Advertisement

 ಶತಾಯುಷಿ ಶಾಲೆಯ ಛಾವಣಿ ಶಿಥಿಲ

04:26 PM Oct 25, 2017 | |

ಕಂಬಳಬೆಟ್ಟು: ವಿಟ್ಲಮುಟ್ನೂರು ಗ್ರಾಮದ ಕಂಬಳಬೆಟ್ಟು ಹಿ.ಪ್ರಾ. ಶಾಲೆಯು ಶತಮಾನೋತ್ಸವ ಆಚರಿಸುವ ಸಿದ್ಧತೆಯಲ್ಲಿದೆ. ಆದರೆ ಶಾಲೆಯ ಒಂದು ಕಟ್ಟಡದ ಛಾವಣಿ ಅಪಾಯಕಾರಿ ಸ್ಥಿತಿಯಲ್ಲಿದೆ. ಮಕ್ಕಳು, ಶಿಕ್ಷಕರು ಇದರೊಳಗೆ ಇರುವುದೇ ಅಪಾಯ ಎಂದು ಹೆತ್ತವರು ಭಯ ವ್ಯಕ್ತಪಡಿಸಿದ್ದಾರೆ.

Advertisement

ಛಾವಣಿಯ ಒಂದು ಮರದ ಪಕ್ಕಾಸು ಕೆಳಗೆ ಬಿದ್ದಿದೆ. ಇನ್ನೂ ಒಂದು ಬೀಳುವ ಹಂತದಲ್ಲಿದೆ. ಛಾವಣಿ ಪೂರ್ತಿಯಾಗಿ ಬೀಳುವ ಸಾಧ್ಯತೆಯಿದ್ದು, ಸದ್ಯ ಅಲ್ಲಿನ ತರಗತಿಯನ್ನು ಅದೇ ಕಟ್ಟಡದ ಮತ್ತೂಂದು ಭಾಗಕ್ಕೆ ವರ್ಗಾಯಿಸಲಾಗಿದೆ.

ಶಾಲೆಯ ಪ್ರವೇಶ ದ್ವಾರದ ಎಡ ಭಾಗದಲ್ಲಿರುವ ಕಟ್ಟಡ, ಛಾವಣಿ ಶಿಥಿಲಗೊಂಡಿದೆ. ಈ ಕಟ್ಟಡಕ್ಕೆ ಸುಮಾರು 40-50
ವರ್ಷಗಳಾಗಿರಬಹುದು. ಛಾವಣಿ ಮೇಲ್ಭಾಗದಲ್ಲಿ ಉಂಟಾಗಿರುವ ಏರುತಗ್ಗು ಗಳು ಅಪಾಯವನ್ನು ಸೂಚಿಸುತ್ತವೆ. ಪಕ್ಕಾಸುಗಳು ಶಿಥಿಲಗೊಂಡಿವೆ. ಗೋಡೆಯೂ ಸುಭದ್ರವಾಗಿಲ್ಲ. ಆದ್ದರಿಂದ ಅಪಾಯವನ್ನು ಅರಿತು, ಇಲಾಖೆಯ ಅಧಿಕಾರಿಗಳು ಶೀಘ್ರದಲ್ಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮಕ್ಕಳ ಹೆತ್ತವರು ಮತ್ತು ಪೋಷಕರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next