Advertisement

ಇಂದಿನಿಂದ ಸಿಇಟಿ 3ನೇ ಸುತ್ತಿನ ಸೀಟು ಹಂಚಿಕೆ

11:28 PM Aug 15, 2019 | Team Udayavani |

ಬೆಂಗಳೂರು: ಎಂಜಿನಿಯರಿಂಗ್‌ ಹಾಗೂ ಆರ್ಕಿಟೆಕ್ಚರ್‌ ಕೋರ್ಸ್‌ಗಳ 2ನೇ ಮುಂದುವರಿದ ಸುತ್ತಿನಲ್ಲಿ ಹಂಚಿಕೆಯಾಗದೆ ಉಳಿದವರು ಹಾಗೂ ಪ್ರವೇಶ ಪಡೆಯದೇ ಇರುವ ಸೀಟುಗಳನ್ನು ಇನ್ನೊಂದು ಸುತ್ತಿನಲ್ಲಿ ಆನ್‌ಲೈನ್‌ ಮೂಲಕ ಹಂಚಿಕೆ ಮಾಡಲಾಗುತ್ತದೆ.

Advertisement

ಆ.7ರಂದು 2ನೇ ಮುಂದುವರಿದ ಸುತ್ತಿನ ಸೀಟು ಹಂಚಿಕೆ ನಡೆದಿದ್ದು ಆ.15ರವರೆಗೂ ಶುಲ್ಕ ಪಾವತಿಸಿ, ಕಾಲೇಜು ಪ್ರವೇಶಕ್ಕೆ ನೀಡಲಾಗಿತ್ತು. ಇಷ್ಟಾದರೂ ಹಂಚಿಕೆಯಾಗದೆ ಉಳಿದಿರುವ ಹಾಗೂ ವಿದ್ಯಾರ್ಥಿಗಳು ಪ್ರವೇಶ ಪಡೆಯದೆ ಇರುವ ಸೀಟುಗಳಿಗೆ 3ನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಆ.16ರಿಂದ ಆರಂಭವಾಲಿದೆ. ಆ.16ರ ಸಂಜೆ ಸೀಟ್‌ ಮ್ಯಾಟ್ರಿಕ್ಸ್‌ ಬಿಡುಗಡೆಯಾಗಲಿದೆ.

ಆ.19ರವರೆಗೂ ಆಪ್ಷನ್‌ ಎಂಟ್ರಿಗೆ ಅವಕಾಶ ನೀಡಲಾಗಿದೆ. ಆ.20ರ ಮಧ್ಯಾಹ್ನ ಸೀಟು ಹಂಚಿಕೆ ಫ‌ಲಿತಾಂಶ ಪ್ರಕಟಿಸಲಾಗುತ್ತದೆ. ಸೀಟು ಪಡೆದ ವಿದ್ಯಾರ್ಥಿಗಳು ನಿರ್ದಿಷ್ಟ ಶುಲ್ಕ ಪಾವತಿಸಿ, ಪ್ರವೇಶಪತ್ರ ಡೌನ್‌ಲೋಡ್‌ ಮಾಡಿಕೊಂಡು ಆ.23ರ ಸಂಜೆ 5.30ರೊಳಗೆ ಸಂಬಂಧಪಟ್ಟ ಕಾಲೇಜಿಗೆ ದಾಖಲಾಗಬೇಕೆಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next