ಬೆಂಗಳೂರು: ಕನ್ನಡಿಗರ ಕೆನರಾ, ಕಾರ್ಪೊರೇಷನ್, ವಿಜಯಾ ಬ್ಯಾಂಕುಗಳ ಅಸ್ತಿತ್ವ ಕಸಿದ ಕೇಂದ್ರ ಸರ್ಕಾರ ಈಗ ಕೆಎಂಎಫ್ ಮೇಲೆ ಕಣ್ಣು ಹಾಕಿದೆ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಈ ಬಗ್ಗೆ ಸರಣಿ ಟ್ವಿಟ್ ಮಾಡಿರುವ ಕಾಂಗ್ರೆಸ್, ಬಿಜೆಪಿ ಎಂದರೆ ಭಸ್ಮಾಸುರ ಜನತಾ ಪಾರ್ಟಿ.ಭಸ್ಮಾಸುರ ತಲೆಯ ಮೇಲೆ ಕೈ ಇಟ್ಟರೆ ಭಸ್ಮವಾಗುತ್ತಿದ್ದರು. ಆದರೆ ಬಿಜೆಪಿಯವರು ಕಣ್ಣು ಹಾಕಿದರೆ ಸಾಕು ಭಸ್ಮವಾಗುತ್ತದೆ. ಕೆಎಂಎಫ್ ಉಳಿಸಲು ಕಾಂಗ್ರೆಸ್ ಬದ್ಧವಾಗಿದೆ ಎಂದು ಹೇಳಿದೆ.
ರೈತರ ಮೇಲೆ ಬಿಜೆಪಿ ಸರ್ಕಾರಕ್ಕೆ ಜನ್ಮ ಜನ್ಮಾಂತರದ ದ್ವೇಷ ಇದ್ದಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಕರ್ನಾಟಕವು ಬಿಜೆಪಿಯ ಎಟಿಎಂ ಎಂಬುದನ್ನು ಬಿಜೆಪಿಯವರೇ ಹೇಳಿದ್ದಾರೆ. ನಿರಾಣಿ ಮುಖ್ಯಮಂತ್ರಿ ಹುದ್ದೆಗೆ 2500 ಕೋಟಿ ರೂ. ನೀಡಿ ಮಂತ್ರಿಯಾದರು. ಸಚಿವ ಸ್ಥಾನಗಳು ಮಾರಾಟಗೊಂಡಿವೆ ಎಂದು ಯತ್ನಾಳ್ ಹೇಳುತ್ತಾರೆ.
ರಾಜಕೀಯ ಎಂದರೆ ನನಗೆ ಬಿಸಿನೆಸ್ ಎಂದಿರುವ ಕೇಂದ್ರ ಸಚಿವ ಅಮಿತ್ ಶಾ ಅವರು ರಾಜ್ಯಕ್ಕೆ ಬಂದಿದ್ದು, ಆಪರೇಷನ್ ಕಮಲದ ಮೂಲಕ ಮಾಡಿದ್ದ ಹೂಡಿಕೆಯ ಲಾಭಾಂಶ ಪಡೆದು ಹೋಗುವುದಕ್ಕಾ ಎಂದು ವಾಗ್ಧಾಳಿ ನಡೆಸಿದೆ.