Advertisement
ಮರಾಠವಾಡ ಪ್ರದೇಶ ದಲ್ಲಿ ಇರುವ ಮರಾಠಿ ಭಾಷಿಕರಿಗೆ “ಕುಣಬಿ’ ಸಮುದಾಯಕ್ಕೆ ಸೇರಿಸುವ ಬಗ್ಗೆ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಸಂದೀಪ್ ಶಿಂಧೆ ನೇತೃತ್ವದ ಸಮಿತಿಯ ಶಿಫಾರಸಿಗೆ ಆ ರಾಜ್ಯದ ಸಂಪುಟ ಮಂಗಳವಾರ ಅನುಮೋದನೆ ನೀಡಿದೆ. ಅದಕ್ಕೆ ಪೂರಕವಾಗಿ ಜಾತಿ ಪ್ರಮಾಣ ಪತ್ರ ನೀಡುವ ಪ್ರಕ್ರಿಯೆ ಆರಂಭವಾಗಿದೆ ಎಂದು ಮಹಾ ರಾಷ್ಟ್ರ ಸರಕಾರ ಹೇಳಿದೆ.ಸೋಮವಾರ ನಡೆದ ಹಿಂಸಾಕೃತ್ಯಗಳನ್ನು ಖಂಡಿ ಸಿದ ಮಹಾರಾಷ್ಟ್ರ ಡಿಸಿಎಂ ಮತ್ತು ಗೃಹ ಸಚಿವ ದೇವೇಂದ್ರ ಫಡ್ನವೀಸ್ “ಗಲಭೆಗೆ ಕಾರಣರಾದ 50 ರಿಂದ 55 ಮಂದಿಯನ್ನು ಗುರುತಿಸಲಾಗಿದೆ.
ಗಲಭೆಯ ಹಿನ್ನೆಲೆಯಲ್ಲಿ ಮರಾಠವಾಡ ವ್ಯಾಪ್ತಿಯ ಪರ್ಬನಿ, ಧಾರಾಶಿವ, ಲಾತೂರ್, ಜಲ್ನಾ, ನಾಂದೇಡ್ ಜಿಲ್ಲೆಗಳಲ್ಲಿ ಮಹಾರಾಷ್ಟ್ರ ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಈ ವ್ಯಾಪ್ತಿಯ 36 ಡಿಪೋಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಬಂದ್ ಮಾಡಲಾಗಿದೆ. ಅಪೂರ್ಣ ವರದಿ ಬೇಡ: ಮೀಸಲು ನೀಡುವ ಬಗ್ಗೆ ಅ.25ರಿಂದ ಹೋರಾಟ ನಡೆಸುತ್ತಿರುವ ಮನೋಜ್ ಜರಾಂಗೆ ಅವರು ನಿವೃತ್ತ ನ್ಯಾಯಮೂರ್ತಿ ಸಂದೀಪ್ ಶಿಂಧೆ ವರದಿ ಸ್ವೀಕಾರದ ಕ್ರಮಕ್ಕೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಸದ್ಯದ ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆಸಲು ರಾಜ್ಯ ವಿಧಾನಸಭೆಯ ವಿಶೇಷ ಅಧಿವೇಶನ ಕರೆಯಬೇಕು. ಸಮಿತಿ ನೀಡಿದ ಅಪೂರ್ಣ ವರದಿ ಯನ್ನು ಸರಕಾರ ಸ್ವೀಕರಿಸಿ, ಒಪ್ಪಿಗೆ ನೀಡಿದರೂ ಅದಕ್ಕೆ ನಾವು ಬೆಂಬಲ ಸೂಚಿಸುವುದಿಲ್ಲ ಎಂದು ಜಲಾ° ಜಿಲ್ಲೆಯ ಅಂತರ್‌ವಾಲಿ ಸಾರತಿ ಗ್ರಾಮದಲ್ಲಿ ಹೇಳಿದ್ದಾರೆ.
Related Articles
Advertisement
ಪರಿಸ್ಥಿತಿ ನಿಯಂತ್ರಣ: ಮೀಸಲಿಗೆ ಆಗ್ರಹಿಸಿ ಮಹಾ ರಾಷ್ಟ್ರದ ಭೀಡ್ ಜಿಲ್ಲೆಯಲ್ಲಿ ನಡೆದಿದ್ದ ಪ್ರತಿ ಭಟನೆ ಸ್ಥಿತಿ ಬಳಿಕ ಅಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಜಿಲ್ಲೆಯಲ್ಲಿ ಪರಿಸ್ಥಿತಿ ನಿಯಂತ್ರಣಕ್ಕಾಗಿ ಕರ್ಫ್ಯೂ ಜಾರಿ ಮಾಡ ಲಾಗಿದ್ದು, ಅಹಿತಕರ ಘಟನೆಗಳಿಗೆ ಸಂಬಂಧಿಸಿದಂತೆ 49 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಜಿಲ್ಲೆಯಲ್ಲಿ ಸದ್ಯಕ್ಕೆ ಅಹಿತಕರ ಘಟನೆಗಳು ನಡೆದಿಲ್ಲ ಎಂದು ಜಿಲ್ಲಾಡಳಿತ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ. ಜಿಲ್ಲೆಯಲ್ಲಿ ಮಂಗಳವಾರ ಹೊಸತಾಗಿ ಪ್ರತಿಭಟನೆ ನಡೆದಿಲ್ಲ. ಜಿಲ್ಲೆಯಲ್ಲಿ ಇಂಟರ್‌ನೆಟ್ ಸಂಪರ್ಕ ಕಡಿತಗೊಳಿಸಲಾಗಿದ್ದು, ಅದು ಮುಂದು ವರಿದಿದೆ ಎಂದು ಜಿಲ್ಲಾಧಿಕಾರಿ ದೀಪಾ ಮುಧೋಳ್ ಹೇಳಿದ್ದಾರೆ.
ಆದರೆ ಮೀಸಲು ನೀಡುವ ಬಗ್ಗೆ ಆಗ್ರಹಿಸಿ ಧಾರಾ ಶಿವ ಜಿಲ್ಲೆಯ ವಿವಿಧ ಭಾಗಗಳಲ್ಲಿ ಪ್ರತಿಭಟನೆ ಗಳು ನಡೆದ ಬಗ್ಗೆ ವರದಿಯಾಗಿವೆ. ಹೀಗಾಗಿ ಆ ಜಿಲ್ಲೆಯ ಕೆಲವು ಭಾಗಗಳಲ್ಲಿ ಕರ್ಫ್ಯೂ ಜಾರಿ ಮಾಡುವ ಬಗ್ಗೆ ಸ್ಥಳೀಯ ಆಡಳಿತ ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಸಂಸ್ಥೆಗಳನ್ನು ಮುಚ್ಚುವಂತೆ ಆದೇಶ ನೀಡಲಾಗಿದೆ.
ಪಂಚಾಯತ್ ಕಚೇರಿಗೆ ಬೆಂಕಿ: ಜಲ್ನಾ ಜಿಲ್ಲೆಯ ಗ್ರಾಮವೊಂದರಲ್ಲಿ ಪಂಚಾಯತ್ ಕಚೇರಿಯೊಂದಕ್ಕೆ ಕಿಡಿಗೇಡಿಗಳು ಸೋಮವಾರ ರಾತ್ರಿ ಬೆಂಕಿಹಚ್ಚಿದ್ದಾರೆ. ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ, ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಇದಲ್ಲದೆ ಜಿಲ್ಲೆಯ ಕೆಲವೆಡೆ ರೈಲುಗಳನ್ನು ತಡೆಯಲು ಯತ್ನಿಸಿದ ಘಟನೆಯೂ ನಡೆದಿದೆ. ರೈಲ್ವೇ ರಕ್ಷಣ ಪಡೆ (ಆರ್‌ಪಿಎಫ್)ಯ ಅಧಿಕಾರಿಗಳು ಮತ್ತು ಸಿಬಂದಿ ಸ್ಥಳಕ್ಕೆ ಧಾವಿಸಿ ಪ್ರತಿಭಟನಾಕಾರರನ್ನು ತೆರವುಗೊಳಿಸಿದ್ದಾರೆ.
ಸಂಸತ್‌ನ ವಿಶೇಷ ಅಧಿವೇಶನ ನಡೆಸಲು ಆಗ್ರಹಮೀಸಲು ಹೋರಾಟ ಹಿಂಸಾತ್ಮಕ ತಿರುವು ಪಡೆದುಕೊಂಡ ಬಗ್ಗೆ ಅದನ್ನು ನಿಭಾಯಿಸಿದ ಮಹಾರಾಷ್ಟ್ರ ಸರಕಾರದ ಕ್ರಮದ ಬಗ್ಗೆ ವಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ. ಮೀಸಲು ವಿಚಾರ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಂಸತ್‌ನ ವಿಶೇಷ ಅಧಿವೇಶನ ನಡೆಸಬೇಕು ಎಂದು ಕಾಂಗ್ರೆಸ್ ಮುಖಂಡ ವಿಜಯ ವಡೆಟ್ಟಿವಾರ್ ಹೇಳಿದ್ದಾರೆ. ಮಾಜಿ ಸಿಎಂ ಉದ್ಧವ್ ಠಾಕ್ರೆ ಮಾತನಾಡಿ ಸಂಸತ್‌ನ ವಿಶೇಷ ಅಧಿವೇಶನಕ್ಕೆ ಆಗ್ರಹಿಸಿದ್ದಾರೆ. ಮೀಸಲು ವಿಚಾರಕ್ಕೆ ಆಗ್ರಹಿಸಿ ಮಹಾರಾಷ್ಟ್ರವನ್ನು ಪ್ರತಿನಿಧಿಸುತ್ತಿರುವ ಕೇಂದ್ರ ಸಚಿವರು ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದ್ದಾರೆ. ಇದೇ ವೇಳೆ ಬುಧವಾರ ಮುಂಬಯಿಯಲ್ಲಿ ಮೀಸಲಾತಿ ಬಿಕ್ಕಟ್ಟು ವಿಚಾರದ ಬಗ್ಗೆ ಸರ್ವಪಕ್ಷಗಳ ಸಭೆ ನಡೆಯಲಿದೆ.