ ಮಾಸ್ಕ್ ಗೆ ಮಾತ್ರ ಅವಕಾಶ: ನೀಟ್ ಪರೀಕ್ಷೆ ಮಾದರಿಯಲ್ಲಿ ಭದ್ರತಾ ಕ್ರಮ ಕೈಗೊಂಡಿದೆ. ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ವಸ್ತ್ರ ಸಂಹಿತೆ ನಿಯಮ ರೂಪಿಸಿದ್ದು, ತುಂಬು ತೋಳಿನ ವಸ್ತ್ರಗಳು, ಕಿವಿ ಮತ್ತು ತಲೆ ಮುಚ್ಚುವಂತಹ ವಸ್ತ್ರಗಳನ್ನು ಪರೀಕ್ಷಾ ಕೊಠಡಿಯಲ್ಲಿ ಧರಿಸಬಾರದು ಎಂಬ ನಿಯಮ ರೂಪಿಸಿದೆ. ಅಭ್ಯರ್ಥಿಗಳಿಗೆ ಅರೆ ಪಾರದರ್ಶಕವಾದ ಸರ್ಜಿಕಲ್ ಮಾಸ್ಕ್ ಗೆ ಮಾತ್ರ ಅವಕಾಶ ನೀಡಲಾಗಿದೆ. ಎನ್-95/ಕಾಟನ್ ಮಾಸ್ಕ್ ಗಳಿಗೆ ಅನುಮತಿ ನೀಡಿಲ್ಲ. ಯಾವುದೇ ರೀತಿಯ ಆಭರಣಗಳಿಗೆ ಅನುಮತಿ ಇಲ್ಲ. ಮೊಬೈಲ್ ಫೋನ್, ಬ್ಲೂಟೂಥ್, ವೈರ್‌ಲೆಸ್ ಸೆಟ್ಸ್, ಕೈ ಗಡಿಯಾರಗಳನ್ನು ಸೇರಿ ಯಾವುದೇ ರೀತಿಯ ಎಲೆಕ್ಟ್ರಾನಿಕ್ ಉಪಕರಣಗಳನ್ನು ಪರೀಕ್ಷಾ ಕೊಠಡಿಯೊಳಗೆ ನಿಷೇಧಿಸಿದೆ.
ನಾಳೆಯಿಂದ ಪರೀಕ್ಷೆವೃತ್ತಿಪರ ಕೋರ್ಸುಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಡೆಸುವ 2022ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಜೂ.16ರಿಂದ 18ರ ವರೆಗೆ ನಡೆಯಲಿದೆ. ಜೂ.16ರಂದು ಬೆಳಗ್ಗೆ 10.30ರಿಂದ 11.50ರ ವರೆಗೆ ಜೀವಶಾಸ್ತ್ರ, ಅದೇ ದಿನ ಮಧ್ಯಾಹ್ನ 2.30ರಿಂದ 3.50ರ ವರೆಗೆ ಗಣಿತ ಪರೀಕ್ಷೆಗಳು ನಡೆಯಲಿವೆ. ಜೂ.17ರಂದು ಬೆಳಗ್ಗೆ 10.30ರಿಂದ 11.50ರ ವರೆಗೆ ಭೌತಶಾಸ್ತ್ರ ಮತ್ತು ಮಧ್ಯಾಹ್ನ 2.30ರಿಂದ 3.50ರ ವರೆಗೆ
ರಸಾಯನಶಾಸ್ತ್ರಗಳು ತಲಾ 60 ಅಂಕಗಳಿಗೆ ನಡೆಯಲಿವೆ. ಜೂ.18ರಂದು ಬೆಳಗ್ಗೆ 11.30ರಿಂದ 12.30ರ ವರೆಗೆ ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ 50 ಅಂಕಗಳಿಗೆ ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ. ಈ ಬಾರಿ 1,04,550 ವಿದ್ಯಾರ್ಥಿಗಳು ಹಾಗೂ 1,11,975 ವಿದ್ಯಾರ್ಥಿನಿಯರು ಸೇರಿ 2,16,525 ಮಂದಿ ಸಿಇಟಿ ಗೆ ನೋಂದಣಿ ಮಾಡಿಕೊಂಡಿದ್ದಾರೆ. ರಾಜ್ಯದ 486 ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದೆ. ಭದ್ರತಾ ದೃಷ್ಟಿಯಿಂದ ಇದೇ ಮೊದಲ ಬಾರಿಗೆ ಸಿಇಟಿ ಪರೀಕ್ಷಾ ಕೊಠಡಿಗಳ ಚಿತ್ರೀಕರಣ ಮಾಡ ಲಾಗುತ್ತಿದೆ. ವಿದ್ಯಾರ್ಥಿಗಳು ನಿರಾಂತಕವಾಗಿ ಪರೀಕ್ಷೆ ಬರೆಯಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ.
●ಎಸ್. ರಮ್ಯಾ,
ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ●ಎನ್.ಎಲ್. ಶಿವಮಾದು