Advertisement

ಸೋನಿಯಾ, ರಾಹುಲ್, ಪ್ರಿಯಾಂಕಾ ಎಸ್ ಪಿಜಿ ಭದ್ರತೆ ವಾಪಸ್, ಇನ್ಮುಂದೆ Z+ ಭದ್ರತೆ

09:31 AM Nov 09, 2019 | Team Udayavani |

ನವದೆಹಲಿ:ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ಪುತ್ರ ರಾಹುಲ್ ಗಾಂಧಿ ಹಾಗೂ ಪುತ್ರಿ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಗಾಂಧಿ ಕುಟುಂಬದ ಮೂವರ ಎಸ್ ಪಿಜಿ ಭದ್ರತೆಯನ್ನು ಹಿಂಪಡೆಯಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ವರದಿ ತಿಳಿಸಿದೆ.

Advertisement

ಎಸ್ ಪಿಜಿ ಭದ್ರತೆಯನ್ನು ಹಿಂಪಡೆದಿದ್ದು, ಮೂವರಿಗೂ ಸಿಆರ್ ಪಿಎಫ್ ಯೋಧರು ಝಡ್ ಪ್ಲಸ್ ಶ್ರೇಣಿಯ ಭದ್ರತೆಯನ್ನು ನೀಡಲಿದ್ದಾರೆ ಎಂದು ಗೃಹ ಸಚಿವಾಲಯ ಹೇಳಿದೆ.

ಗುಪ್ತಚರ ಇಲಾಖೆಯು ಗಣ್ಯ ವ್ಯಕ್ತಿಗಳ ಮೇಲೆ ಇರುವ ಬೆದರಿಕೆ ಕುರಿತ ಪುನರ್ ಪರಿಶೀಲನೆ ಬಳಿಕ ಗೃಹ ಸಚಿವಾಲಯ ನಡೆಸಿದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವರದಿ ವಿವರಿಸಿದೆ. ಗಾಂಧಿ ಕುಟುಂಬಕ್ಕೆ ಯಾವುದೇ ನೇರವಾದ ಬೆದರಿಕೆ ಇಲ್ಲ ಎಂಬ ವರದಿ ನೀಡಿದ ಹಿನ್ನೆಲೆಯಲ್ಲಿ ಕೇಂದ್ರ ಈ ನಿರ್ಧಾರ ತೆಗೆದುಕೊಂಡಿದೆ ಎಂದು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next