Advertisement
ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ 2023 -24ರ ಸಾಲಿನಿಂದ “ಸಂಯೋಜಿತ ಸೀಟು ಹಂಚಿಕೆ’ ಎಂಬ ನೂತನ ಕ್ರಮವನ್ನು ಆರಂಭಿಸುವುದಾಗಿ ಕೆಇಎ ಪ್ರಕಟಿಸಿದ್ದು, ಇದರಿಂದಾಗಿ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಸೀಟು ಹಂಚಿಕೆ ಏಕಕಾಲದಲ್ಲಿ ನಡೆಯಲಿದೆ. ಪರಿಣಾಮವಾಗಿ ಅನಗತ್ಯ ಗೊಂದಲಗಳು ತಪ್ಪಿ ಸಂಪೂರ್ಣ ಪ್ರಕ್ರಿಯೆ ವೇಗವಾಗಿ ನಡೆಯುವ ನಿರೀಕ್ಷೆಯಿದೆ.
Related Articles
ಹಳೆ ಪದ್ಧತಿಯಲ್ಲಿ ಒಬ್ಬ ಅಭ್ಯರ್ಥಿ ನಾಲ್ಕು ಸೀಟುಗಳನ್ನು ಹಿಡಿದಿಟ್ಟುಕೊಳ್ಳಲು ಅವಕಾಶ ವಿತ್ತು. ಇದರಿಂದಾಗಿ ಪ್ರತಿಭಾನ್ವಿತ ಇನ್ನಿತರರಿಗೆ ತೊಂದರೆ ಆಗುತ್ತಿತ್ತು. ಮಾಪ್‌ಅಪ್ ಸುತ್ತಿನಲ್ಲಿ ಕಡಿಮೆ ರ್‍ಯಾಂಕಿಂಗ್ ಹೊಂದಿದ್ದ ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಥೆಗಳಲ್ಲಿ ಸೀಟು ದೊರೆತು ಆ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ್ದೂ ಇದೆ. ಇದಕ್ಕೆ ಕೆಲವು ವಿದ್ಯಾರ್ಥಿಗಳು ಸೀಟನ್ನು ಹಿಡಿದಿಟ್ಟು ಕೊಂಡು ಕೊನೆಯ ಕ್ಷಣದಲ್ಲಿ ಬಿಟ್ಟು ಕೊಟ್ಟಿದ್ದು ಕಾರಣ. ಹೀಗಾಗಿ ಸೀಟುಗಳನ್ನು ತ್ವರಿತವಾಗಿ ಹಂಚಿಕೆ ಮಾಡಿ ತಿಂಗಳೊಳಗೆ ಸೀಟು ಹಂಚಿಕೆ ಪ್ರಕ್ರಿಯೆ ಮುಗಿಸಬೇಕು ಎಂದು ಸಂಯೋಜಿತ ಸೀಟು ಹಂಚಿಕೆಯ ಕ್ರಮ ಕೈಗೊಂಡಿ ರುವುದಾಗಿ ಅಧಿಕಾರಿಗಳು ತಿಳಿಸುತ್ತಾರೆ.
Advertisement
ಸೆ.15ರೊಳಗೆ ಕೌನ್ಸೆಲಿಂಗ್ ಪ್ರಕ್ರಿಯೆಗೆ ತೆರೆ?ಆಗಸ್ಟ್ ತಿಂಗಳ 2ನೇ ವಾರದಲ್ಲಿ ಕೌನ್ಸೆಲಿಂಗ್ ಪ್ರಕ್ರಿಯೆ ಆರಂಭಗೊಳ್ಳುವ ಸಾಧ್ಯತೆಯಿದೆ. ಈ ಅವಧಿಯಲ್ಲಿ ಕೌನ್ಸೆಲಿಂಗ್ ಆರಂಭಗೊಂಡರೆ ಸೆ. 15ರ ಹೊತ್ತಿಗೆ ಸೀಟು ಹಂಚಿಕೆ ಮುಕ್ತಾಯಗೊಳ್ಳುವ ಸಂಭವವಿದೆ. ಇದೇ ವೇಳೆ, ಮೆಡಿಕಲ್‌ನ ಸೀಟ್ ಮ್ಯಾಟ್ರಿಕ್ಸ್ ಮಂಗಳವಾರ ಕೆಇಎ ಅಧಿಕಾರಿಗಳ ಕೈಸೇರಿದೆ. ಎಂಜಿನಿಯರಿಂಗ್ ಸೀಟ್ ಮ್ಯಾಟ್ರಿಕ್ಸ್ ಇನ್ನೂ ಕೆಇಎ ತಲುಪಿಲ್ಲ. ಎಂಜಿನಿಯರಿಂಗ್ ಸೀಟ್ ಮ್ಯಾಟ್ರಿಕ್ಸ್ ಕೈ ಸೇರಿದ ಬಳಿಕ ಕೌನ್ಸೆಲಿಂಗ್ ದಿನಾಂಕ ನಿಗದಿ ಮಾಡುತ್ತೇವೆ. ಬಹುತೇಕ ಶನಿವಾರದೊಳಗೆ ಕೌನ್ಸೆಲಿಂಗ್ ವೇಳಾಪಟ್ಟಿ ಪ್ರಕಟಿಸುವ ಸಂಭವವಿದೆ ಎಂದು ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ. ಸಂಯೋಜಿತ ಸೀಟು ಹಂಚಿಕೆ ಯಿಂದ ಕೌನ್ಸೆಲಿಂಗ್ ಪ್ರಕ್ರಿಯೆಯ ಸಮಯ ಉಳಿತಾಯವಾಗಲಿದೆ. ಈ ಹಿಂದೆ ಎರಡು ತಿಂಗಳು ನಡೆಯುತ್ತಿದ್ದ ಪ್ರಕ್ರಿಯೆ ಈ ವರ್ಷ ಒಂದೇ ತಿಂಗಳಲ್ಲಿ ಮುಕ್ತಾಯ ಗೊಳ್ಳುವ ನಿರೀಕ್ಷೆಯಿದೆ.
-ಎಸ್.ರಮ್ಯಾ, ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ರಾಕೇಶ್ ಎನ್.ಎಸ್.