Advertisement

ರೈತರಿಂದಲೇ ಶೇ.40ರ ವರೆಗೆ‌ ಬೇಳೆ ಕಾಳುಗಳ ಖರೀದಿಗೆ ಕ್ರಮ

12:15 AM Sep 02, 2022 | Team Udayavani |

ಹೊಸದಿಲ್ಲಿ: ಆಹಾರ ಭದ್ರತೆಗೆ ಹೆಚ್ಚಿನ ಒತ್ತು ನೀಡಲು ಕೇಂದ್ರ ಸರಕಾರ ಬುಧವಾರ ನಡೆದ ಸಂಪುಟ ಸಭೆಯಲ್ಲಿ ಎರಡು ಪ್ರಮುಖ ನಿರ್ಣಯಗಳನ್ನು ಕೈಗೊಂಡಿದೆ.

Advertisement

ಕೇಂದ್ರ ಸರಕಾರ ರೈತರಿಂದ ನೇರವಾಗಿ ತೊಗರಿ, ಉದ್ದು, ಹೆಸರು ಕಾಳುಗಳನ್ನು ಶೇ. 40ರ ವರೆಗೆ ಖರೀದಿ ಮಾಡುವ ನಿಟ್ಟಿನಲ್ಲಿ ನಿರ್ಣಯ ಕೈಗೊಂಡಿದೆ. ಸದ್ಯ ಅದರ ಮಿತಿ ಶೇ. 25ರ ವರೆಗೆ ಮಾತ್ರ ಇತ್ತು. ಜತೆಗೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಗಳಿಗೆ ರಿಯಾಯಿತಿ ದರದಲ್ಲಿ ಕಡಲೆ ಕಾಳನ್ನು ಮಾರಾಟ ಮಾಡಲು ಸರಕಾರ ನಿರ್ಧರಿ ಸಿದೆ. ಕೆ.ಜಿ.ಗೆ 8 ರೂ. ರಿಯಾಯಿತಿ ನೀಡಲಾಗುವುದು.

ಉಕ್ರೇನ್‌ ಬಿಕ್ಕಟ್ಟಿನಿಂದಾಗಿ ದೇಶದಲ್ಲಿ ಆಹಾರ ಸಮಸ್ಯೆ ಉಂಟಾಗದಂತೆ ಸರಕಾರ ಮುನ್ನೆಚ್ಚರಿಕೆ ವಹಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.

ದೇಶದಲ್ಲಿಯೇ ನಿರ್ಮಾಣ: ಐಎಎಫ್ ಬಲ ಹೆಚ್ಚಿಸುವ ನಿಟ್ಟಿನಲ್ಲಿ ದೇಶದಲ್ಲಿಯೇ ಎಲ್‌ಸಿಎ- ಎಂಕೆ2 ಯುದ್ಧ ವಿಮಾನಗಳ ನಿರ್ಮಾಣಕ್ಕೆ ಅನುಮತಿ ನೀಡಲಾಗಿದೆ. ಈ ಯುದ್ಧವಿಮಾನದ ಸುಧಾರಿತ ಆವೃತ್ತಿ ಎಲ್‌ಸಿಎ- ಎಂಕೆ2 ನಿರ್ಮಾಣವಾಗಲಿದೆ. ಅದ ಕ್ಕೆಂದೇ ಸರಕಾರವು 10,000 ಕೋಟಿ ರೂ. ಬಿಡುಗಡೆ ಮಾಡಿದೆ. ಬೆಂಗಳೂರಿನಲ್ಲಿರುವ ಏರೋನಾಟಿಕಲ್‌ ಡೆವಲಪ್‌ಮೆಂಟ್‌ ಏಜೆನ್ಸಿ (ಎಡಿಎ) ನಿರ್ಮಿಸಲಿರುವ ಈ ಯುದ್ಧ ವಿಮಾನಗಳು ಬೇರೆ ಯುದ್ಧ ವಿಮಾನಗಳಿಗಿಂತ ಹೆಚ್ಚು ತೂಕದ ಯುದ್ದೋಪಕರಣಗಳನ್ನು ಹೊತ್ತೂಯ್ಯುವ ಸಾಮರ್ಥ್ಯ ಹೊಂದಿರಲಿವೆ. ಹೆಚ್ಚು ಸಾಮರ್ಥ್ಯದ ಎಂಜಿನ್‌, ರಾಡಾರ್‌, ಎಲೆಕ್ಟ್ರಾನಿಕ್ಸ್‌ ಇದರಲ್ಲಿ ಇರಲಿದೆ. ಇನ್ನೆರಡು ವರ್ಷಗಳಲ್ಲಿ ಮೊದಲ ಎಲ್‌ಸಿಎ- ಎಂಕೆ2 ಹಾರಾಟ ಆರಂಭಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next