Advertisement

ವಿಚ್ಛೇದನಕ್ಕೆ ಕುಷ್ಠರೋಗ ಕಾರಣ ನೀಡುವಂತಿಲ್ಲ

06:00 AM Aug 02, 2018 | Team Udayavani |

ಹೊಸದಿಲ್ಲಿ: ವಿಚ್ಛೇದನ ಪಡೆಯಲು ಬಾಳಸಂಗಾತಿಗೆ ಕುಷ್ಠ ರೋಗವಿದೆ ಎಂಬ ಕಾರಣವನ್ನು ಇನ್ನು ನೀಡುವಂತಿಲ್ಲ. ಈ ಸಂಬಂಧ ಹೊಸ ಮಸೂದೆಗೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ವೈಯಕ್ತಿಕ ಕಾನೂನು (ತಿದ್ದುಪಡಿ) ಮಸೂದೆ 2018ರ ಅಡಿಯಲ್ಲಿ ಈ ವಿವರವನ್ನು ಸೇರಿಸಲಾಗಿದೆ. ಈ ಕಾನೂನು ರೂಪಿಸುವಾಗ ಕುಷ್ಠರೋಗವನ್ನು ಸಂಪೂರ್ಣವಾಗಿ ನಿವಾರಿಸುವ ಚಿಕಿತ್ಸೆ ಲಭ್ಯವಿರಲಿಲ್ಲ. ಹೀಗಾಗಿ ವಿಚ್ಛೇದನಚಕ್ಕೆ ಕಾರಣಗಳ ಪಟ್ಟಿಯಲ್ಲಿ ಕುಷ್ಠರೋಗವನ್ನೂ ಸೇರಿಸಲಾಗಿತ್ತು. ಆದರೆ ಈಗ ಕುಷ್ಠರೋಗದಿಂದ ವ್ಯಕ್ತಿ ಸಂಪೂರ್ಣ ಗುಣವಾಗಬಹುದಾದ್ದರಿಂದ ಕಾನೂನಿಗೆ ತಿದ್ದುಪಡಿ ತರಲು ನಿರ್ಧರಿಸಲಾಗಿದೆ.

Advertisement

96 ಸಾವಿರ ಕೋಟಿ ಸಂಗ್ರಹ: ಜುಲೈ ತಿಂಗಳಿನಲ್ಲಿ ಜಿಎಸ್‌ಟಿ 96,483 ಕೋಟಿ ರೂ. ಸಂಗ್ರಹವಾಗಿದೆ. ಇದು ಕಳೆದ ತಿಂಗಳಿಗಿಂತಲೂ ಹೆಚ್ಚಿನ 873 ಕೋಟಿ ರೂ. ಹೆಚ್ಚಾಗಿದೆ. ಅಲ್ಲದೆ ಜುಲೈನಲ್ಲಿ ಜಿಎಸ್‌ಟಿ ಸಲ್ಲಿಸಿದವರ ಸಂಖ್ಯೆಯೂ 66 ಲಕ್ಷಕ್ಕೆ ಏರಿಕೆಯಾಗಿದೆ. ಜೂನ್‌ನಲ್ಲಿ ಇದು 64.69  ಲಕ್ಷ ಆಗಿತ್ತು.  

ಸಂಪುಟ ಒಪ್ಪಿಗೆ: ಐಡಿಬಿಐ ಬ್ಯಾಂಕ್‌ನಲ್ಲಿ ಶೇ. 51ರಷ್ಟು ಹೂಡಿಕೆ ಮಾಡಲು ಎಲ್‌ಐಸಿ ಪ್ರಸ್ತಾವನೆಯನ್ನೂ ಸಂಪುಟ ಅನುಮೋದಿ ಸಿದೆ. ನಷ್ಟದಲ್ಲಿರುವ ಐಡಿಬಿಐ ಬ್ಯಾಂಕ್‌ನಲ್ಲಿ ಎಲ್‌ಐಸಿ ಪಾಲನ್ನು ಹೆಚ್ಚಿಸುವುದಕ್ಕೆ ಸಂಬಂಧಿಸಿದಂತೆ ಈಗಾಗಲೇ ವಿಮಾ ನಿಯಂತ್ರಕ ಪ್ರಾಧಿಕಾರ ಐಆರ್‌ಡಿಎ ಅನುಮೋದನೆ ನೀಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next