ನವದೆಹಲಿ: ಅನುಮತಿ ಪಡೆಯದ ಹಿನ್ನೆಲೆಯಲ್ಲಿ ಮನೆ ಬಾಗಿಲಿಗೆ ಪಡಿತರ ವಿತರಿಸುವ ದೆಹಲಿ ಸರ್ಕಾರದ ಯೋಜನೆಯನ್ನು ರದ್ದುಗೊಳಿಸಿರುವುದಾಗಿ ತಿಳಿಸಿದೆ. ಕೇಜ್ರಿವಾಲ್ ನೇತೃತ್ವದ ಸರ್ಕಾರ ಈ ಯೋಜನೆಗೆ ಅನುಮತಿ ಪಡೆದಿರಲಿಲ್ಲ ಎಂದು ಹೇಳಿದೆ.
ಇದನ್ನೂ ಓದಿ:ಗೋವಾ : ಕಸ್ಟಮ್ ಅಧಿಕಾರಿಗಳು ಕಾರ್ಯಚರಣೆ : ಪ್ರಯಾಣಿಕನಿಂದ 57 ಲಕ್ಷ ರೂ ಮೌಲ್ಯದ ಬಂಗಾರ ವಶ
ದೆಹಲಿ ನಿವಾಸಿಗಳಲ್ಲಿನ ಫಲಾನುಭವಿಗಳಿಗೆ ಗೋಧಿ ಹುಡಿ ಮತ್ತು ಅಕ್ಕಿಯನ್ನು ಮನೆ ಬಾಗಿಲಿಗೆ ವಿತರಿಸುವ ರೇಷನ್ ಯೋಜನೆ ಇದಾಗಿದೆ ಎಂದು ವರದಿ ವಿವರಿಸಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಉದ್ದೇಶಿತ ಸಾರ್ವಜನಿಕ ವಿತರಣಾ ವ್ಯವಸ್ಥೆ(ಟಿಪಿಡಿಎಸ್)ಯನ್ನು ಗುರಿಯಾಗಿರಿಸಿಕೊಂಡು “ಮುಖ್ಯಮಂತ್ರಿ ಘರ್. ಘರ್ ರೇಷನ್ ಯೋಜನೆ(ಎಂಎಂಜಿಜಿಆರ್ ವೈ)ಯಡಿ ಇದನ್ನು ಘೋಷಿಸಲಾಗಿತ್ತು.
2013ರ ಫೆಬ್ರುವರಿಯಲ್ಲಿ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಈ ಯೋಜನೆ ಜಾರಿಯಿಂದ 72 ಲಕ್ಷ ಜನರಿಗೆ ಅನುಕೂಲ ಕಲ್ಪಿಸಿಕೊಡುವ ಗುರಿಯನ್ನು ಹೊಂದಿರುವುದಾಗಿ ತಿಳಿಸಿತ್ತು.
ಲಾಕ್ ಡೌನ್ ನಿಂದ ಮನೆಯ ಆದಾಯದ ಮೇಲೆ ಪರಿಣಾಮ ಬೀರುವ ಅಂಶವನ್ನು ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಘೋಷಿಸಿದ ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ 280 ಸರ್ಕಾರಿ ಶಾಲೆಗಳ ಮೂಲಕ ಫಲಾನುಭವಿಗಳಿಗೆ ಉಚಿತ ಪಡಿತರ ವಿತರಿಸಲಾಗುವುದು ಎಂದು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಗುರುವಾರ ತಿಳಿಸಿದ್ದರು.