Advertisement
ಟಾಸ್ ಸೋತು ಬ್ಯಾಟಿಂಗ್‌ಗಿಳಿದ ಬಾಂಗ್ಲಾದೇಶ 49.4 ಓವರ್‌ಗಳಲ್ಲಿ 226 ರನ್ನಿಗೆ ಆಲೌಟಾದರೆ, ನ್ಯೂಜಿಲ್ಯಾಂಡ್ 36.1 ಓವರ್‌ಗಳಲ್ಲಿ ಕೇವಲ 2 ವಿಕೆಟ್ ನಷ್ಟಕ್ಕೆ 229 ರನ್ ಗಳಿಸಿ ಜಯಭೇರಿ ಬಾರಿಸಿದೆ. ನಾಯಕ ಕೇನ್ ವಿಲಿಯಮ್ಸನ್ 65 ರನ್, ರಾಸ್ ಟಯ್ಲರ್ 21 ರನ್ ಗಳಿಸಿ ಅಜೇಯರಾಗಿ ಉಳಿದಿರು.
ಗೆಲ್ಲಲು 227 ರನ್ ಗುರಿ ಬೆನ್ನಟ್ಟಿದ ನ್ಯೂಜಿಲ್ಯಾಂಡ್ ಮೊದಲ 3 ಓವರ್‌ಗಳಲ್ಲೇ 23 ರನ್ ಕಲೆ ಹಾಕಿತ್ತು. 14 ರನ್ ಗಳಿಸಿದ್ದ ಹೆನ್ರಿ ನಿಕೋಲ್ಸ್ ವಿಕೆಟ್ ಕಿತ್ತ ಮುಸ್ತಾಫಿಜುರ್ ರೆಹಮಾನ್ ಆರಂಭಿಕ ಜೋಡಿಯನ್ನು ಬೇರ್ಪಡಿಸುವಲ್ಲಿ ಯಶಸ್ವಿಯಾದರು. ಆ ಬಳಿಕ ಜತೆಯಾದ ಗಪ್ಟಿಲ್, ನಾಯಕ ವಿಲಿಯಮ್ಸನ್ ಜೋಡಿ ಬಾಂಗ್ಲಾ ಬೌಲರ್‌ಗಳ ಬೆವರಿಳಿಸುವಲ್ಲಿ ಯಶಸ್ವಿಯಾಯಿತು. ಅವರಿಬ್ಬರು 2ನೇ ವಿಕೆಟಿಗೆ 143 ರನ್ ಜತೆಯಾಟವಾಡಿದರು. ಗಪ್ಟಿಲ್ 88 ಎಸೆತಗಳಲ್ಲಿ 118 ರನ್ ಬಾರಿಸಿದರು. ಇದರಲ್ಲಿ 14 ಬೌಂಡರಿ, 4 ಸಿಕ್ಸರ್‌ಗಳು ಸೇರಿವೆ. ಇದು ಅವರ 16ನೇ ಶತಕವಾಗಿದ್ದು, ಈ ಋತುವಿನ 3ನೇ ಶತಕವಾಗಿದೆ. ಜನವರಿಯಲ್ಲಿ ಶ್ರೀಲಂಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಗಪ್ಟಿಲ್ 138 ರನ್ ಬಾರಿಸಿದ್ದರು. ಗಪ್ಟಿಲ್ ಔಟಾದ ವೇಳೆ ಕಿವೀಸ್ 2 ವಿಕೆಟಿಗೆ 188 ರನ್ ಗಳಿಸಿ ಗೆಲುವಿನ ಸನಿಹದಲ್ಲಿತು. ಅನಂತರ ಕೇನ್ ವಿಲಿಯಮ್ಸನ್ ನಾಯಕನ ಆಟವಾಡಿ ಅಜೇಯ 65 ರನ್ ಬಾರಿಸಿ ತಂಡಕ್ಕೆ ಸುಲಭ ಗೆಲುವು ತಂದುಕೊಟ್ಟರು. ಇದು ಅವರ 37ನೇ ಏಕದಿನ ಅರ್ಧಶತಕವಾಗಿದೆ. ಸತತ ಎರಡು ಶತಕ ಬಾರಿಸಿದ ಗಪ್ಟಿಲ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಕಿವೀಸ್ ಬೌಲರ್‌ಗಳ ನಿಖರ ದಾಳಿ ಯಿಂದಾಗಿ ಬಾಂಗ್ಲಾ ಆಟಗಾರರು ರನ್ ಗಳಿಸಲು ಒದ್ದಾಡಿದರು. ಮಾತ್ರ ವಲ್ಲದೇ ಆಗಾಗ್ಗೆ ವಿಕೆಟ್ ಕಳೆದು ಕೊಳ್ಳುತ್ತ ಒತ್ತಡಕ್ಕೆ ಸಿಲುಕು
ವಂತಾಯಿತು. ಆರಂಭಿಕರು ಬೇಗನೇ ಔಟಾದ ಕಾರಣ ಬಾಂಗ್ಲಾ ನಿಧಾನಗತಿಯ ಆರಂಭ ಪಡೆಯಿತು. ಇದರಿಂದಾಗಿ ಮೊದಲ 21 ಓವರ್‌ಗಳಲ್ಲಿ ತಂಡ 5 ವಿಕೆಟಿಗೆ 93 ರನ್ ಗಳಿಸಲಷ್ಟೇ ಶಕ್ತವಾಗಿತ್ತು.
Related Articles
Advertisement
ಸಂಕ್ಷಿಪ್ತ ಸ್ಕೋರ್: ಬಾಂಗ್ಲಾದೇಶ- 49.4 ಓವರ್‌ಗಳಲ್ಲಿ 226 (ಮಿಥುನ್ 57, ಸಬೀರ್ ರೆಹಮನ್ 43, ಫರ್ಗ್ಯುಸನ್ 43ಕ್ಕೆ 3, ಜೇಮ್ಸ್ ನಿಶಾಮ್ 21ಕ್ಕೆ 2, ಟಾಡ್ ಆಸ್ಟಲ್ 52ಕ್ಕೆ 2), ನ್ಯೂಜಿ ಲ್ಯಾಂಡ್- 36.1 ಓವರ್‌ಗಳಲ್ಲಿ 2 ವಿಕೆಟಿಗೆ 229 (ಗಪ್ಟಿಲ್ 118, ವಿಲಿಯಮ್ಸನ್ ಔಟಾಗದೆ 65, ಟಯ್ಲರ್ 21). ಪಂದ್ಯಶ್ರೇಷ್ಠ: ಮಾರ್ಟಿನ್ ಗಪ್ಟಿಲ್.