Advertisement

ಸೆಂಚುರಿಯನ್‌ಟೆಸ್ಟ್‌: ಚೇತರಿಸಿಕೊಂಡ ದಕ್ಷಿಣ ಆಫ್ರಿಕಾ

10:04 AM Dec 27, 2019 | Team Udayavani |

ಸೆಂಚುರಿಯನ್‌: ಪ್ರವಾಸಿ ಇಂಗ್ಲೆಂಡ್‌ ವಿರುದ್ಧ ಮೊದಲ್ಗೊಂಡ “ಬಾಕ್ಸಿಂಗ್‌ ಡೇ’ ಟೆಸ್ಟ್‌ ಪಂದ್ಯದಲ್ಲಿ ಕುಸಿತದಿಂದ ಪಾರಾದ ದಕ್ಷಿಣ ಆಫ್ರಿಕಾ 9 ವಿಕೆಟಿಗೆ 277 ರನ್‌ ಗಳಿಸಿದೆ.

Advertisement

ಡೀನ್‌ ಎಲ್ಗರ್‌ ಅವರನ್ನು ಮೊದಲ ಎಸೆತದಲ್ಲೇ ಕಳೆದುಕೊಂಡ ಆಫ್ರಿಕಾಕ್ಕೆ ಕೀಪರ್‌ ಕ್ವಿಂಟನ್‌ ಡಿ ಕಾಕ್‌ ರಕ್ಷಣೆ ಒದಗಿಸಿದರು. 6ನೇ ಕ್ರಮಾಂಕದಲ್ಲಿ ಆಡಲಿಳಿದ ಅವರು ಆಂಗ್ಲ ಬೌಲರ್‌ಗಳ ಮೇಲೆರಗಿ 95 ರನ್‌ ಬಾರಿಸಿದರು (128 ಎಸೆತ, 14 ಬೌಂಡರಿ). ಹಮ್ಜಾ 39, ಪ್ರಿಟೋರಿಯಸ್‌ 33 ರನ್‌ ಕೊಡುಗೆ ಸಲ್ಲಿಸಿದರು.

ಕರನ್‌ (57ಕ್ಕೆ 4), ಸ್ಟುವರ್ಟ್‌ ಬ್ರಾಡ್‌ (52ಕ್ಕೆ 3) ಇಂಗ್ಲೆಂಡಿನ ಯಶಸ್ವಿ ಬೌಲರ್‌ಗಳು.

ಆ್ಯಂಡರ್ಸನ್‌ 150 ಟೆಸ್ಟ್‌
ಇಂಗ್ಲೆಂಡಿನ ವೇಗಿ ಜೇಮ್ಸ್‌ ಆ್ಯಂಡರ್ಸನ್‌ ಪಾಲಿಗೆ ಇದು 150ನೇ ಟೆಸ್ಟ್‌ ಪಂದ್ಯವಾಗಿದೆ. ಇದರೊಂದಿಗೆ ಅವರು ಈ ಮೈಲುಗಲ್ಲು ನೆಟ್ಟ ವಿಶ್ವದ ಪ್ರಥಮ ಬೌಲರ್‌ ಎಂಬ ಹಿರಿಮೆಗೆ ಪಾತ್ರರಾದರು. ಕೋರ್ಟ್ನಿ ವಾಲ್ಶ್ (132) ಮತ್ತು ಕಪಿಲ್‌ದೇವ್‌ (131) ಅನಂತರದ ಸ್ಥಾನದಲ್ಲಿದ್ದಾರೆ.

ಈವರೆಗೆ 8 ಮಂದಿ ಕ್ರಿಕೆಟಿಗರು 150 ಟೆಸ್ಟ್‌ ಪಂದ್ಯಗಳನ್ನಾಡಿದ್ದು, ಇವರೆಲ್ಲರೂ ಬ್ಯಾಟ್ಸ್‌ ಮನ್‌ಗಳೇ ಆಗಿರುವುದೊಂದು ವಿಶೇಷ. ಇವರೆಂದರೆ ತೆಂಡುಲ್ಕರ್‌ (200), ಪಾಂಟಿಂಗ್‌ (168), ಸ್ಟೀವ್‌ ವೋ (168), ಕ್ಯಾಲಿಸ್‌ (166), ಚಂದರ್‌ಪಾಲ್‌ (164), ದ್ರಾವಿಡ್‌ (164), ಕುಕ್‌ (161) ಮತ್ತು ಬೋರ್ಡರ್‌ (156).

Advertisement

ಎಡವಿದ ಎಲ್ಗರ್‌
ಆರಂಭಕಾರ ಡೀನ್‌ ಎಲ್ಗರ್‌ ಪಂದ್ಯದ ಮೊದಲ ಎಸೆತದಲ್ಲೇ ಔಟಾಗುವ ಸಂಕಟಕ್ಕೆ ಸಿಲುಕಿದರು. ಈ ವಿಕೆಟ್‌ ಆ್ಯಂಡರ್ಸನ್‌ ಪಾಲಾಯಿತು. ಇದರೊಂದಿಗೆ “ಆ್ಯಂಡಿ’ ತಮ್ಮ 150ನೇ ಟೆಸ್ಟ್‌ ಪಂದ್ಯವನ್ನು ಸ್ಮರಣೀಯಗೊಳಿಸಿದರು.

ಎಲ್ಗರ್‌ ಪಂದ್ಯದ ಪ್ರಥಮ ಎಸೆತದಲ್ಲೇ ಔಟಾದ ದಕ್ಷಿಣ ಆಫ್ರಿಕಾದ ಕೇವಲ 4ನೇ ಕ್ರಿಕೆಟಿಗ. ಉಳಿದವರೆಂದರೆ ಜಿಮ್ಮಿ ಕುಕ್‌, ಎಡ್ಡಿ ಬಾರ್ಲೊ ಮತ್ತು ಗ್ಯಾರಿ ಕರ್ಸ್ಟನ್‌.

Advertisement

Udayavani is now on Telegram. Click here to join our channel and stay updated with the latest news.

Next